LS Election;ಬೆಂಗಳೂರು ಕೇಂದ್ರದಲ್ಲಿ ರಾಹುಲ್ ಗಾಂಧಿ,ಎಸ್.ಎಂ.ಕೃಷ್ಣ ನಾಮಪತ್ರ ಸಲ್ಲಿಕೆ!
ಒಂದನೇ ಹಂತದ ನಾಮಪತ್ರ ಸಲ್ಲಿಕೆ ಅಂತ್ಯ: 492 ಮಂದಿ ಉಮೇದುವಾರಿಕೆ
Team Udayavani, Apr 5, 2024, 6:35 AM IST
ಬೆಂಗಳೂರು: ಮೊದಲ ಹಂತದಲ್ಲಿ ಮತ ದಾನ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಅಖಾಡ ಬಹುತೇಕ ಸಿದ್ಧಗೊಂಡಿದ್ದು, ಹಲವು ಕ್ಷೇತ್ರಗಳು ಘಟಾನುಘಟಿಗಳ ಮುಖಾಮುಖಿಗೆ ಸಾಕ್ಷಿಯಾಗಲಿವೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಸಂಜೆ ವೇಳೆಗೆ ಪ್ರಮುಖ ರಾಜಕೀಯ ಪಕ್ಷಗಳ ಎಲ್ಲ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಒಂದೇ ದಿನ 183 ಅಭ್ಯರ್ಥಿಗಳು 224 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈವರೆಗೆ ಒಟ್ಟು 333 ಪುರುಷರು ಹಾಗೂ 25 ಮಹಿಳಾ ಅಭ್ಯರ್ಥಿಗಳ ಸಹಿತ 358 ಹುರಿಯಾಳುಗಳು ಒಟ್ಟು 492 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ 14, ಬಿಜೆಪಿಯ 11, ಜೆಡಿಎಸ್‌ನ ಮೂವರು ಅಭ್ಯರ್ಥಿಗಳಷ್ಟೇ ಅಲ್ಲದೆ ಬಿಎಸ್‌ಪಿ, ಆರ್‌ಪಿಐ (ಎ), ಎಸ್‌ಜೆಪಿ ಮತ್ತಿತರ ಪಕ್ಷಗಳು ಮತ್ತು ಪಕ್ಷೇತರರೂ ನಾಮ ಪತ್ರ ಸಲ್ಲಿಸಿದ್ದಾರೆ.
ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯ ಲಿದ್ದು, ಸಿಂಧು ನಾಮಪತ್ರಗಳನ್ನು ಹಿಂಪಡೆಯಲು ಎ. 8ರ ವರೆಗೆ ಕಾಲಾವಕಾಶ ಇರಲಿದೆ. 14 ಲೋಕಸಭಾ ಕ್ಷೇತ್ರಗಳಿಂದ ಆಯ್ಕೆ ಬಯಸಿರುವ 358 ಅಭ್ಯರ್ಥಿಗಳ ಪೈಕಿ ಯಾರ ನಾಮಪತ್ರಗಳು ತಿರಸ್ಕೃತಗೊಳ್ಳಲಿವೆ, ಯಾರ್ಯಾರು ಕಣದಿಂದ ಹಿಂದೆ ಸರಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಅನಂತರವಷ್ಟೇ ಅಂತಿಮವಾಗಿ ಕಣದಲ್ಲಿರುವ “ಕಲಿ’ಗಳ ಸ್ಪಷ್ಟ
ಚಿತ್ರಣ ಸಿಗಲಿದೆ.
“ರಾಹುಲ್ ಗಾಂಧಿ, ಎಸ್.ಎಂ. ಕೃಷ್ಣ’ ನಾಮಪತ್ರ!
ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕೂಡ ಬೆಂಗಳೂರು ದಕ್ಷಿಣದಿಂದ ಸ್ಪರ್ಧೆಗಿಳಿದಿದ್ದಾರೆ. ಮಂಡ್ಯದಲ್ಲಿ ಎಚ್.ಡಿ. ರೇವಣ್ಣ ಹೆಸರಿನ ವ್ಯಕ್ತಿಯೊಬ್ಬರು ಪೂರ್ವಾಂಚಲ್ ಮಹಾಪಂಚಾಯತ್ ಎನ್ನುವ ಪಕ್ಷದಿಂದ ಸ್ಪರ್ಧೆಗಿಳಿದಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ರಾಹುಲ್ ಗಾಂಧಿ ಎನ್. ಹಾಗೂ ಎಸ್.ಎಂ. ಕೃಷ್ಣ ಹೆಸರಿನ ಪಕ್ಷೇತರ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಡಾ| ಸಿ.ಎನ್. ಮಂಜುನಾಥ್ ಎದುರು ಮಂಜುನಾಥ್ ಕೆ., ಮಂಜುನಾಥ್ ಎನ್., ಮಂಜುನಾಥ್ ಸಿ., ಬಿಎಸ್‌ಪಿಯಿಂದ ಮಂಜುನಾಥ ಸಿ.ಎನ್. ಎಂಬ ಒಂದೇ ಹೆಸರಿನ ಹಲವರು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳು
ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ, ಬೆಂಗಳೂರು ಉತ್ತರ- ಪ್ರೊ| ರಾಜೀವ್ ಗೌಡ, ಬೆಂಗಳೂರು ಕೇಂದ್ರ- ಮನ್ಸೂರ್ ಅಲಿ ಖಾನ್, ಬೆಂಗಳೂರು ಗ್ರಾಮಾಂತರ- ಡಿ.ಕೆ. ಸುರೇಶ್, ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ, ದಕ್ಷಿಣ ಕನ್ನಡ- ಪದ್ಮರಾಜ್, ಮೈಸೂರು- ಲಕ್ಷ್ಮಣ್, ಮಂಡ್ಯ- ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು), ಚಾಮರಾಜನಗರ- ಸುನಿಲ್ ಬೋಸ್, ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ, ಕೋಲಾರ- ಕೆ.ವಿ. ಗೌತಮ್, ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ, ತುಮಕೂರು- ಮುದ್ದ ಹನುಮೇ ಗೌಡ, ಹಾಸನ- ಶ್ರೇಯಸ್ ಪಟೇಲ್.
ಎನ್‌ಡಿಎ ಅಭ್ಯರ್ಥಿಗಳು
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ, ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ- ಪಿ.ಸಿ. ಮೋಹನ್, ಬೆಂಗಳೂರು ಗ್ರಾಮಾಂತರ- ಡಾ| ಸಿ.ಎನ್. ಮಂಜುನಾಥ್, ಉಡುಪಿ-ಚಿಕ್ಕಮಗಳೂರು- ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ- ಕ್ಯಾ| ಬೃಜೇಶ್ ಚೌಟ, ಮೈಸೂರು- ಯದುವೀರ್ ಒಡೆಯರ್, ಮಂಡ್ಯ- ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್), ಚಾಮರಾಜನಗರ- ಎಸ್. ಬಾಲರಾಜು, ಚಿಕ್ಕಬಳ್ಳಾಪುರ- ಡಾ| ಕೆ. ಸುಧಾಕರ್, ಕೋಲಾರ- ಮಲ್ಲೇಶ್ ಬಾಬು (ಜೆಡಿಎಸ್), ಚಿತ್ರದುರ್ಗ- ಗೋವಿಂದ ಕಾರಜೋಳ, ತುಮಕೂರು- ವಿ.ಸೋಮಣ್ಣ, ಹಾಸನ- ಪ್ರಜ್ವಲ್ ರೇವಣ್ಣ (ಜೆಡಿಎಸ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.