GT vs SRH: ಗುಜರಾತ್‌ಗೆ ಹೈದರಾಬಾದ್ ಟಾಸ್ಕ್
Team Udayavani, Mar 31, 2024, 7:30 AM IST
ಅಹ್ಮದಾಬಾದ್: ಮೊನ್ನೆಯಷ್ಟೇ ಐಪಿಎಲ್ ಇತಿ ಹಾಸದಲ್ಲೇ ಅತ್ಯಧಿಕ ರನ್ ಪೇರಿಸಿ ದಾಖಲೆಗಳನ್ನೆಲ್ಲ ಗುಡಿಸಿ ಹಾಕಿದ ಸನ್‌ರೈಸರ್ ಹೈದರಾಬಾದ್ ಮುಂದಿನ ಪಂದ್ಯದಲ್ಲಿ ಹೇಗೆ ಆಡೀತು ಎಂಬ ಕುತೂಹಲ
ಸಹಜ. ಇದಕ್ಕೆ ರವಿವಾರ ಸಂಜೆ ಉತ್ತರ ಲಭಿಸಲಿದೆ. ಪ್ಯಾಟ್ ಕಮಿನ್ಸ್ ಪಡೆ ಅಹ್ಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದ್ದು, ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಎರಡೂ ಸಮಾನ ಸಾಧನೆಗೈದ ತಂಡಗಳು. ಗುಜರಾತ್ ಟೈಟಾನ್ಸ್ ಅಹ್ಮದಾಬಾದ್‌ನಲ್ಲಿ ಮುಂಬೈಗೆ ಸೋಲುಣಿಸಿದರೆ, ಚೆನ್ನೈಗೆ ಹೋಗಿ ಎಡವಿತ್ತು. ಇನ್ನೊಂದೆಡೆ ಸನ್‌ರೈಸರ್ ಕೋಲ್ಕತಾದಲ್ಲಿ ಕೆಕೆಆರ್‌ಗೆ ಶರಣಾದ ಬಳಿಕ ತವರಲ್ಲಿ ಮುಂಬೈ ಮೇಲೆ ಸವಾರಿ ಮಾಡಿ ಇತಿಹಾಸ ನಿರ್ಮಿಸಿತ್ತು.
ಬ್ಯಾಟಿಂಗ್ ಬಲಾಬಲದ ಲೆಕ್ಕಾಚಾರದಲ್ಲಿ ಗುಜರಾತ್ ಪಡೆ ಹೈದರಾಬಾದ್‌ಗೆ ಸಾಟಿಯಲ್ಲ. ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮ, ಹೆನ್ರಿಚ್ ಕ್ಲಾಸೆನ್ ಅಬ್ಬರಿಸಿದ ರೀತಿಗೆ ಕೇವಲ ಮುಂಬೈ ಮಾತ್ರವಲ್ಲ, ಕೂಟದ ಅಷ್ಟೂ ತಂಡಗಳು ದಂಗಾ ಗಿದ್ದವು. ಹೈದರಾಬಾದ್ ಬ್ಯಾಟಿಂಗ್ ಸರದಿಯಲ್ಲಿ ಇನ್ನೂ ಸಾಕಷ್ಟು ಮಂದಿ ಪ್ರಬಲರಿದ್ದಾರೆ. ಅಗರ್ವಾಲ್, ಮಾರ್ಕ್‌ರಮ್, ಅಬ್ದುಲ್ ಸಮದ್ ಕೂಡ ಅಪಾಯಕಾರಿಗಳೇ.
ಗುಜರಾತ್ ಬ್ಯಾಟಿಂಗ್ ಸರದಿ ಯಲ್ಲಿ ಒಂದಿಬ್ಬರಾದರೂ ಬಿರುಸಿನ ಆಟಕ್ಕೆ ಇಳಿಯಬೇಕಿದೆ. ಇಲ್ಲಿ ಗಿಲ್, ಸಾಹಾ, ಸಾಯಿ ಸುದರ್ಶನ್, ಕೃಣಾಲ್ ಪಾಂಡ್ಯ, ತೆವಾಟಿಯ, ಮಿಲ್ಲರ್ ಇದ್ದಾರೆ. ತವರಲ್ಲಿ ಮಿಂಚಲು ಇವರಿಗೆಲ್ಲ ಇದು ಮತ್ತೂಂದು ಅವಕಾಶ.
ಎರಡೂ ತಂಡಗಳ ಬೌಲಿಂಗ್ ವಿಭಾಗ ಸಾಮಾನ್ಯ. ಹೈದರಾ ಬಾದ್ ದಾಖಲೆ ಮೊತ್ತ ಪೇರಿ ಸಿಯೂ ಮುಂಬೈಗೆ 246 ರನ್ ಬಿಟ್ಟುಕೊಟ್ಟಿತ್ತು. ಉರುಳಿಸಿದ್ದು ಐದೇ ವಿಕೆಟ್. ಭುವನೇಶ್ವರ್, ಉನಾದ್ಕತ್, ಶಾಬಾಜ್, ಮಲಿಕ್, ಮಾರ್ಕಂಡೆ ಅವರೆಲ್ಲ ಸಿಕ್ಕಾಪಟ್ಟೆ ದುಬಾರಿಯಾಗಿದ್ದರು.
ಕಳೆದ ಪಂದ್ಯದಲ್ಲಿ ಚೆನ್ನೈಗೆ 206 ರನ್ ಬಿಟ್ಟುಕೊಟ್ಟದ್ದು ಗುಜರಾತ್ ಬೌಲಿಂಗ್ ಹಿನ್ನಡೆಗೆ ಸಾಕ್ಷಿ. ಉಮೇಶ್ ಯಾದವ್, ಅಜ್ಮತುಲ್ಲ, ರಶೀದ್ ಖಾನ್, ಸಾಯಿ ಕಿಶೋರ್, ಜಾನ್ಸನ್, ಮೋಹಿತ್ ಶರ್ಮ ತವರಿನ ಅಂಗಳದಲ್ಲಿ ಮ್ಯಾಜಿಕ್ ಮಾಡಿದರೆ ಗುಜರಾತ್ ಮೇಲುಗೈಯನ್ನು ನಿರೀಕ್ಷಿಸಲಡ್ಡಿಯಿಲ್ಲ.
ಪಿಚ್ ರಿಪೋರ್ಟ್ :
ಮೂಲತಃ ಇಲ್ಲಿನ ಪಿಚ್ ಬ್ಯಾಟರ್‌ಗಳಿಗೆ ಪ್ರಶಸ್ತ. ಆದರೆ ಮೊದಲ ಪಂದ್ಯದ ವೇಳೆ ಬೌಲರ್‌ಗಳಿಗೂ ನೆರವು ನೀಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ತಂಡದ ಎವರೇಜ್ ಸ್ಕೋರ್ 170 ರನ್. ಚೇಸಿಂಗ್ ಕಠಿನವೇನಲ್ಲ.
ಸಂಭಾವ್ಯ ತಂಡಗಳು :
ಗುಜರಾತ್: ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್ ಸಾಹಾ, ಅಜ್ಮತುಲ್ಲ ಒಮರ್‌ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯ, ರಶೀದ್ ಖಾನ್, ಆರ್. ಸಾಯಿ ಕಿಶೋರ್, ಉಮೇಶ್ ಯಾದವ್, ಮೋಹಿತ್ ಶರ್ಮ, ಸ್ಪೆನ್ಸರ್ ಜಾನ್ಸನ್.
ಹೈದರಾಬಾದ್: ಅಗರ್ವಾಲ್, ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮ, ಐಡನ್ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಾಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ , ಮಾಯಾಂಕ್ ಮಾರ್ಕಂಡೆ, ಜೈದೇವ್ ಉನಾದ್ಕತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.