PM Modi ರಾಷ್ಟ್ರಪತಿಗಳಿಗೆ ಘೋರ ಅಗೌರವ ತೋರಿದ್ದಾರೆ: ಕಾಂಗ್ರೆಸ್ ವಾಗ್ದಾಳಿ
Team Udayavani, Mar 31, 2024, 10:07 PM IST
ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಎಲ್ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳಿಗೆ ಘೋರ ಅಗೌರವ ತೋರಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಭಾನುವಾರ ದೆಹಲಿಯ ಅಡ್ವಾಣಿ ನಿವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ಪ್ರದಾನ ಮಾಡಿದರು. ಔಪಚಾರಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಖರ್, ರಕ್ಷಣ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ ಕೆ ಅಡ್ವಾಣಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಭಾರತ ರತ್ನ ನೀಡುತ್ತಿರುವ ಚಿತ್ರಗಳನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರಗಳಲ್ಲಿ, ಅಡ್ವಾಣಿ ಮತ್ತು ಮೋದಿ ಅವರು ಕುರ್ಚಿಗಳ ಮೇಲೆ ಕುಳಿತಿದ್ದು, ರಾಷ್ಟ್ರಪತಿ ಮುರ್ಮು ಅವರು ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರಿಗೆ ನಿಂತು ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ.
ರಾಮ್ಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಮೈತ್ರಿ ಕೂಟದ ಸಮಾವೇಶದಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಈ ವಿಷಯವನ್ನು ಪ್ರಸ್ತಾಪಿಸಿ, ಪ್ರಧಾನಿ ಮೋದಿ ರಾಷ್ಟ್ರಪತಿಗಳ ಗೌರವಕ್ಕೆ ಸಹ ಎದ್ದು ನಿಲ್ಲಲಿಲ್ಲ. ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆಯಿಲ್ಲ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್ ಹನುಮಂತ ಪ್ರತಿಮೆ ಅನಾವರಣ
ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ
MUST WATCH
ಹೊಸ ಸೇರ್ಪಡೆ
Ajekar Case: ಆರೋಪಿ ದಿಲೀಪ್ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು
Chikkamagaluru: ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
ಗಜೇಂದ್ರಗಡ: ವೀರಾಪುರದಲ್ಲಿ ಅಭಿವೃದ್ಧಿ ಮರೀಚಿಕೆ
Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.