Shirva; ಮೂಡುಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನದಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ
Team Udayavani, Apr 1, 2024, 5:20 PM IST
ಶಿರ್ವ: ಐತಿಹಾಸಿಕ ಹಿನ್ನೆಲೆಯಿರುವ ಶಿರ್ವ ಮೂಡುಮಟ್ಟಾರು ಶ್ರೀ ಬಬ್ಬರ್ಯ ಪರಿವಾರ ಸಾನಿಧ್ಯಗಳ ನವೀಕೃತ ಶಿಲಾಮಯ ಗರ್ಭಗೃಹ ಸಮರ್ಪಣೆ, ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವವು ಎಲ್ಲೂರು ಸೀಮೆಯ ಆಗಮ ಪಂಡಿತ ವೇ|ಮೂ|ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ ವೇ|ಮೂ| ಕುತ್ಯಾರು ಕೇಂಜ ಭಾರ್ಗವ ತಂತ್ರಿ ಮತ್ತು ವೇ|ಮೂ| ರಘುಪತಿ ಗುಂಡು ಭಟ್ ಅವರ ಪೌರೋಹಿತ್ಯದಲ್ಲಿ ಎ.1 ರಂದು ನಡೆಯಿತು.
ಮಾ. 31ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸೋಮವಾರ ಬೆಳಗ್ಗೆ ಪುಣ್ಯಾಹ, ಗಣಯಾಗ, ಶಿಖರ ಪ್ರತಿಷ್ಠೆ, 108 ಕಲಶಾರಾಧನೆ, ಅಧಿವಾಸ ಹೋಮ, ಶ್ರೀನಂದಿಗೋಣ, ಶ್ರೀ ಬಬ್ಬರ್ಯ, ಶ್ರೀ ರಕ್ತೇಶ್ವರಿ, ನೀಚ ದೈವಗಳ ಪುನಃಪ್ರತಿಷ್ಠೆ, ಜೀವಕಲಶಾಭಿಷೇಕ ನಡೆಯಿತು. 10-30ರ ಶುಭಲಗ್ನದಲ್ಲಿ ಬ್ರಹ್ಮಕಲಷಾಭಿಷೇಕ, ಮಹಾಪೂಜೆ, ಬಬ್ಬರ್ಯ ದೈವ ಸಂದರ್ಶನ, ಗರ್ಭಗೃಹ ಪ್ರವೇಶ, ಪಲ್ಲಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು. ಬಳಿಕ ಭಾಗವತ ಶ್ರೀ ರಾಘವೇಂದ್ರ ಆಚಾರ್ಯಜನ್ಸಾಲೆ ಅವರ ಸಾರಥ್ಯದಲ್ಲಿ ಗಾನ ನಾಟ್ಯ ವೈಭವ ನಡೆಯಿತು.
ರಾತ್ರಿ ನಂದಿಗೋಣ ಮತ್ತು ಬಬ್ಬರ್ಯ ದೈವದ ನೇಮ, ಮಂಗಳವಾರ ಬೆಳಗ್ಗೆ 5 ರಿಂದ ರಕ್ತೇಶ್ವರಿ ನೇಮ, ಮಾ.3 ರಂದು ಮಧ್ಯಾಹ್ನ ನೀಚ ದೈವದ ನೇಮ ನಡೆಯಲಿದೆ.
ದೈವಸ್ಥಾನದ ಆಡಳಿತ ಮೊಕ್ತೇಸರ ಭಗವಾನ್‌ದಾಸ್ ಶೆಟ್ಟಿ ಹಳೆಮನೆ, ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಗೌರವಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಆರ್.ಕೆ. ಸ್ಟೋನ್ ಕ್ರಶರ್ ಮಾಲಕ ದಿವಾಕರ ಶೆಟ್ಟಿ, ಆಡಳಿತ ಸಮಿತಿಯ ಗೌರವಾಧ್ಯಕ್ಷ ಶಂಕರ ಶೆಟ್ಟಿ ಧರ್ಮೆಟ್ಟು, ಅಧ್ಯಕ್ಷ ಜಗದೀಶ ಶೆಟ್ಟಿ ಮೂಡುಮನೆ, ಉಪಾಧ್ಯಕ್ಷ ಹರೀಶ್ಚಂದ್ರ ಶೆಟ್ಟಿ ಹಳೆಮನೆ , ಜೀಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರೀಶ್ ಪೂಜಾರಿ ಕೊಲ್ಲಂಬೆಟ್ಟು, ಜತೆ ಕಾರ್ಯದರ್ಶಿ ರವಿ ಪೂಜಾರಿ ಮೂಡುಮಟ್ಟಾರು, ಕೋಶಾಧಿಕಾರಿ ಮಂಜುನಾಥ ಆಚಾರ್ಯ, ಜತೆ ಕೋಶಾಧಿಕಾರಿ ಸಂದೀಪ್ ಪೂಜಾರಿ ಕಾಪಿಕಾಡು, ಶಿರ್ವ ನಡಿಬೆಟ್ಟು ಸುರೆಂದ್ರ ಹೆಗ್ಡೆ ಮತ್ತು ರತ್ನವರ್ಮಹೆಗ್ಡೆ, ಮುಕ್ಕಾಲ್ದಿ ರಮೇಶ್ ಶೆಟ್ಟಿ, ಉದ್ಯಮಿ ಎಸ್.ಕೆ. ಸಾಲ್ಯಾನ್ ಬೆಳ್ಮಣ್, ರತನ್ ಶೆಟ್ಟಿ ಕಲ್ಲೊಟ್ಟು, ಮಟ್ಟಾರು ಪರಾಡಿ ದಿನರಾಜ್ ಹೆಗ್ಡೆ, ಪರಾಡಿ ಶೇಖರ ಹೆಗ್ಡೆ, ಪ್ರೇಮನಾಥ ಹೆಗ್ಡೆ, ವಿಠಲ ಪೂಜಾರಿ, ವಿಹಿಂಪ ಬಜರಂಗದಳ, ಮಾತೃಶಕ್ತಿ ಮಟ್ಟಾರು ಘಟಕದ ಸದಸ್ಯರು, ಶಿರ್ವ ಗ್ರಾಮದ ವಿವಿಧ ಸ್ವಸಹಾಯ ಗುಂಪುಗಳ ಸದಸ್ಯರು, ಜೀಣೋದ್ಧಾರ ಸಮಿತಿಯ ಮತ್ತು ಆಡಳಿತ ಮಂಡಳಿಯ ಸದಸ್ಯರು, ಸ್ಥಳವಂದಿಗರು, ಗ್ರಾಮಸ್ಥರು ಮತ್ತು ಭಕ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.