Jio ನಾಯಕತ್ವದಲ್ಲಿ 5ಜಿ ಬಳಕೆಗೆ ವೇಗ; ಅಗ್ರ 15 ದೇಶಗಳ ಸಾಲಿನಲ್ಲಿ ಈಗ ಭಾರತ
Team Udayavani, Apr 1, 2024, 10:37 PM IST
ಮುಂಬೈ: ಬ್ರಾಡ್‌ಬ್ಯಾಂಡ್ ವೇಗ ಮತ್ತು ಮಾಪನ ಸಂಸ್ಥೆಯಾದ ಓಕ್ಲಾ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ಭಾರತದಲ್ಲಿನ 5ಜಿ ಕಾರ್ಯಕ್ಷಮತೆ ಮತ್ತು ಬಳಕೆದಾರರ ಅನುಭವದ ಕುರಿತು ಪ್ರಸ್ತಾವ ಮಾಡಿದ್ದು, ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ 5ಜಿ ಪ್ರಾಬಲ್ಯದ ಸ್ಪರ್ಧೆಯಲ್ಲಿ ತುಂಬ ದೊಡ್ಡದಾಗಿ ಹೊರಹೊಮ್ಮಿದೆ ಎಂದು ಹೇಳಿದೆ. ಜಿಯೋ ವೇಗವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದೂರಸಂಪರ್ಕ ಇಲಾಖೆಯ ಪ್ರಕಾರ, ಫೆಬ್ರವರಿ 29, 2024ರ ಹೊತ್ತಿಗೆ ಭಾರತದಲ್ಲಿ 4.25 ಲಕ್ಷ ಬಿಟಿಎಸ್ (ಬೇಸ್ ಟ್ರಾನ್ಸ್ ರಿಸೀವರ್ ಸ್ಟೇಷನ್) ಅನ್ನು ಸ್ಥಾಪಿಸಲಾಗಿದೆ, ಅದರಲ್ಲಿ ಸುಮಾರು ಶೇ 80ರಷ್ಟು ರಿಲಯನ್ಸ್ ಜಿಯೋದಿಂದ ಆಗಿದೆ.
ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಭಾರತದಾದ್ಯಂತ 5ಜಿ ನೆಟ್‌ವರ್ಕ್‌ಗಳನ್ನು ವಿಸ್ತರಿಸಲು ಹೆಚ್ಚು ಹೂಡಿಕೆ ಮಾಡಿವೆ. ಅದರ ಪರಿಣಾಮವಾಗಿ, ಭಾರತದಲ್ಲಿ 5ಜಿ ಲಭ್ಯತೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಇದು 2023 ರ ಮೊದಲ ತ್ರೈಮಾಸಿಕದಲ್ಲಿ ಇದ್ದ ಶೇ 28.1ರಿಂದ 2023ರ ನಾಲ್ಕನೇ ತ್ರೈಮಾಸಿಕದ ಹೊತ್ತಿಗೆ ಶೇ 52ಕ್ಕೆ ಹೆಚ್ಚಾಗಿದೆ. ರಿಲಯನ್ಸ್ ಜಿಯೋ ಮೊದಲಿನಿಂದಲೂ 5ಜಿ ಸ್ಟ್ಯಾಂಡ್ ಅಲೋನ್ (5G SA) ನೆಟ್‌ವರ್ಕ್‌ಗಳನ್ನು ಅಳವಡಿಸುವ ಮೂಲಕ ಮುಂದಿನ ತಲೆಮಾರಿನ ಸಂಪರ್ಕದಲ್ಲಿ ನಾಯಕ ಸ್ಥಾನ ಪಡೆದಿದೆ.
ಜಿಯೋದ ವ್ಯಾಪಕವಾದ 5ಜಿ ಕವರೇಜ್ ಅದರ 5ಜಿ ಲಭ್ಯತೆಯ ದರದಿಂದ ಸ್ಪಷ್ಟವಾಗಿದೆ. 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಅದರ ಪ್ರತಿಸ್ಪರ್ಧಿ ಏರ್‌ಟೆಲ್‌ನ ಅರ್ಧಕ್ಕಿಂತ ಹೆಚ್ಚು, ಅಂದರೆ ಶೇ 100 ಕ್ಕಿಂತ ಹೆಚ್ಚಿದೆ. ಜಿಯೋ ದರವು ಶೇ 68.8ಕ್ಕೆ ಏರಿದ್ದು, ಏರ್‌ಟೆಲ್ ಶೇ 30.3ಕ್ಕೆ ಇಳಿಯಿತು. ರಿಲಯನ್ಸ್ ಕಡಿಮೆ-ಬ್ಯಾಂಡ್ (700 MHz) ಮತ್ತು ಮಧ್ಯಮ-ಬ್ಯಾಂಡ್ (3.5 GHz) ಸ್ಪೆಕ್ಟ್ರಮ್ ಮತ್ತು ಜಿಯೋ ಒದಗಿಸಿದ ವ್ಯಾಪಕ ಫೈಬರ್ ನೆಟ್‌ವರ್ಕ್‌ನೊಂದಿಗೆ ಗ್ರಾಹಕರಿಗೆ ವ್ಯಾಪಕ ಕವರೇಜ್ ಮತ್ತು ವ್ಯಾಪಕ ನೆಟ್‌ವರ್ಕ್ ಒದಗಿಸಲು ಸಾಧ್ಯವಾಗುತ್ತದೆ.
*ರಿಲಯನ್ಸ್ ಜಿಯೊದ 5ಜಿ ನೆಟ್‌ವರ್ಕ್ ಬಳಕೆದಾರರ ಅನುಭವದಲ್ಲಿ, ವಿಶೇಷವಾಗಿ ವಿಡಿಯೋ ಪ್ರಸಾರ ಮತ್ತು ಮೊಬೈಲ್ ಗೇಮಿಂಗ್‌ನಲ್ಲಿ ಸ್ಪಷ್ಟ ಸುಧಾರಣೆಗಳನ್ನು ನೀಡಿದೆ. ಸ್ಪೀಡ್‌ಟೆಸ್ಟ್ ಇಂಟೆಲಿಜೆನ್ಸ್ ಡೇಟಾದ ಪ್ರಕಾರ, ರಿಲಯನ್ಸ್ ಜಿಯೊದ 5ಜಿ ನೆಟ್‌ವರ್ಕ್ ವೇಗವಾದ ವಿಡಿಯೋ ಆರಂಭದ ಸಮಯ ನೀಡುತ್ತದೆ, ಬಫರಿಂಗ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಾಹಕರಿಗೆ ಸ್ಟ್ರೀಮಿಂಗ್ ಅನುಭವವನ್ನು ಹೆಚ್ಚಿಸುತ್ತದೆ ಎಂದು ತೋರಿಸುತ್ತದೆ.
ಏರ್‌ಟೆಲ್‌ನ 5ಜಿ ನೆಟ್‌ವರ್ಕ್‌ಗೆ ಹೋಲಿಸಿದರೆ ರಿಲಯನ್ಸ್ ಜಿಯೊದ 5ಜಿ ನೆಟ್‌ವರ್ಕ್ 1.14 ಸೆಕೆಂಡುಗಳ ವೇಗದ ವಿಡಿಯೋ ಪ್ರಾರಂಭ ಸಮಯವನ್ನು ದಾಖಲಿಸಿದೆ. ಏರ್ ಟೆಲ್ ಅವಧಿ 1.99 ಸೆಕೆಂಡುಗಳು. ರಿಲಯನ್ಸ್ ಜಿಯೋ ಗ್ರಾಹಕರು 0.85 ಸೆಕೆಂಡುಗಳ ಕಡಿಮೆ ಅವಧಿಯಲ್ಲಿ 4ಜಿಯಿಂದ 5ಜಿಗೆ ವಿಡಿಯೋ ಪ್ರಾರಂಭದ ಸಮಯದಲ್ಲಿ ಗಮನಾರ್ಹವಾದ ಕಡಿಮೆ ಅವಧಿಯನ್ನು ಅನುಭವಕ್ಕೆ ಪಡೆದಿದ್ದಾರೆ. ಅದರ ಜತೆಗೆ ಮೊಬೈಲ್ ಗೇಮರ್‌ಗಳು ಕಡಿಮೆ ವಿಳಂಬ, ಉತ್ತಮ ಪ್ರತಿಕ್ರಿಯೆ ಮತ್ತು ಸುಗಮ ಆಟದ ಪ್ರಯೋಜನ ಪಡೆದಿದ್ದಾರೆ.
ನೆಟ್‌ವರ್ಕ್ ಕಾರ್ಯಕ್ಷಮತೆಯಲ್ಲಿ ಒಳಗೊಂಡ ಸಂಕೀರ್ಣತೆಗಳ ಹೊರತಾಗಿಯೂ 5ಜಿ ಕಡೆಗೆ ಗ್ರಾಹಕರ ಮನೋಭಾವ ಸಕಾರಾತ್ಮಕವಾಗಿದೆ. 5ಜಿ ಸೇವೆಗಾಗಿ ರಿಲಯನ್ಸ್ ಜಿಯೋದ ನೆಟ್ ಪ್ರಮೋಟರ್ ಸ್ಕೋರ್ (NPS) 2023ರ ನಾಲ್ಕನೇ ತ್ರೈಮಾಸಿಕದಲ್ಲಿ 7.4 ಆಗಿದೆ. ಎನ್ ಪಿಎಸ್ ನಲ್ಲಿನ ಈ ರೀತಿಯ ಟ್ರೆಂಡ್ ರಿಲಯನ್ಸ್ ಜಿಯೋದ 5ಜಿ ನೆಟ್‌ವರ್ಕ್ ನೀಡುವ ಸುಧಾರಿತ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಗ್ರಾಹಕರ ಸಂತೃಪ್ತಿಯನ್ನು ತೋರಿಸುತ್ತದೆ.
5ಜಿ ಸರಾಸರಿ ಡೌನ್‌ಲೋಡ್ ವೇಗದಲ್ಲಿ ಭಾರತವು ಈಗ ವಿಶ್ವದಾದ್ಯಂತ ಅಗ್ರ 15 ದೇಶಗಳಲ್ಲಿ ಒಂದಾಗಿದೆ. 2023ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಸರಾಸರಿ ಡೌನ್‌ಲೋಡ್ ವೇಗ 301.86 ಎಂಬಿಪಿಎಸ್ (Mbps) ಆಗಿದ್ದು, ಇದು ಅತ್ಯಾಧುನಿಕ 5ಜಿ ಮೂಲಸೌಕರ್ಯ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.