ಬೈಕ್‌ನಲ್ಲಿ ಕಾರನ್ನು ಬೆನ್ನಟ್ಟಿ ಮಹಿಳೆಗೆ ಕಿರುಕುಳ ಆರೋಪ; ಆರೋಪಿಗಳ ಬಂಧನ
ಯುವಕರ ಕೃತ್ಯವನ್ನು ಸೆರೆ ಹಿಡಿದ ಸಂತಸ್ತೆ
Team Udayavani, Apr 2, 2024, 12:22 AM IST
ಬೆಂಗಳೂರು: ಚಲಿಸುತ್ತಿದ್ದ ಕಾರನ್ನು ಹಿಂಬಾಲಿಸಿದ ನಾಲ್ಕೈದು ಮಂದಿ ಯುವಕರು ಕಾರಿನಲ್ಲಿದ್ದ ಮಹಿಳೆಗೆ ಕಿರುಕುಳ ನೀಡಿದ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪದವಿ ವಿದ್ಯಾರ್ಥಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರ ನಿವಾಸಿಗಳಾದ ಜಗನ್ನಾಥ್ (28) ಮತ್ತು ತೇಜಸ್ (21) ಬಂಧಿತರು. ಕಣ್ಣನ್ ಎಂಬಾತ ತಲೆಮರೆಸಿ ಕೊಂಡಿದ್ದಾನೆ.
ಆರೋಪಿಗಳು ರವಿವಾರ ರಾತ್ರಿ ಹೊಸೂರು ಕಡೆಯಿಂದ ನಗರದ ಕಡೆ ಬರುವಾಗ ಕಾರಿನಲ್ಲಿದ್ದ ಮಹಿಳೆಗೆ ಕಿರುಕುಳ ನೀಡಿದ್ದರು. ಕೃತ್ಯದ ವೀಡಿಯೋವನ್ನು ಸನುಕ್ ಘೋಷ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕಾನೂನು ಕ್ರಮಕ್ಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಮಡಿವಾಳ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬೈಕ್‌ಗೆ ಕಾರು ಢಿಕ್ಕಿ
ಆರೋಪಿ ಯುವಕರು 3 ಬೈಕ್‌ಗಳಲ್ಲಿ ಹೊಸೂರಿನಲ್ಲಿರುವ ಫಾಲ್ಸ್‌ಗೆ ಹೋಗಿ ರವಿವಾರ ರಾತ್ರಿ 8 ಗಂಟೆ ಸುಮಾರಿಗೆ ನಗರಕ್ಕೆ ಮರಳುತ್ತಿದ್ದರು. ಇದೇ ವೇಳೆ ಸೇಂಟ್ ಜಾನ್ ಆಸ್ಪತ್ರೆಯಿಂದ ಮಹಿಳೆ ಹಾಗೂ ಆಕೆಯ ಪತಿ ಕೋರಮಂಗಲ ಕಡೆಯಿಂದ ಮಡಿವಾಳ ಕಡೆ ಕಾರಿನಲ್ಲಿ ಬರುತ್ತಿದ್ದರು. ಮಾರ್ಗ ಮಧ್ಯೆ ಕಾರು ಚಾಲಕ ಯಾವುದೇ ಸೂಚನೆ ನೀಡದೆ(ಇಂಡಿಕೇಟರ್) ಎಡ ತಿರುವು ಪಡೆದುಕೊಂಡಿದ್ದು, ಆರೋಪಿಗಳ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಅದರಿಂದ ಕೋಪಗೊಂಡ ಯುವಕರು ಇಂಡಿಕೇಟರ್ ಹಾಕಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಆಗ ಕಾರು ಚಾಲಕ ಮಧ್ಯದ ಬೆರಳು ತೋರಿಸಿ ವೇಗ ವಾಗಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಅದರಿಂದ ಇನ್ನಷ್ಟು ಆಕ್ರೋಶಗೊಂಡ ಯುವಕರು, ಕಾರನ್ನು ಹಿಂಬಾಲಿಸಿ ಕೊಂಡು ಬಂದಿದ್ದು, ಮಡಿವಾಳದ ಅಂಡರ್‌ಪಾಸ್ ಬಳಿ ಕಾರಿನ ಪಕ್ಕ ಬಂದು ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಯುವಕರು ಬಂದು ಅನುಚಿತವಾಗಿ ವರ್ತಿಸುತ್ತಿದ್ದರಿಂದ ಗಾಬರಿಗೊಂಡ ಮಹಿಳೆ ಮೊಬೈಲ್‌ನಲ್ಲಿ ಯುವಕರ ಪುಂಡಾಟ ಸೆರೆ ಹಿಡಿದುಕೊಂಡಿದ್ದರು.
ವೀಡಿಯೋದಾ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಯುವಕರ ವಿಳಾಸ ಪತ್ತೆ ಹಚ್ಚಿ ಬಂಧಿಸಲಾಗಿದೆ. ಈ ಪೈಕಿ ಜಗನ್ನಾಥ್ ಕಾಲ್ ಸೆಂಟರ್ ಉದ್ಯೋಗಿ ಹಾಗೂ ತೇಜಸ್ ಶೇಷಾದ್ರಿಪುರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ತಲೆಮರೆಸಿಕೊಂಡಿರುವ ಕಣ್ಣನ್ ಮನೆಗಳಿಗೆ ಪೇಪರ್ ಹಾಕುತ್ತಾನೆ ಎಂದು ಪೊಲೀಸರು ಹೇಳಿದರು.
“ಚಾಲಕ ಮಧ್ಯದ ಬೆರಳು ತೋರಿಸಿ ಅವಮಾನಿಸಿದ್ದಕ್ಕೆ ಹಿಂಬಾಲಿಸಿದೆವು’
ಕಾರು ಚಾಲಕ ಯಾವುದೇ ಸೂಚನೆ ನೀಡದೇ ಏಕಾಏಕಿ ಎಡತಿರುವು ಪಡೆದುಕೊಂಡು, ಬೈಕ್‌ಗೆ ಢಿಕ್ಕಿ ಹೊಡೆದರು. ಅದನ್ನು ಪ್ರಶ್ನಿಸಿದಕ್ಕೆ ಚಾಲಕ ಮಧ್ಯದ ಬೆರಳು ತೋರಿಸಿ ಅವಮಾನ ಮಾಡಿದರು. ಅದರಿಂದ ಕಾರು ಹಿಂಬಾಲಿಸಿದೆವು. ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಆರೋಪಿಗಳು ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.