Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
ನುಡಿನಮನ: ನರೇಂದ್ರ ಮೋದಿ, ಪ್ರಧಾನ ಮಂತ್ರಿ
Team Udayavani, Mar 29, 2024, 12:33 PM IST
ಕೋಲ್ಕತಾ ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾಗಿದ್ದ ಸ್ವಾಮಿ ಸ್ಮರಣಾನಂದ ಜೀ ಈಚೆಗೆ ಇಹಲೋಕ ತ್ಯಜಿಸಿದರು. ರಾಮಕೃಷ್ಣ ಮಠದ ಆಧ್ಯಾತ್ಮಿಕ ಕಾರ್ಯ, ಸಾಮಾಜಿಕ ಕಾರ್ಯಗಳಲ್ಲಿ ಸ್ಮರಣಾನಂದ ಜೀ ಅವರ ಕೊಡುಗೆ ಸ್ಮರಣೀಯ. ಇಂಥ ಸಂತರಿಂದಲೇ ತಾವು “ಜನಸೇವೆಯೇ ನಿಜವಾದ ಸೇವೆ’ ಎಂಬುದನ್ನು ಕಲಿತೆ ಎಂದು ಪ್ರಧಾನಿ ಮೋದಿ ಇಲ್ಲಿ ನೆನಪಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯ ಮಹಾ ಉತ್ಸವ, ಸಡಗರದ ನಡುವೆ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಅವರ ಅಗಲಿಕೆಯ ಸುದ್ದಿ ತಮ್ಮ ಮನ ಸ್ಸನ್ನು ಕೆಲವು ಕಾಲ ಸ್ತಬ್ಧಗೊಳಿಸಿತು. ಶ್ರೀಮದ್ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಭಾರತದ ಆಧ್ಯಾತ್ಮಿಕ ಪ್ರಜ್ಞೆಯ ಪ್ರವರ್ತಕರು ಮತ್ತು ಅವರ ನಿಧನದಿಂದ ನನಗೆ ವೈಯಕ್ತಿಕವಾಗಿ ನಷ್ಟವಾಗಿದೆ. ಕೆಲವು ವರ್ಷಗಳ ಹಿಂದೆ ಸ್ವಾಮಿ ಆತ್ಮಸ್ಥಾನಂದ ಜೀ ಅವರು ನಿಧನ ಹೊಂದಿದರು ಮತ್ತು ಈಗ ಸ್ವಾಮಿ ಸ್ಮರಣಾನಂದ ಜೀ ಅವರ ಶಾಶ್ವತ ನಿರ್ಗಮನ ಅನೇಕ ಜನರನ್ನು ದುಃಖೀತರನ್ನಾಗಿ ಮಾಡಿದೆ. ಕೋಟ್ಯಂತರ ಭಕ್ತರು, ಸಂತರು ಮತ್ತು ರಾಮಕೃಷ್ಣ ಮಠ ಹಾಗೂ ಮಿಷನ್‌ನ ಅನುಯಾಯಿಗಳ ಹೃದಯದಂತೆ ನನ್ನ ಹೃದ ಯವೂ ಸಹ ದುಃಖೀತವಾಗಿದೆ.
ಈ ತಿಂಗಳ ಆರಂಭದಲ್ಲಿ ನಾನು ಕೋಲ್ಕತಾಗೆ ಭೇಟಿ ನೀಡಿದ್ದಾಗ ಸ್ವಾಮಿ ಸ್ಮರಣಾನಂದ ಜೀ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದೆ. ಸ್ವಾಮಿ ಆತ್ಮಸ್ಥಾನಂದ ಜೀ ಅವರಂತೆ ಸ್ವಾಮಿ ಸ್ಮರಣಾನಂದ ಜೀ ಅವರು ಸಹ ಜಗತ್ತಿನಾದ್ಯಂತ ಅಚಾರ್ಯ ರಾಮಕೃಷ್ಣ ಪರಮಹಂಸ, ಮಾತಾ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಪಸರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ಕಳೆದ 2020ರ ಜನವರಿಯಲ್ಲಿ ಬೇಲೂರು ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನು ಸ್ವಾಮಿ ವಿವೇಕಾನಂದರ ಕೋಣೆಯಲ್ಲಿ ಧ್ಯಾನ ಮಾಡಿದ್ದೆ. ಭೇಟಿ ಕಾಲದಲ್ಲಿ ಸ್ವಾಮಿ ಆತ್ಮಸ್ಥಾನಂದ ಜೀ ಅವರ ಕುರಿತು ಸ್ವಾಮಿ ಸ್ಮರಣಾನಂದ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದ್ದೆ.
ನಾನು ಬೇಲೂರು ಮಠ ಮತ್ತು ರಾಮಕೃಷ್ಣ ಮಿಷನ್ ನೊಂದಿಗೆ ನಿಕಟವಾದ ಬಾಂಧವ್ಯ ಹೊಂದಿರು ವುದು ವಿಸ್ತೃತವಾಗಿ ಎಲ್ಲರಿಗೂ ತಿಳಿದಿದೆ. ಆಧ್ಯಾತ್ಮಿಕತೆಯ ಅನ್ವೇಷಕನಾಗಿ ನಾನು ವಿವಿಧ ಸಾಧು, ಸಂತರು ಮತ್ತು ಮಹಾತ್ಮರನ್ನು ಭೇಟಿ ಮಾಡಿದ್ದೇನೆ ಮತ್ತು ಐದು ದಶಕಗಳಲ್ಲಿ ಅನೇಕ ಸ್ಥಳಗಳಿಗೆ ತೆರಳಿದ್ದೇನೆ. ರಾಮಕೃಷ್ಣ ಮಠ ದಲ್ಲಿ ಆಧ್ಯಾತ್ಮಿಕವಾಗಿ ತಮ್ಮ ಬದುಕನ್ನು ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರಂತೆ ಪ್ರಮುಖವಾಗಿ ಸಮರ್ಪಿಸಿಕೊಂಡ ಬಗ್ಗೆ ತಮಗೆ ಮಾಹಿತಿ ಇದೆ.
ಅವರ ಪವಿತ್ರ ಆಲೋಚನೆಗಳು ಮತ್ತು ಜ್ಞಾನ ತಮ್ಮ ಮನಸ್ಸಿಗೆ ತೃಪ್ತಿ ನೀಡಿದೆ. ನನ್ನ ಜೀವನದ ಅತ್ಯಂತ ಮಹತ್ವದ ಅವಧಿಯಲ್ಲಿ ಇಂತಹ ಸಂತರು “ಜನಸೇವೆಯೇ ಪ್ರಭು ಸೇವೆ’ ಎಂಬ ನಿಜವಾದ ತತ್ತ್ವವನ್ನು ಕಲಿಸಿದ್ದಾರೆ. ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾ ನಂದ ಜೀ ಅವರಂತೆ ರಾಮಕೃಷ್ಣ ಮಿಷನ್’ ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬ ಧ್ಯೇಯವಾಕ್ಯ ಅಳಿಸಲಾಗದ ಉದಾಹರಣೆ ಯಾಗಿದೆ.
ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ರಾಮಕೃಷ್ಣ ಮಿಷನ್ ನ ಪ್ರಮುಖ ಕೆಲಸ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ರಾಮಕೃಷ್ಣ ಮಿಷನ್ ಭಾರತದ ಆಧ್ಯಾತ್ಮಿಕ ಜ್ಞಾನ, ಶೈಕ್ಷಣಿಕ ಸಶಕ್ತೀಕರಣ ಮತ್ತು ಮಾನವೀಯ ವಲಯದಲ್ಲಿ ಸೇವೆ ಸಲ್ಲಿಸುತ್ತಿದೆ. 1978ರಲ್ಲಿ ಬಂಗಾಲದಲ್ಲಿ ಪ್ರವಾ ಹದಿಂದ ಸಂಕಷ್ಟ ಎದುರಾದಾಗ ರಾಮಕೃಷ್ಣ ಮಿಷನ್‌ನ ಸ್ವಾರ್ಥ ರಹಿತ ಸೇವೆ ಪ್ರತಿಯೊಬ್ಬರ ಹೃದಯವನ್ನು ಗೆದ್ದಿದೆ.
2001ರಲ್ಲಿ ಕಛ್ ನಲ್ಲಿ ಭೂಕಂಪ ನವಾದಾಗ ತಮಗೆ ನೆನಪಿದೆ ಸ್ವಾಮಿ ಆತ್ಮಸ್ಥಾನಂದ ಜೀ ಅವರು ಮೊದಲು ತಮಗೆ ದೂರ ವಾಣಿ ಮೂಲಕ ಮಾತನಾಡಿದ ವ್ಯಕ್ತಿಯಾಗಿದ್ದರು ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸಾಧ್ಯತೆ ಯ ನೆರವು ನೀಡಲು ರಾಮಕೃಷ್ಣ ಮಿಷನ್ ಸಿದ್ಧವಾಗಿದೆ ಎಂದು ಹೇಳಿದ್ದರು. ಅವರ ಮಾರ್ಗ ದರ್ಶನದಲ್ಲಿ ರಾಮಕೃಷ್ಣ ಮಿಷನ್ ಭೂಕಂಪನದಿಂದ ತೊಂದರೆಗೀಡಾದ ಹಲವಾರು ಜನರಿಗೆ ನೆರವಾಯಿತು.
ವರ್ಷಗಳಿಂದ ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರು ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದು, ಇವರು ಸಾಮಾಜಿಕ ಸಶಕ್ತೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ದರು. ಈ ಮಹಾನ್ ವ್ಯಕ್ತಿಗಳ ಜೀವನವನ್ನು ಬಲ್ಲವರು ಖಂಡಿತವಾಗಿಯೂ ಈ ಸಂತರು ಆಧುನಿಕ ಶಿಕ್ಷಣ ಮತ್ತು ಮಹಿಳಾ ಸಶಕ್ತೀಕರಣದ ಬಗ್ಗೆ ಎಷ್ಟೊಂದು ಗಂಭೀರವಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.
ಅವರ ಅನೇಕ ಸ್ಫೂರ್ತಿದಾಯಕ ಗುಣಲಕ್ಷಣ ಗಳಲ್ಲಿ ನನ್ನನ್ನು ಹೆಚ್ಚು ಪ್ರಭಾವಿಸಿದ ಒಂದು ವಿಷಯವೆಂದರೆ ಸ್ವಾಮಿ ಆತ್ಮಸ್ಥಾನಂದ ಜೀ ಅವರ ಪ್ರತಿಯೊಂದು ಸಂಸ್ಕೃತಿ ಮತ್ತು ಪ್ರತಿಯೊಂದು ಸಂಪ್ರದಾಯದ ಮೇಲಿನ ಪ್ರೀತಿ ಮತ್ತು ಗೌರವ. ಈ ಕಾರಣದಿಂದ ಭಾರತದ ವಿವಿಧ ಭಾಗಗಳಿಗೆ ನಿರಂತರವಾಗಿ ಭೇಟಿ ನೀಡಿದೆ ಮತ್ತು ಹೆಚ್ಚು ಸಮಯವನ್ನು ಕಳೆದೆ. ಅವರು ಗುಜರಾತ್‌ನಲ್ಲಿ ನೆಲೆಸಿದ್ದಾಗ ಗುಜರಾತ್ ಭಾಷೆ ಕಲಿತರು. ಅವರು ನನ್ನೊಂದಿಗೂ ಸಹ ಇದೇ ಭಾಷೆಯಲ್ಲಿ ಮಾತನಾ ಡುತ್ತಿದ್ದರು ಮತ್ತು ಅವರ ಗುಜರಾತಿ ಭಾಷೆಯನ್ನು ಪ್ರೀತಿಯಿಂದ ಆಲಿಸುತ್ತಿದ್ದೆ.
ಭಾರತದ ಅಭಿವೃದ್ಧಿಯಾನದಲ್ಲಿ ನಮ್ಮ ತಾಯ್ನೆಲ ಹಲವಾರು ಸಂತರು ಮತ್ತು ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರಂತಹ ಶ್ರೀಗಳಿಂದ ಆಶೀರ್ವದಿಸಲ್ಪಟ್ಟಿದೆ. ಇವರೆಲ್ಲ ಸಾಮಾಜಿಕ ಬದಲಾವಣೆಗೆ ಕಿಡಿ ಹೊತ್ತಿಸಿ ದ್ದರು. ಸಮಾಜದ ಎಲ್ಲ ಆಯಾಮದ ಸವಾಲುಗಳನ್ನು ನಿವಾರಿಸಲು ಮತ್ತು ಸಾಮೂಹಿಕ ಸ್ಫೂರ್ತಿಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದ್ದರು. ಈ ತತ್ತ್ವಗಳು ಶಾಶ್ವತವಾಗಿವೆ ಮತ್ತು ಅಮೃತ ಕಾಲದ ಸಮಯದಲ್ಲಿ ನಾವು ವಿಕಸಿತ ಭಾರತ ವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿ ದಾಗ ನಮ್ಮ ಶಕ್ತಿಯ ಮೂಲವಾಗಿ ಇವು ಕಾರ್ಯ ನಿರ್ವಹಿಸುತ್ತವೆ.
ಇಡೀ ದೇಶದ ಪರವಾಗಿ ಇಂತಹ ಸಂತರ ಆತ್ಮಗಳಿಗೆ ಮತ್ತೂಮ್ಮೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ರಾಮಕೃಷ್ಣ ಮಿಷನ್‌ಗೆ ಸಂಬಂಧಿಸಿದ ಎಲ್ಲ ಜನರು ಅವರು ತೋರಿಸಿದ ಹಾದಿಯಲ್ಲಿ ಮುಂದೆ ಸಾಗುತ್ತಾರೆ ಎಂಬ ವಿಶ್ವಾಸ ತಮಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆ ಮೇಲೆ ತಾಲಿ ‘ಬ್ಯಾನ್’ !
Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!
International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?
New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.