Facebook ಷೇರು ಮಾರುಕಟ್ಟೆ ಹೂಡಿಕೆ ಜಾಹೀರಾತು ನಂಬಿ 46 ಲಕ್ಷ ರೂ. ಕಳೆದುಕೊಂಡರು

Team Udayavani, Apr 8, 2024, 12:43 AM IST

Facebook ಷೇರು ಮಾರುಕಟ್ಟೆ ಹೂಡಿಕೆ ಜಾಹೀರಾತು ನಂಬಿ 46 ಲಕ್ಷ ರೂ. ಕಳೆದುಕೊಂಡರು

ಪುತ್ತೂರು: ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಬಗ್ಗೆ ಬಂದ ಜಾಹೀರಾತನ್ನು ನಂಬಿ ವ್ಯಕ್ತಿಯೋರ್ವರು 46.1 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಹಣ ಕಳೆದುಕೊಂಡ ಸಾಲ್ಮರ ಆಶಿಯಾನ ಯು. ಅಬ್ದುಲ್ಲಾ ಹಾಜಿ ಅವರ ಪುತ್ರ ಮುಹಮ್ಮದ್‌ ಅನ್ಸಾಫ್‌ ಎಂ. (40) ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 20-02-2024ರಂದು ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಬಂದ ಜಾಹೀರಾತು ನೋಡಿದಾಗ ಅದರಲ್ಲಿ “ಗುಡ್‌ ಇನ್‌ಕಂ ರಿಸಲ್ಟ್’ ಎಂಬುದಾಗಿ ಇದ್ದು, ಅದರಲ್ಲಿದ್ದ ಲಿಂಕನ್ನು ತೆರೆದಾಗ ವಾಟ್ಸ್‌ ಆ್ಯಪ್‌ ಪೇಜ್‌ ಕಾಣಿಸಿದೆ. ಪೇಜ್‌ನಲ್ಲಿ ಅಪರಿಚಿತ ವ್ಯಕ್ತಿಯು ಕಂಪೆನಿಯಲ್ಲಿರುವ ಸ್ಟಾಕ್‌ನ ಬಗ್ಗೆ ಡೀಟೈಲ್ಸ್‌ ನೀಡಿ ಬೇರೊಂದು ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಜಾಯಿನ್‌ ಮಾಡಿಸಿದ್ದು, ಅದರಲ್ಲಿ ಗ್ರೂಪ್‌ ಅಡ್ಮಿನ್‌ ದೀಪ್ತಿ ಶರ್ಮ ಅವರ ಹೆಸರಿನಲ್ಲಿತ್ತು.

ವಾಟ್ಸ್‌ ಆ್ಯಪ್‌ ಗ್ರೂಪ್‌ನವರು ಹಣ ಹೂಡಿಕೆ ಮಾಡಲು ಬೇರೊಂದು ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಜಾಯಿನ್‌ ಆಗುವಂತೆ ತಿಳಿಸಿ, ನೀಡಿದ ಲಿಂಕ್‌ ಒತ್ತಿದಾಗ ವಿಕಿಂಗ್‌ “ಗ್ಲೋಬಲ್‌ ಇನ್ವೆಸ್ಟರ್ಸ್‌’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ ತೆರೆದಿದ್ದು, ಅದರಲ್ಲಿ ಸುಮಾರು 100ಕ್ಕಿಂತ ಹೆಚ್ಚಿನ ಸದಸ್ಯರು ಇದ್ದರು.

ವಾಟ್ಸ್‌ ಆ್ಯಪ್‌ ಗ್ರೂಪಿನಲ್ಲಿ ಟ್ರೇಡಿಂಗ್‌ ಬಗ್ಗೆ ಮಾಹಿತಿಯನ್ನು ನೀಡಿ ಆ್ಯಪ್‌ ಡೌನ್‌ಲೋಡ್‌ ಮಾಡಲು ತಿಳಿಸಿದ್ದು, ಅದರಂತೆ ಅನ್ಸಾಫ್‌ ವಿಕಿಂಗ್‌ ಟ್ರೇಡಿಂಗ್‌ ಎಂಬ ಹೆಸರಿನ ಆ್ಯಪ್‌ ಡೌನ್‌ಲೋಡ್‌ ಮಾಡಿ ಅದರಲ್ಲಿ ತನ್ನ ಹೆಸರಿನಲ್ಲಿ ಟ್ರೇಡಿಂಗ್‌ ಖಾತೆ ತೆರೆದು ಅದಕ್ಕೆ ತನ್ನ ಆಧಾರ್‌ ಕಾರ್ಡ್‌, ಮೊಬೈಲ್‌ ನಂಬರ್‌, ಬ್ಯಾಂಕ್‌ ವಿವರವನ್ನು ಹಾಕಿದ್ದಾರೆ. ಆ್ಯಪ್‌ಗೆ ಹಣ ಹಾಕುವ ಬಗ್ಗೆ ಮಾಹಿತಿಯನ್ನು ವ್ಯಕ್ತಿಯೊಬ್ಬ ವಾಟ್ಸ್‌ ಆ್ಯಪ್‌ನಲ್ಲಿ ಕೋಡ್‌ ಹಾಗೂ ವಿವಿಧ ಬ್ಯಾಂಕ್‌ ಖಾತೆಗಳ ವಿವರಗಳನ್ನು ನೀಡಿದಂತೆ 21-02-2024ರಂದು 10,000 ರೂ. ಹಣವನ್ನು ಪಾವತಿಸಿದ್ದಾರೆ.

ಅನಂತರ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಲು ತಿಳಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್‌ ಖಾತೆಗಳಿಗೆ ಹಂತ-ಹಂತವಾಗಿ ಒಟ್ಟು 46,10,000 ರೂ. ಹಣವನ್ನು ಪಾವತಿಸಿದ್ದಾರೆ. ಹಂತ-ಹಂತವಾಗಿ ಒಟ್ಟು 2,00,000 ರೂ. ಹಣ ಅನ್ಸಾಫ್‌ ಎರಡು ಖಾತೆಗೆ ಮರು ಜಮೆಯಾಗಿದ್ದು, ಉಳಿದ ಹಣವನ್ನು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಟಾಪ್ ನ್ಯೂಸ್

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್

Militants opened fire on an army vehicle at Kathua

Kathua; ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kadaba: ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಸಹಾಯಕ್ಕಾಗಿ ಬೊಬ್ಬಬಿಡುತ್ತಿರುವ ಯುವಕ

Kadaba: ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರ ನದಿಯ ಮಧ್ಯೆ ಸಿಲುಕಿದ ಯುವಕನ ರಕ್ಷಣೆ

Bantwal ತಾಲೂಕಿನಲ್ಲಿ 6 ತಿಂಗಳಲ್ಲಿ 35 ಮಂದಿಗೆ ಡೆಂಗ್ಯೂ

Bantwal ತಾಲೂಕಿನಲ್ಲಿ 6 ತಿಂಗಳಲ್ಲಿ 35 ಮಂದಿಗೆ ಡೆಂಗ್ಯೂ

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

Dinesh Gundu Rao 7 ಆರೋಗ್ಯ ಕ್ಷೇಮ ಕೇಂದ್ರ

Dinesh Gundu Rao 7 ಆರೋಗ್ಯ ಕ್ಷೇಮ ಕೇಂದ್ರ

Charmadi Ghat ರಸ್ತೆಯಲ್ಲಿ ಪೊಲೀಸ್‌ ಗಸ್ತು: ಪ್ರವಾಸಿಗರ ಮೋಜು ನಿಯಂತ್ರಣಕ್ಕೆ ಕಣ್ಗಾವಲು

Charmadi Ghat ರಸ್ತೆಯಲ್ಲಿ ಪೊಲೀಸ್‌ ಗಸ್ತು: ಪ್ರವಾಸಿಗರ ಮೋಜು ನಿಯಂತ್ರಣಕ್ಕೆ ಕಣ್ಗಾವಲು

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-weewq

Hindus ಹೇಳಿಕೆ ;ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಬೆಂಬಲ

1-wewewq

Ullal: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.