Kundapura: ಚುನಾವಣ ಅಕ್ರಮ ತಡೆಗೆ ಕಡಲಿನಲ್ಲೂ ಕಣ್ಗಾವಲು
ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ನಿಗಾ ; ನಿತ್ಯ ಕನಿಷ್ಠ 4 ಗಂಟೆ ಗಸ್ತು
Team Udayavani, Mar 30, 2024, 10:15 AM IST
ಕುಂದಾಪುರ: ಸಮುದ್ರ ಮಾರ್ಗವಾಗಿಯೂ ಚುನಾವಣ ಅಕ್ರಮಗಳನ್ನು ಎಸಗುವ ಸಾಧ್ಯತೆ ಇರುವುದರಿಂದ ರಾಜ್ಯದ ಕರಾವಳಿ ಕಾವಲು ಪಡೆಯು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ನಿಗಾ ವಹಿಸಿದೆ. ಕರಾವಳಿಯ 3 ಜಿಲ್ಲೆಗಳ 320 ಕಿ.ಮೀ. ವ್ಯಾಪ್ತಿಯಲ್ಲಿ 13 ಬೋಟ್‌ಗಳಲ್ಲಿ ದಿನಕ್ಕೆ ಕನಿಷ್ಠ 4 ಗಂಟೆ ಗಸ್ತು (ಪ್ಯಾಟ್ರೋಲಿಂಗ್) ನಡೆಸಲಾಗುತ್ತಿದೆ.
ರಸ್ತೆ ಮಾರ್ಗವಾಗಿ ಮಾತ್ರವಲ್ಲದೆ ಸಮುದ್ರದ ಮೂಲಕವೂ ಮತದಾರರಿಗೆ ಕೊಡಲು ಹಣ, ಮದ್ಯ, ಇನ್ನಿತರ ಉಡುಗೊರೆ ಗಳನ್ನು ಸಾಗಿಸುವ ಸಾಧ್ಯತೆ ಇರುವುದರಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸರು ಕಡಲಿನಲ್ಲಿ ಮುಂಜಾಗ್ರತೆ ವಹಿಸಿದ್ದಾರೆ.
ರ್‍ಯಾಂಡಮ್ ತಪಾಸಣೆ: ಕರಾವಳಿಯ 3 ಜಿಲ್ಲೆಗಳಲ್ಲಿ 115 ಅಧಿಕೃತ ಹಾಗೂ 44 ಅನಧಿಕೃತ ಮೀನು ಇಳಿಸುವ ತಂಗುದಾಣಗಳಿವೆ. ಇಲ್ಲಿಗೆ ಬರುವ ಬೋಟು, ದೋಣಿಗಳ ಮೇಲೆ ನಿಗಾ ಇಡಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 29, ಉಡುಪಿಯಲ್ಲಿ 34 ಹಾಗೂ ಉ.ಕ.ದಲ್ಲಿ 96 ಫಿಶ್ ಲ್ಯಾಂಡಿಂಗ್ ಪಾಯಿಂಟ್ ಗಳಿವೆ. ಮಂಗಳೂರು, ಮಲ್ಪೆ, ಗಂಗೊಳ್ಳಿ, ಮರವಂತೆ, ಹೆಜಮಾಡಿ, ಶಿರೂರು, ಕಾರವಾರ, ಹೊನ್ನಾವರ, ಭಟ್ಕಳ, ಬೇಲೆಕೇರಿ, ತದಡಿ ಪ್ರಮುಖವಾಗಿವೆ. ಇದಿಷ್ಟೇ ಅಲ್ಲದೆ ಸಮುದ್ರದಲ್ಲಿ ಗಸ್ತು ತಿರುಗುವ ಕರಾವಳಿ ಕಾವಲು ಪಡೆಯ ಪೊಲೀಸರು ಸಹ ರ್‍ಯಾಂಡಮ್ ಆಗಿ ಬೋಟು, ದೋಣಿಗಳನ್ನು ತಪಾಸಣೆ ಮಾಡುತ್ತಿದ್ದಾರೆ.
13 ಬೋಟ್‌ಗಳಿಂದ ನಿತ್ಯ ಗಸ್ತು
ಒಟ್ಟು 12 ಕರಾವಳಿ ಕಾವಲು ಪಡೆ ಠಾಣೆಗಳ ದ.ಕ. 1, ಉಡುಪಿ 3 ಹಾಗೂ ಉ.ಕ.ದಲ್ಲಿ 9 ಸೇರಿ ಒಟ್ಟು 13 ಬೋಟುಗಳಿವೆ. ಮಲ್ಪೆಯಲ್ಲಿ ಮಾತ್ರ ಹೆಚ್ಚುವರಿ ಬೋಟಿದೆ. ಕಾಸರಗೋಡು ಗಡಿಯಿಂದ ಕಾರವಾರದವರೆಗಿನ ರಾಜ್ಯದ 320 ಕಿ.ಮೀ. ಕರಾವಳಿಯಲ್ಲಿ ನಿತ್ಯ ದಿನದಲ್ಲಿ 4 ಗಂಟೆ ಕರಾವಳಿ ಕಾವಲು ಪಡೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಗೋವಾದಿಂದ ಮದ್ಯ ಸಾಗಾಟ ಪತ್ತೆ
ಚುನಾವಣ ನೀತಿ ಸಂಹಿತೆ ಆರಂಭವಾದ ಬಳಿಕ ಸಮುದ್ರದಲ್ಲಿ ಅಕ್ರಮ ಎಸಗಿರುವ ಮೊದಲ ಪ್ರಕರಣ ಎರಡು ದಿನದ ಹಿಂದೆ ಪತ್ತೆಯಾಗಿದೆ. ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಬೋಟನ್ನು ಕಾರವಾರದಲ್ಲಿ ಕಾವಲು ಪಡೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ಬಾರಿಯೂ ಕಾರವಾರದಲ್ಲಿ ಬೋಟ್ ಮೂಲಕ ಅಕ್ರಮವಾಗಿ ಮದ್ಯ ಸಾಗಾಟ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಫಿಶ್ ಲ್ಯಾಂಡಿಂಗ್ ಪಾಯಿಂಟ್ ಗಳಲ್ಲಿ ನಿತ್ಯವೂ ನಿಗಾ ವಹಿಸಲಾಗುತ್ತಿದೆ. ಇದಲ್ಲದೆ ಸಮುದ್ರದಲ್ಲಿ ಗಸ್ತು ತಿರು ಗುವ ವೇಳೆಯೂ ರ್‍ಯಾಂಡಮ್ ತಪಾಸಣೆಯೂ ಮಾಡ ಲಾಗುತ್ತಿದೆ. ಗೋವಾ ಗಡಿ ಭಾಗದಲ್ಲಿ ಮಾತ್ರ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ನಿತ್ಯ ಪ್ಯಾಟ್ರೋಲಿಂಗ್ ಮಾಡಲಾ ಗುತ್ತಿದೆ. – ಮಿಥುನ್ ಎಚ್.ಎನ್. ಕರಾವಳಿ ಕಾವಲು ಪಡೆ ಎಸ್ಪಿ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್‌ಗ್ರೀಸ್ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Shiroor: ಡಿವೈಡರ್‌ಗೆ ಕಾರು ಢಿಕ್ಕಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.