BJP: ಕರ್ನಾಟಕದಲ್ಲಿ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬಹುದು: ಎಸ್‌.ಎಲ್‌. ಭೈರಪ್ಪ


Team Udayavani, Mar 29, 2024, 10:34 PM IST

BJP: ಕರ್ನಾಟಕದಲ್ಲಿ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬಹುದು: ಎಸ್‌.ಎಲ್‌. ಭೈರಪ್ಪ

ಮೈಸೂರು: ದೇಶದಲ್ಲಿ ಮತ್ತೂಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ರಾಜ್ಯದಲ್ಲಿ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಹಿರಿಯ ಸಾಹಿತಿ ಪ್ರೊ| ಎಸ್‌. ಎಲ್‌. ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಮತ್ತೆ ಪ್ರಧಾನಿ ಆಗಲು ದೇಶದಲ್ಲಿ ಉತ್ತಮ ವಾತಾವರಣವಿದೆ.  ಕರ್ನಾಟಕದಲ್ಲಿ ಸ್ವಲ್ಪ ವೋಟು ವಿಭಜನೆಯಾಗುವ ಸಾಧ್ಯತೆಗಳಿದ್ದರೂ,  ಬಿಜೆಪಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದರು.

ಗ್ಯಾರಂಟಿ ಯೋಜನೆಗೆ ಹಣವಿಲ್ಲ

ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ನೇತೃತ್ವದ ಸರಕಾರ ಪರಿಣಾಮಕಾರಿಯಾಗಿ ಇರಲಿಲ್ಲ. ಅಧಿಕಾರವನ್ನು ಹಿಡಿತಕ್ಕೆ ತೆಗೆದುಕೊಳ್ಳಲಾಗಲಿಲ್ಲ.  ಈಗಿನ ಸರಕಾರ ಅಧಿಕಾರಿಗಳ ಮೇಲೆ ಹಿಡಿತ ಹೊಂದಿದೆ. ಆದರೆ ಅವರು ಹೋಗುತ್ತಿರುವ ದಾರಿ ಸರಿಯಿಲ್ಲ. ಗ್ಯಾರಂಟಿ ಯೋಜನೆಗಳನ್ನು ನೀಡಿ ಅವರು ಜನಪ್ರಿಯ ಆಗಿರಬಹುದು. ಆದರೆ ಅದರಿಂದಾಗಿ ಸರಕಾರದಲ್ಲಿ ಹಣವಿಲ್ಲ. ಹೀಗಾಗಿಯೇ ರಾಜ್ಯ ಸರಕಾರದವರು ಕೇಂದ್ರವನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದರು.

ಭೈರಪ್ಪನವರ ಆಶೀರ್ವಾದ ಪಡೆದ ಯದುವೀರ್‌

ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಒಡೆಯರ್‌ ಅವರು ಶುಕ್ರವಾರ ಬೆಳಗ್ಗೆ  ಎಸ್‌.ಎಲ್‌.ಭೈರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಪ್ರತಾಪಸಿಂಹ ಡೈನಮಿಕ್‌ ಮ್ಯಾನ್‌, ಯದುವೀರ್‌ ಒಳ್ಳೆಯ ಅಭ್ಯರ್ಥಿ

ಸಂಸದ ಪ್ರತಾಪಸಿಂಹ ಡೈನಮಿಕ್‌ ಮ್ಯಾನ್‌. ಕಳೆದ ಹತ್ತು ವರ್ಷಗಳಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧಿಸಿದ್ದರು. ಅವರ ಬಳಿ ಹೋರಾಟದ ಕೆಚ್ಚು ಇದೆ.  ಈ ಬಾರಿ ಅವರಿಗೆ ಟಿಕೆಟ್‌ ತಪ್ಪಿದೆ. ಸಂಸದನಾದರೆ ಅಲ್ಲೇ ಕೇಂದ್ರೀಕೃತವಾಗಿರಬೇಕು. ಅದನ್ನು ಬಿಟ್ಟು ಮಾಡಲು ಬಹಳ ಕೆಲಸ ಇದೆ. ಪ್ರತಾಪಸಿಂಹ ಆ ಉತ್ಸಾಹದಲ್ಲೇ ಇದ್ದಾರೆ  ಎಂದು ಭೈರಪ್ಪ ಹೇಳಿದರು.

ಬಿಜೆಪಿ ಯದುವೀರ್‌ಗೆ ಟಿಕೆಟ್‌ ಕೊಟ್ಟಿರುವುದು ಒಳ್ಳೆಯದೇ ಆಗಿದೆ. ಯದುವೀರ್‌ ಹಿನ್ನೆಲೆ ನೋಡಿದಾಗ,  ಅವರು ಒಳ್ಳೆಯ ಅಭ್ಯರ್ಥಿಯಾಗಿದ್ದು, ಇವರಿಗೆ ಸ್ಥಾನಮಾನ ಕೊಟ್ಟರೆ ಉತ್ತಮವಾಗಿ ನಿಭಾಯಿಸುತ್ತಾರೆ ಎಂದನಿಸುತ್ತದೆ ಎಂದರು.

ಟಾಪ್ ನ್ಯೂಸ್

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

BYV

Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.