OTT release: ಯುವಮನ ಗೆದ್ದ ಸೂಪರ್ ಹಿಟ್ ʼಪ್ರೇಮಲುʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Team Udayavani, Apr 1, 2024, 1:31 PM IST
ಕೊಚ್ಚಿ: ಈ ವರ್ಷ ಮಾಲಿವುಡ್ ಸಿನಿರಂಗದಲ್ಲಿ ದೊಡ್ಡ ಹಿಟ್ ಆದ ʼಪ್ರೇಮಲುʼ ಸಿನಿಮಾ ಓಟಿಟಿ ರಿಲೀಸ್ ಗೆ ಸಿದ್ದವಾಗಿದೆ.
ನಸ್ಲೆನ್, ಮಮಿತಾ ಬೈಜು ಅಭಿನಯದ ʼಪ್ರೇಮಲುʼ ಸಿನಿಮಾ ವರ್ಲ್ಡ್ ವೈಡ್ 135 ಕೋಟಿ ರೂ. ಕಮಾಯಿ ಮಾಡಿದೆ. ಆ ಮೂಲಕ ಮಾಲಿವುಡ್ ನಲ್ಲಿ ಹಿಟ್ ಸಾಲಿಗೆ ಸೇರಿದೆ. ರೊಮ್ಯಾಂಟಿಕ್ ಕಂ ಕಾಮಿಡಿ ಕಥಾಹಂದರದ ಚಿತ್ರಕ್ಕೆ ಯುವ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು.
ಗಿರೀಶ್ ಎ.ಡಿ. ನಿರ್ದೇಶನದ ಈ ಸಿನಿಮಾಕ್ಕೆ ಸಿನಿಮಾಕ್ಕೆ ಬೇಡಿಕೆ ಹೆಚ್ಚಾದ ಕಾರಣ ತೆಲುಗಿನಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಟಾಲಿವುಡ್ ನಲ್ಲೂ ʼಪ್ರೇಮಲುʼ ಗೆ ಪ್ರಶಂಸೆ ವ್ಯಕ್ತವಾಗಿತ್ತು. ಫೆಬ್ರವರಿ 9ರಂದು ತೆರಕಂಡ ಸಿನಿಮಾ ಇದೀಗ ಓಟಿಟಿ ರಿಲೀಸ್ ಗೆ ಸಿದ್ಧವಾಗಿದೆ.
ಲೇಟೆಸ್ಟ್ ಮಾಹಿತಿಯ ಪ್ರಕಾರ ಇದೇ ಏಪ್ರಿಲ್ 12 ರಿಂದ ʼಪ್ರೇಮಲುʼ ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮ್ ಆಗಲಿದೆ. ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ಕನ್ನಡ ಹಾಗೂ ಹಿಂದಿ ವರ್ಷನ್ ಬಗ್ಗೆ ಸದ್ಯಕ್ಕೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ.
ಇನ್ನೊಂದೆಡೆ ತೆಲುಗಿನಲ್ಲಿ ʼಆಹಾʼ ಓಟಿಟಿಯಲ್ಲಿ ʼಪ್ರೇಮಲುʼ ಪ್ರತ್ಯೇಕವಾಗಿ ಏ.12 ರಂದೇ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.