ವಿದೇಶ ಉದ್ಯೋಗ ಅಪಾಯ: ಮುನ್ನೆಚ್ಚರಿಕೆಯೇ ಉಪಾಯ
Team Udayavani, Apr 2, 2024, 6:30 AM IST
ಉದ್ಯೋಗದ ಆಮಿಷಕ್ಕೆ ಸಿಕ್ಕಿ ಕಾಂಬೋಡಿಯಾಗೆ ತೆರಳಿರುವ ಸುಮಾರು 5 ಸಾವಿರದಷ್ಟು ಭಾರತೀಯರು ಈಗ “ಸೈಬರ್ ಗುಲಾಮ’ರಾಗಿ ಆ ದೇಶದಲ್ಲಿ ಅತಂತ್ರರಾಗಿದ್ದಾರೆ. ಅಲ್ಲಿಂದ ಪಾರಾಗಲಾಗದೆ ಒದ್ದಾಡುತ್ತಿದ್ದಾರೆ. ಈ ಭಾರತೀ ಯರನ್ನು ಆನ್‌ಲೈನ್‌ನಲ್ಲಿ ಭಾರತೀಯರನ್ನೇ ವಂಚಿಸುವ ಕೆಲಸಕ್ಕೆ ನಿಯೋ ಜಿಸಿರುವುದು ಇನ್ನೂ ಕಳವಳಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಉದ್ಯೋಗಗಳ ಆಮಿಷಕ್ಕೀಡಾಗಿ ತೆರಳುವ ಭಾರತೀಯರು ನಾನಾ ಸಂಕಷ್ಟಗಳಿಗೆ ಗುರಿಯಾಗುತ್ತಿರುವ ಬಗ್ಗೆ ಮೇಲಿಂದ ಮೇಲೆ ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಂಬೋಡಿಯಾದಲ್ಲಿ ಅತಂತ್ರರಾಗಿರುವ ಭಾರತೀಯರ ಬಗ್ಗೆ ಮಾಹಿತಿ ಯಿದೆ. ಈಗಾಗಲೇ 250 ಭಾರತೀಯರನ್ನು ಪಾರು ಮಾಡಿದ್ದೇವೆ. ಕಳೆದ ಮೂರು ತಿಂಗಳಲ್ಲಿ 75 ಭಾರತೀಯರು ದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದ್ದು, ಆಶಾದಾಯಕವಾಗಿದೆ. ಹಾಗಿದ್ದೂ, ಅತಂತ್ರರಾಗಿರುವ ಎಲ್ಲ ಭಾರತೀ ಯರನ್ನು ವಾಪಸ್ ತವರಿಗೆ ಕರೆ ತರುವುದು ಸರಕಾರದ ಪ್ರಥಮ ಆದ್ಯತೆ ಯಾಗಬೇಕು. ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕದವರು ಸೇರಿದಂತೆ ಭಾರತದ ಯುವಕರು ರಷ್ಯಾದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದರು. ಪಂಜಾಬ್, ಹರಿಯಾಣ, ದಿಲ್ಲಿ, ಮಹಾರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿದ್ದ ಏಜೆಂಟ್ ಕಂಪೆನಿಗಳ ಮೂಲಕ 180 ಭಾರತೀಯರು ರಷ್ಯಾಗೆ ಹೋಗಿ, ಅಪಾಯಕ್ಕೆ ಸಿಲುಕಿ ಕೊಂಡಿದ್ದರು. ಈ ವೇಳೆ, ಹೈದ್ರಾಬಾದ್‌ನ ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕ ಈ ಪ್ರಕರಣದ ಗಂಭೀರತೆಯು ಎಲ್ಲರಿಗೂ ಮನದಟ್ಟಾಗಿತ್ತು.
ಭಾರತದಲ್ಲಿನ ಉದ್ಯೋಗ ಸೃಷ್ಟಿಯ ಕೊರತೆ ಪರಿಣಾಮ ಬಹಳಷ್ಟು ಯುವಕರು ವಿದೇಶಗಳಲ್ಲಿನ ಉದ್ಯೋಗದಾಸೆಗೆ ಬಲಿಯಾಗುತ್ತಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಳ್ಳುವ ಕೆಲವು ವಂಚಕ ಕಂಪೆನಿಗಳು ಮನಸೋ ಇಚ್ಛೆ ಹಣವನ್ನು ಪೀಕಿಸಿಕೊಂಡು, ವಿದೇಶಗಳಲ್ಲಿ ಅವರನ್ನು ಅತಂತ್ರರನ್ನಾಗಿಸುತ್ತಿವೆ. ವಿದೇಶಿ ಉದ್ಯೋಗ ನಂಬಿ ಸಾಕಷ್ಟು ಜನರು ಹಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳಂತೂ ಕರ್ನಾಟಕವೂ ಸೇರಿದಂತೆ ದೇಶ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿವೆ. ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವವರು ತೊಂದರೆಗೆ ಸಿಲುಕದಿರಲಿ ಎಂದೇ ಭಾರತೀಯ ವಿದೇಶಾಂಗ ಸಚಿವಾಲಯವು ಸಾಕಷ್ಟು ನಿಯಮಗಳನ್ನು ರೂಪಿಸಿದೆ. ಇದಕ್ಕಾಗಿ ನೇಮಕಾತಿ ಸಂಸ್ಥೆಗಳಿಗೆ ಮಾನ್ಯತೆ ಯನ್ನೂ ಕಲ್ಪಿಸುತ್ತದೆ. ಆದರೆ ಈ ಬಗೆಗಿನ ಜ್ಞಾನದ ಕೊರತೆಯಿಂದಾಗಿ ಸಾಕಷ್ಟು ಜನರು ನಕಲಿ ಏಜೆಂಟರಿಗೆ ಬಲಿ ಬಿದ್ದು, ಹಣವನ್ನೂ ಕಳೆದುಕೊಳ್ಳುವುದು ಮಾತ್ರ ವಲ್ಲದೇ, ತಮ್ಮ ಜೀವಕ್ಕೂ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.
ಸಾಕಷ್ಟು ನಿಯಮಗಳು ಮತ್ತು ಕ್ರಮಗಳ ಹೊರತಾಗಿಯೂ ವಿದೇಶಿ ನೌಕರಿಯ ವಂಚನೆಯನ್ನು ತಡೆಯಲಾಗುತ್ತಿಲ್ಲ. ಅಂದರೆ ಈಗಿರುವ ಕಾನೂ ನಾತ್ಮಕ ಕ್ರಮಗಳು ಸಾಕಾಗುತ್ತಿಲ್ಲ. ಸರಕಾರಗಳು ಈ ನಿಟ್ಟಿನಲ್ಲಿ ಯೋಚಿಸಿ, ಪರಿಪೂರ್ಣವಾದ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು. ಸರಕಾರಿ ಅಧಿಕಾರಿಗಳ ಶಾಮೀಲು ಇಲ್ಲದೇ ಈ ವಂಚನೆಗಳು ನಡೆಯಲು ಸಾಧ್ಯವಿಲ್ಲ. ಹಾಗಾಗಿ, ಇಂಥ ಪ್ರಕರಣಗಳಲ್ಲಿನ ತಪ್ಪಿತಸ್ಥ ಸರಕಾರಿ ಸಿಬಂದಿಯನ್ನು ಕಠಿನ ಶಿಕ್ಷೆಗೆ ಗುರಿಯಾಗಿಸಬೇಕು.
ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗಾಕಾಂಕ್ಷಿಗಳು ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸಬೇಕು. ತಾವು ನಂಬಿರುವ ಏಜೆಂಟ್ ಕಂಪೆನಿಗಳು ನಕಲಿಯೋ, ಅಸಲಿಯೋ ಅಥವಾ ಹೋಗುತ್ತಿರುವ ದೇಶವು ವಿದೇಶಿಗರಿಗೆ ಪೂರಕವಾಗಿ ದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿದೇಶಾಂಗ ಸಚಿವಾಲಯದಲ್ಲಿ ನೋಂದಾಯಿತ ಏಜೆಂಟ್ ಕಂಪೆನಿಗಳ ಮೂಲಕವೇ ವ್ಯವಹರಿಸಬೇಕು. ಇಲ್ಲದಿದ್ದರೆ, ನಮ್ಮದಲ್ಲದ ದೇಶದಲ್ಲಿ ಅತಂತ್ರರಾಗಿ, ಬದುಕನ್ನು ವಿನಾಶಕ್ಕೆ ನಾವೇ ದೂಡುತ್ತೇವೆ. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.