Sirsi: ಏಕಾಂಗಿಯಾಗಿ ತೋಡಿದ್ದ ಬಾವಿಗೆ ಕಟ್ಟೆ ಕಟ್ಟಿದ ಗೌರಿ
Team Udayavani, Apr 5, 2024, 6:55 AM IST
ಶಿರಸಿ: “ಗಂಗೆ ಗೆದ್ದ ಗೌರಿ’ ಎಂದೇ ಹೆಸರು ಮಾಡಿದ ಸಾಹಸಿ ಮಹಿಳೆ ಗೌರಿ ನಾಯ್ಕ ಅವರು ಅಂಗನವಾಡಿ ಮಕ್ಕಳಿಗೆ ಏಕಾಂಗಿಯಾಗಿ ಬಾವಿ ತೋಡಿದ ಬೆನ್ನಲ್ಲೇ, ಆ ಬಾವಿಗೆ ಸ್ವತಃ ಕಟ್ಟೆಯನ್ನೂ ಕಟ್ಟಿದ್ದಾರೆ.
ಗಣೇಶನಗರ ಅಂಗನವಾಡಿ ಹಿಂಬದಿಯಲ್ಲಿ ಗೌರಿ ನಾಯ್ಕ 33 ದಿನಗಳ ನಿರಂತರ ಶ್ರಮದಿಂದ 5 ಅಡಿ ಅಗಲ, 45 ಅಡಿ ಆಳ ತೋಡಿದ ಬಾವಿಗೆ ಕಟ್ಟೆ ನಿರ್ಮಿಸಿದ್ದಾರೆ. ಈ ಬಾವಿ ಅಪಾಯಕ್ಕೆ ಕಾರಣವಾಗಬಾರದು ಎಂದು 3 ಅಡಿ ಎತ್ತರ ಕಟ್ಟೆಯನ್ನೂ ಸ್ವತಃ ನಿರ್ಮಿಸಿದ್ದಾರೆ. ಸುಮಾರು ಹತ್ತು ದಿನಕ್ಕೂ ಹೆಚ್ಚು ಕಾಲ ಶ್ರಮವಹಿಸಿ ಈ ಕಾರ್ಯ ಪೂರೈಸಿದ್ದಾರೆ. ಬಾವಿಯೊಳಗೆ ಕಸ ಬೀಳದಂತೆ ಕಬ್ಬಿಣದ ಬೇಲಿಯನ್ನೂ ಹಾಕಿದ್ದಾರೆ. ಕಟ್ಟೆ ಕಟ್ಟಲು ಸಮೀಪದ ತನ್ನ ಮನೆಯಲ್ಲಿದ್ದ ನೂರಾರು ಕೆಂಪು ಕಲ್ಲನ್ನು ಒಬ್ಬರೇ ಹೊತ್ತು ತಂದು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಸಿಮೆಂಟ್ ಕಾರ್ಯಕ್ಕೆ ಸ್ಥಳೀಯರ ನೆರವು ಪಡೆದಿದ್ದಾರೆ. ಮಕ್ಕಳಿಗೆ ಅಪಾಯ ಆಗದಂತೆ ಗೋಡೆ ಕಟ್ಟಿದ್ದು ಖುಷಿಯಾಗಿದೆ. ಬಾವಿ ಕೂಡ ಪೂರ್ಣವಾದಂತೆ ಆಗಿದೆ ಎಂದು ಗೌರಿ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.