Viral video ನೋಡಿ; ಏಕಾಏಕಿ ಹಾರಿದ ಕೋಲೆ ಬಸವ: ಸ್ಕೂಟರ್ ಸವಾರ ಪಾರು
ಬೆಂಗಳೂರಿನಲ್ಲಿ ನಡೆದ ಬೆಚ್ಚಿ ಬೀಳುವ ಘಟನೆ... ಪವಾಡ ಸದೃಶವಾಗಿ ಸವಾರ ಪಾರು
Team Udayavani, Apr 5, 2024, 4:48 PM IST
ಬೆಂಗಳೂರು: ನಗರದಲ್ಲಿ ನಡೆದ ಅಪಘಾತವೊಂದರ ವಿಡಿಯೋ ರಾಷ್ಟ್ರದೆಲ್ಲೆಡೆ ವೈರಲ್ ಆಗುತ್ತಿದೆ. ಮಹಾಲಕ್ಷ್ಮಿ ಲೇಔಟ್ ನ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ನಡೆದಿದೆ ಎನ್ನಲಾದ ಘಟನೆಯಲ್ಲಿ ಸ್ಕೂಟರ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆಯಲ್ಲಿ ಕೋಲೆ ಬಸವನನ್ನು ಕರೆದುಕೊಂಡು ಮಹಿಳೆಯೊಬ್ಬರು ತನ್ನ ಪಾಡಿಗೆ ಹಾಡುತ್ತಿದ್ದರು. ವಿರುದ್ಧ ದಿಕ್ಕಿನಿಂದ ಸ್ಕೂಟರ್ ಸವಾರ ಸಾಗುತ್ತಿದ್ದ. ಪಕ್ಕದಲ್ಲೇ ಲಾರಿಯು ಬರುತ್ತಿತ್ತು. ಏಕಾಏಕಿ ಕೋಲೆ ಬಸವ ಸ್ಕೂಟರ್ ಸವಾರನ ಮೇಲೆ ಹಾರಿಯೇ ಬಿಟ್ಟಿದೆ. ಸವಾರ ಕೆಳಕ್ಕೆ ಬಿದ್ದಿದ್ದು, ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿದಿದೆ.ಲಾರಿ ಚಾಲಕ ಬ್ರೇಕ್ ಹಾಕದೆ ಇದ್ದಿದ್ದರೆ ಸ್ಕೂಟರ್ ಸವಾರ ಹಿಂಬದಿಯ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ಇತ್ತು. ಅದೃಷ್ಟವಶಾತ್ ಸ್ಕೂಟರ್ ಸವಾರ ಘಟನೆ ನಡೆದ ಕೂಡಲೇ ಎದ್ದು ನಿಂತು ನೋಡಿದ್ದಾನೆ.
ಸದ್ಯ ವಿಡಿಯೋ ವೈರಲ್ ಆಗಿದ್ದು ಆನ್ ಲೈನ್ ನಲ್ಲಿ ವೀಕ್ಷಕರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
यमराज छुट्टी पर थे वर्ना सांड ने तो पूरा काम कर दिया था 😭😭 pic.twitter.com/wxukVCNbmj
— Raja Babu (@GaurangBhardwa1) April 5, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ರೀಲ್ಸ್ಗಾಗಿ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದ ಯುವಕ; ಮಧ್ಯಾಹ್ನದ ವೇಳೆಗೆ ಮೃತ್ಯು
ಕೂದಲೆಳೆ ಅಂತರದಲ್ಲಿ ಪಾರಾದ ಆಂಧ್ರ ಸಿಎಂ; ಪ್ರವಾಹ ವೀಕ್ಷಣೆ ವೇಳೆ ಪಕ್ಕದಲ್ಲೇ ಸಂಚರಿಸಿದ ರೈಲು
Karachi ‘ಡ್ರೀಮ್ ಬಜಾರ್’ ಉದ್ಘಾಟನ ದಿನದಂದೇ ಭಗ್ನ!
Gujarat ಪ್ರವಾಹ; ಬೃಹತ್ ಮೊಸಳೆ ರಕ್ಷಿಸಿ ಸ್ಕೂಟರ್ನಲ್ಲೇ ಸಾಗಾಟ!!: ವಿಡಿಯೋ
Robbery: ಸ್ಕೂಟಿ ನಿಲ್ಲಿಸಿ ವಡಾಪಾವ್ ತರಲು ಹೋಗಿ 5 ಲಕ್ಷದ ಚಿನ್ನಾಭರಣ ಕಳೆದುಕೊಂಡ ದಂಪತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.