Canada ಚುನಾವಣೆಯಲ್ಲಿ ಹಸ್ತಕ್ಷೇಪ: ಭಾರತ ವಿರುದ್ಧ ಟೀಕೆ
Team Udayavani, Apr 7, 2024, 6:00 AM IST
ಒಟ್ಟಾವಾ/ಹೊಸದಿಲ್ಲಿ: ಭಾರತದ ವಿರುದ್ಧ ವಿನಾಕರಣ ಆರೋಪ ಮಾಡುವ ಕೆನಡಾ ಈಗ ಹೊಸ ರಾಗ ಹಾಡಿದೆ. 2019 ಮತ್ತು 2021ರಲ್ಲಿ ಆ ದೇಶದಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾ ವಣೆಯಲ್ಲಿ ಭಾರತ ಮೂಗುತೂರಿಸಲು ಯತ್ನಿಸಿತ್ತು ಎಂಬ ಹೊಸ ಆರೋಪ ಮಾಡಿದೆ.
ಭಾರತದ ಜತೆಗೆ ಪಾಕಿಸ್ಥಾನ, ರಷ್ಯಾ ಚುನಾವಣೆಯಲ್ಲಿ ಮಧ್ಯ ಪ್ರವೇಶ ಮಾಡಿದೆ ಎಂಬುದು ಕೆನಡಾದ ಹೊಸ ತಕರಾರು. ಖಲಿಸ್ಥಾನ ಉಗ್ರ ನಿಜ್ಜರ್‌ನನ್ನು ಭಾರತವೇ ಹತ್ಯೆ ಮಾಡಿದೆ ಎಂದು ಈ ಹಿಂದೆ ಆರೋಪಿಸಿತ್ತು. 2021ರ ಚುನಾವಣೆ ಯಲ್ಲಿ ಹಸ್ತಕ್ಷೇಪ ಮಾಡಲು ಭಾರತ ಯತ್ನಿಸಿತ್ತು. ಭಾರತದ ಏಜೆಂಟ್‌ಗಳು ಖಲಿಸ್ಥಾನಿ ವಿರೋಧಿ ಭಾರತ ಪರ ಅಭ್ಯರ್ಥಿಗಳಿಗೆ ಅಕ್ರಮವಾಗಿ ಹಣಕಾಸು ನೆರವು ನೀಡಿದ್ದರೆನ್ನುವುದು ಹೊಸ ವಾದ.
ಆಧಾರರಹಿತ ಆರೋಪ: ಭಾರತ
ಕೆನಡಾ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಿದೆ ಎಂಬ ಆರೋಪವನ್ನು ಭಾರತ ಸರಕಾರ ತಳ್ಳಿಹಾಕಿದೆ. ಇದೊಂದು ಆಧಾರ ರಹಿತ ಆರೋಪವಾಗಿದ್ದು, ಬೇರೆ ದೇಶಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಮೂಗು ತೂರಿಸುವ ನೀತಿಯನ್ನು ಭಾರತ ಹೊಂದಿಲ್ಲ. ವಾಸ್ತವದಲ್ಲಿ, ಕೆನಡಾವೇ ನಮ್ಮ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡು ತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.