ಬಿಜೆಪಿಯಿಂದ ಚುನಾವಣ ಮಾಹಿತಿ ಕೈಪಿಡಿ: ಸುರೇಶ್‌ಕುಮಾರ್
Team Udayavani, Apr 8, 2024, 12:01 AM IST
ಬೆಂಗಳೂರು: ಚುನಾವಣ ನಿಯಮ ಹಾಗೂ ಚುನಾವಣೆಗೆ ಸಂಬಂಧಿಸಿದ ಕಾನೂನುಗಳ ಕೈಪಿಡಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜಕೀಯ ಪಕ್ಷಗಳು, ಪ್ರಚಾರ, ಚುನಾವಣ ಆಯೋಗ, ನೀತಿ ಸಂಹಿತೆ ಹಾಗೂ ಮಾಧ್ಯಮಗಳ ಪಾತ್ರವನ್ನು ವಿವರಿಸಲಾಗಿದೆ ಎಂದು ಮಾಜಿ ಸಚಿವ ಎಸ್. ಸುರೇಶಕುಮಾರ್ ತಿಳಿಸಿದರು.
ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, 28 ಪುಟಗಳಿರುವ ಕೈಪಿಡಿಯಲ್ಲಿ ಕ್ಯುಆರ್ ಕೋಡ್‌ಗಳನ್ನು ಕೊಡಲಾಗಿದೆ. ಅವುಗಳನ್ನು ಸ್ಕ್ಯಾನ್ ಮಾಡಿದ ಕೂಡಲೇ ಚುನಾವಣೆಗೆಂದೇ ಇರುವ ಆಯೋಗದ ಪ್ರಮುಖ ವೀಡಿಯೋಗಳು, ಆ್ಯಪ್‌ಗ್ಳು, ಅರ್ಜಿ ನಮೂನೆಗಳು, 1951ರ ಪ್ರಜಾಪ್ರತಿನಿಧಿ ಕಾಯ್ದೆ, ಮಾದರಿ ನೀತಿ ಸಂಹಿತೆ, ಪಕ್ಷಗಳಿಗೆ ಚುಹ್ನೆ ನೀಡುವ ಪ್ರಕ್ರಿಯೆ, ತಾರಾ ಪ್ರಚಾರಕರ ನಿಯೋಜನೆ, ಅರ್ಹತೆ, ಅನರ್ಹತೆ, ನಾಮಪತ್ರ ಸಲ್ಲಿಕೆ, ಜನಪ್ರತಿನಿಧಿಗಳು, ರಾಜಕೀಯ ಪಕ್ಷ, ಅದರ ಕಾರ್ಯಕರ್ತರಿಗೆ ಇರುವ ನಿಬಂಧನೆ ಇತ್ಯಾದಿ ಇರಲಿವೆ ಎಂದರು.
ಇತ್ತೀಚೆಗೆ ರಾಜಾಜಿ ನಗರದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ದಲ್ಲಿದ್ದ ವಾಜಪೇಯಿ ಪ್ರತಿಮೆಗೆ ಬಟ್ಟೆ ಸುತ್ತಿ ಮುಚ್ಚಿದ್ದರು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ರಾಜೀವ್ ಗಾಂಧಿ ವೃತ್ತದಲ್ಲಿದ್ದ ಬೃಹತ್ ಪ್ರತಿಮೆಗೆ ಮಾತ್ರ ಯಾವುದೇ ಬಟ್ಟೆಯನ್ನೂ ಸುತ್ತಿರಲಿಲ್ಲ. ಈ ಬಗ್ಗೆ ಚುನಾವಣ ಆಯೋಗದ ಗಮನ ಸೆಳೆದಾಗ ವಾಜಪೇಯಿ ಅವರ ಪ್ರತಿಮೆಗೆ ಮುಚ್ಚಿದ್ದ ಹೊದಿಕೆಯನ್ನು ತೆರವು ಮಾಡಲಾಯಿತು. ನೀತಿ ಸಂಹಿತೆ ಹೆಸರಿನಲ್ಲಿ ಇಂತಹ ಹಾಸ್ಯಾಸ್ಪದಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ನಿಯಮಗಳು ಏನಿವೆ ಎಂಬುದು ಕಾರ್ಯಕರ್ತರಿಗೂ ಗೊತ್ತಿರಬೇಕು ಎಂಬುದಕ್ಕೆ ಈ ಕೈಪಿಡಿ ಸಹಾಯವಾಗಲಿದೆ ಎಂದು ವಿವರಣೆ ನೀಡಿದರು.
ಶನಿವಾರವಷ್ಟೇ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಿದ್ದು ಪಕ್ಷದ ಕಾರ್ಯಕರ್ತರು, ಬೂತ್ ಅಧ್ಯಕ್ಷರ ಮನೆಗಳ ಮೇಲೆ ಬಿಜೆಪಿ ಚಿಹ್ನೆ ಹಾಗೂ ಬಾವುಟವನ್ನು ಅಳವಡಿಸಲಾಗಿದೆ. ಯಾವುದೇ ವ್ಯಕ್ತಿ ತನ್ನ ಖಾಸಗಿ ಸೊತ್ತು, ವಾಹನಗಳ ಮೇಲೆ ಪಕ್ಷದ ಚಿಹ್ನೆ, ಬಾವುಟವನ್ನು ಅಳವಡಿಸಿಕೊಳ್ಳಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ 18 ಮೊಕ ದ್ದಮೆಗಳಿದ್ದರೆ, ಬಿಜೆಪಿ ಅಭ್ಯರ್ಥಿಗಳ ವಿರುದ್ಧ 10 ಹಾಗೂ ಜೆಡಿಎಸ್ ಹುರಿಯಾಳುಗಳ ವಿರುದ್ಧ 5 ಪ್ರಕರಣಗಳಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.