ನನ್ನ ಹೆಸರಿನಲ್ಲಿ ಬಾಂಬರ್ ಕ್ರಿಪ್ಟೋ ಡೀಲ್: ಸಾಯಿಪ್ರಸಾದ್
"ಸಾಯಿ-ಪಿಎ' ಖಾತೆ ಬಳಸಿ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ ವಹಿವಾಟು
Team Udayavani, Apr 7, 2024, 6:30 AM IST
ಶಿವಮೊಗ್ಗ/ ತೀರ್ಥಹಳ್ಳಿ: “ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ಮತೀನ್ ತಾಹಾ ಎಂಬಾತ ನಡೆಸಿದ್ದ ಕ್ರಿಪ್ಟೋ ವಹಿವಾಟುಗಳ ಬಗ್ಗೆ ಸಂಶಯಗೊಂಡು ಎನ್‌ಐಎ ಅಧಿಕಾರಿಗಳು ನನ್ನನ್ನು ಹಾಗೂ ನನ್ನ ತಮ್ಮನನ್ನು ಕರೆದು ವಿಚಾರಣೆ ಮಾಡಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮತೀನ್ ಸಾಯಿ -ಪಿಎ’ ಎಂಬ ಅಕೌಂಟ್‌ನಿಂದ ಮತೀನ್ ತಾಹಾ ಕ್ರಿಪ್ಟೋ ವಹಿವಾಟು ಮಾಡಿದ್ದ. ಇದರಿಂದ ಸಂಶಯಗೊಂಡು ನಮ್ಮಿಬ್ಬರ ವಿಚಾರಣೆ ಮಾಡಿದ್ದಾರೆ. ನಾನು 2021ರಲ್ಲಿ ಎರಡು ಕ್ರಿಪ್ಟೋ ಆ್ಯಪ್‌ಗಳಲ್ಲಿ ಹೂಡಿಕೆ ಮಾಡಿದ್ದೆ. ಇವೆರಡೂ ಭಾರತದವು. ಎರಡಕ್ಕೂ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಕೆವೈಸಿ ಮಾಡಿಯೇ ಬಳಸಬೇಕು. ಕ್ರಿಪ್ಟೋ ಬೂಮ್ ಇದ್ದುದರಿಂದ ಎರಡರಲ್ಲೂ ಸ್ವಲ್ಪ ಪ್ರಮಾಣದ ಹಣ ಹೂಡಿಕೆ ಮಾಡಿದ್ದೆ. ಅದು ಬಿಟ್ಟು ಬೇರೆ ಯಾವುದೇ ವಹಿವಾಟು ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇನೆ. ಅವರು ಅದನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.
ದೇಶದ್ರೋಹದ ಕೆಲಸ ಮಾಡಿಲ್ಲ
ಬಿಜೆಪಿಯ ಸಣ್ಣ ಕಾರ್ಯಕರ್ತ ನಾನು. ಪೈಂಟಿಂಗ್ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ. ಈ ಸಮಯದಲ್ಲಿ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಬೇಡಿ. ತಪ್ಪಿದ್ದರೆ ಗುಂಡು ಹೊಡೆಯಿರಿ ಎಂದು ಅಳಲು ತೋಡಿಕೊಂಡರು.
ನಾವು ಯಾವುದೇ ಕಾರಣಕ್ಕೂ ದೇಶ ವಿರೋಧಿ ಕೆಲಸ ಮಾಡುವುದಿಲ್ಲ. ಎಲ್ಲರ ಜತೆ ಸ್ನೇಹದಿಂದ ಇದ್ದೇವೆ. ಮೊಬೈಲ್ ಅಂಗಡಿ ಯುವಕರಿಗೂ ನಮಗೂ ಉತ್ತಮ ವ್ಯಾವಹಾರಿಕ ಬಾಂಧವ್ಯ ಇದೆ. ಅದನ್ನು ಸ್ಪಷ್ಟಪಡಿಸಿದ್ದೇನೆ. ತನಿಖಾಧಿಕಾರಿಗಳು ಉಳಿದವರ ಬಳಿ ಏನು ಕೇಳಿದ್ದಾರೋ ಗೊತ್ತಿಲ್ಲ ಎಂದೂ ಸಾಯಿಪ್ರಸಾದ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
ಸಂಗೀತ ವಿವಿಯಲ್ಲಿ ಕೋರ್ಸ್ ಆರಂಭ: ಕುಲಪತಿ ನಾಗೇಶ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.