Bagalakote; ದಿಲ್ಲಿಗೆ ಕೃಷ್ಣೆಯ ಕೂಗನ್ನು ಕೇಳಿಸುವುದೇ ನನ್ನ ಗುರಿ: ಸಂಯುಕ್ತಾ ಪಾಟೀಲ್‌

2ನೇ ವಯಸ್ಸಿನಲ್ಲೇ ಪ್ರಧಾನಿಯಾಗುವೆ ಎಂದು ಹೇಳಿದ್ದೆ ; ಬಾಗಲಕೋಟೆಗೆ ಆಕರ್ಷಕ ಜಿಲ್ಲೆ

Team Udayavani, Apr 7, 2024, 7:30 AM IST

Bagalakote; ದಿಲ್ಲಿಗೆ ಕೃಷ್ಣೆಯ ಕೂಗನ್ನು ಕೇಳಿಸುವುದೇ ನನ್ನ ಗುರಿ: ಸಂಯುಕ್ತಾ ಪಾಟೀಲ್‌

ಮಾಜಿ ಅಟಾರ್ನಿ ಜನರಲ್‌ ಆಫ್‌ ಇಂಡಿಯಾದ ಮುಕುಲ್‌ ರೊಹrrಗಿ, ಹೈಕೋರ್ಟ್‌ನ ಹಿರಿಯ ವಕೀಲರಾದ ಜಯಕುಮಾರ್‌ ಪಾಟೀಲ್‌ ಅವರಂಥ ಹಿರಿಯರ ಅಧೀನದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ವಕೀಲೆಯೂ ಆಗಿರುವ ಸಂಯುಕ್ತಾ ಪಾಟೀಲ್‌ ರಾಜ್ಯದ ಹಾಲಿ ಸಚಿವ ಶಿವಾನಂದ ಪಾಟೀಲರ ಪುತ್ರಿ. 2017ರಿಂದ ಸಕ್ರಿಯ ರಾಜಕಾರಣಕ್ಕೆ ಬಂದಿದ್ದಾರೆ. ಸತತ 4 ಬಾರಿ ಗೆದ್ದು ಐದನೇ ಬಾರಿಗೆ ಗೆಲುವಿನ ವಿಶ್ವಾಸದಲ್ಲಿರುವ ಬಿಜೆಪಿಯ ಹಳೆಯ ಹುಲಿ ಪಿ.ಸಿ.ಗದ್ದಿಗೌಡರ್‌ ಅವರಿಗೆ ಎದುರಾಳಿಯಾಗಿದ್ದಾರೆ.

ಜೀವನದಲ್ಲೇ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?
ತುಂಬ ಖುಷಿಯಾಗುತ್ತಿದೆ. ನನಗೆ ಬೇರೆಬೇರೆ ಕಾರಣಕ್ಕೆ ಟಿಕೆಟ್‌ ಸಿಕ್ಕಿರಬಹುದು. ಆದರೆ ಮೊದಲ ಪ್ರಯತ್ನ ದಲ್ಲೇ ನಾನು ಯಶಸ್ಸು ಕಂಡಿದ್ದೇನೆಂಬ ಖುಷಿಯಿದೆ.

ಚುನಾವಣೆ ಎದುರಿಸಬೇಕೆಂದು ನಿಮಗೆ ಅನ್ನಿಸಿದ್ದು ಯಾವಾಗ, ಯಾಕೆ ಮತ್ತು ಪ್ರೇರಣೆ ಏನು?
ಎರಡನೇ ತರಗತಿಯಲ್ಲಿದ್ದಾಗ ಶಿಕ್ಷಕರು ಕೇಳಿದ್ದಕ್ಕೆ ಮುಂದೆ ಈ ದೇಶದ ಪ್ರಧಾನಿ ಆಗುತ್ತೇನೆ ಎಂದಿದ್ದೆ. ವಕೀಲೆಯಾಗಿ ಇಡೀ ದೇಶ ಮತ್ತು ಏಷ್ಯಾದ ವಿವಿಧ ರಾಷ್ಟ್ರಗಳ ನೀತಿ ರೂಪಿಸುವ ಹಲವು ಕಾರ್ಯಾಗಾರ, ತರಬೇತಿಗಳಲ್ಲಿ ಭಾರತ
ವನ್ನು ಪ್ರತಿನಿಧಿಸಿದ್ದೇನೆ. ಇವೆಲ್ಲ ನಾನು ರಾಜಕೀಯಕ್ಕೆ ಬರಲು ಪ್ರೇರಣೆ.

ರಾಜಕೀಯದಲ್ಲಿ ನಿಮ್ಮ ಗಾಡ್‌ಫಾದರ್‌ ಯಾರು ಮತ್ತು ಯಾಕೆ?
ಸಹಜವಾಗಿ ನನ್ನ ತಂದೆಯೇ ನನ್ನ ರಾಜಕೀಯ ಜೀವನದ ಮೊದಲ ಗಾಡ್‌ಫಾದರ್‌. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರೂ ಗಾಡ್‌ಫಾದರ್‌. ರಾಜಕೀಯದಲ್ಲಿ ನನಗೆ ಅಟಲ್‌ ಬಿಹಾರಿ ವಾಜಪೇಯಿ ಅವರೇ ಅತಿ ಹೆಚ್ಚು ಆಕರ್ಷಿತ ನಾಯಕರು.

ಮೊದಲ ಪ್ರಯತ್ನದಲ್ಲೇ ಲೋಕಸಭೆಗೆ ಸ್ಪರ್ಧೆ ಮಾಡುತ್ತಿದ್ದೀರಿ. ಕಾರಣವೇನು ?
2017ರಿಂದ ಸಕ್ರಿಯ ರಾಜಕಾರಣದಲ್ಲಿ ದ್ದೇನೆ. ಕಾನೂನು, ತಂತ್ರಜ್ಞಾನ, ಸಾಮಾ ಜಿಕ ಕ್ಷೇತ್ರದಲ್ಲಿ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಜನರ ಸೇವೆಗೆ ಒಂದು ಉತ್ತಮ ಪ್ಲಾಟ್‌ಫಾರ್ಮ್ ಬೇಕು.

ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ನನಗೆ ಟಿಕೆಟ್‌ ಸಿಗಲು ಹಲವು ಕಾರಣ ಇರಬಹುದು. ಆದರೆ “ಹೊರಗಿನವಳು’ ಎಂದು ಕೆಲವರು ಬಿಂಬಿಸಿದರೂ ಈ ಜಿಲ್ಲೆಯ ಜನ ನನ್ನನ್ನು ಅತ್ಯಂತ ಪ್ರೀತಿಯಿಂದ ಮನೆ ಮಗಳಂತೆ ಸ್ವೀಕರಿಸಿದ್ದಾರೆ. ಈ ಕ್ಷೇತ್ರದ ಬಗ್ಗೆ ಹಲವು ಕನಸು ಕಂಡಿರುವೆ.

ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? ಪ್ರಮುಖ ಕಾರಣ ಹೇಳಿ.
ಕಾಂಗ್ರೆಸ್‌ ಗೆಲ್ಲಲು ಹಲವು ಪೂರಕ ಅಂಶಗಳಿವೆ. ಕೇಂದ್ರ ಸರಕಾರದ ಆಡ ಳಿತದಿಂದ ಜನ ರೋಸಿ ಹೋಗಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇ ವೆಂದು ಹೇಳಿದವರಿಂದ ಒಂದು ಉದ್ಯೋಗವೂ ಸೃಷ್ಟಿಯಾಗಿಲ್ಲ. ಕೇಂದ್ರ ಸರಕಾರ ಇಂಥ ಹಲವು ವೈಫ‌ಲ್ಯಗಳು ಗೆಲುವಿಗೆ ಕಾರಣವಾಗಲಿವೆ.

ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕೆಂದಿದ್ದೀರಿ?
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ಈ ಕ್ಷೇತ್ರದಲ್ಲಿ ಆಗ ಬೇಕಾದ ಕಾರ್ಯಗಳ ಕುರಿತು ಪ್ರತ್ಯೇಕ ಪ್ರಣಾಳಿಕೆ ಕೂಡ ಶೀಘ್ರ ಬಿಡುಗಡೆ ಮಾಡಲಿದ್ದೇವೆ. ಕೃಷ್ಣೆಯ ಕೂಗು ದಿಲ್ಲಿಗೆ ಕೇಳಬೇಕು ಎಂಬುದು ನನ್ನ ಗುರಿ.

ಗೆದ್ದರೆ ನಿಮ್ಮ ಲೋಕಸಭೆ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ಬಾಗಲಕೋಟೆ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಯೊಂದಿಗೆ ಆಕರ್ಷಕ ಜಿಲ್ಲೆಯನ್ನಾಗಿ ರೂಪಿಸುತ್ತೇನೆ.

ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳು ಏನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ಮಿನಿ ಜವಳಿ ಪಾರ್ಕ್‌ ಸ್ಥಾಪನೆ, ರೈಲ್ವೆ ಯೋಜನೆಗಳ ಪೂರ್ಣ, ಪ್ರವಾ ಸೋದ್ಯಮ ಸಮಗ್ರ ಅಭಿವೃದ್ಧಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿಶೇಷ ಅನುದಾನ, ಎನ್‌ಡಿಆರ್‌ಎಫ್‌ ಪ್ರಕಾರ ರಾಜ್ಯಕ್ಕೆ ಸೂಕ್ತ ಅನುದಾನ ನಿರಂತರವಾಗಿ ಬರಲು ಶ್ರಮ ವಹಿಸುವೆ.

ಚುನಾವಣೆ ವೇಳೆ ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ಈ ವಿಷಯದಲ್ಲಿ ಮತ್ತೆ ನನಗೆ ವಾಜಪೇಯಿ ನೆನಪಾಗುತ್ತಾರೆ. ಅವರಿಗೆ ಶತ್ರುಗಳೇ ಇರಲಿಲ್ಲ. ಎಲ್ಲರನ್ನೂ ಗೌರವಿಸಿ, ವಿಶ್ವಾಸದಿಂದ ಸಾಗುತ್ತಿದ್ದರು. ಜಿಲ್ಲೆಯ ಎಲ್ಲ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದೇನೆ.

– ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

4-

ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್‌ ಕದ್ದ ಅಪರಿಚಿತ ವ್ಯಕ್ತಿ

Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ

Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ

5

Chikkodi: ಕಾನೂನು ಪದವಿ ಓದುತ್ತಿದ್ದ ಯುವಕ ಆತ್ಮಹ*ತ್ಯೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.