Attendance ಹಾಕಿದ ಕೆಪಿಸಿಸಿ ಕಾರ್ಯಾಧ್ಯಕ್ಷ; ನಿರಾಸಕ್ತರ ಬದಲಾವಣೆಗೆ ಸೂಚನೆ!
ಉತ್ತರ ಕನ್ನಡದಲ್ಲಿ ಮಂಜುನಾಥ ಭಂಡಾರಿ ಆಕ್ರೋಶ...
Team Udayavani, Apr 8, 2024, 8:32 PM IST
ಶಿರಸಿ: ಕೆಪಿಸಿಸಿ ಕಾರ‍್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ನಡೆಸಿದ ಜಿಲ್ಲಾ ಮಟ್ಟದ ಕಾಂಗ್ರೆಸ್ ವಿವಿಧ ಸೆಲ್‌ಗಳ ಸಭೆಯಲ್ಲಿ, ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸ್ವತಃ ಮೇಷ್ಟ್ರಂತೆ ಮಕ್ಕಳ ಹಾಜರಾತಿ ಹಾಕಿದಂತೆ ಹಾಜರಾತಿ ಕೂಡ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಉತ್ತರ ಕನ್ನಡಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದ ಮಂಜುನಾಥ ಭಂಡಾರಿ ಅವರು ರವಿವಾರ ವಿವಿಧ ಸೆಲ್‌ಗಳ, ಜಿಲ್ಲಾ ಕಾರ್ಯಕಾರಣಿಯ ಸಭೆ ನಡೆಸಿದ್ದರು. ಆದರೆ, ಸಭೆಯಲ್ಲಿ ಅನುಪಸ್ಥಿತಿ ಇದ್ದವರ ಪತ್ತೆಗೆ ಇದೇ ಪ್ರಥಮ ಬಾರಿಗೆ ಈ ವಿಧಾನ ನಡೆಸಿದ್ದು, ಕೆಲವು ಪ್ರಮುಖರಿಗೆ ಮುಜುಗರವನ್ನೂ ತಂದಿಟ್ಟಿತು. ಆದರೆ, ಸಭೆಗೆ ಬಾರದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಂಡಾರಿ ಅವರು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮಂಜುನಾಥ ಅವರು ಸಿಟ್ಟಾಗಲು, ಜಿಲ್ಲೆಯ 14 ಬ್ಲಾಕ್ ಅಧ್ಯಕ್ಷರಲ್ಲಿ ಮೂವರು ಗೈರಾಗಿದ್ದುದು.
134 ಜಿಲ್ಲಾ ಕಾರ್ಯಕಾರಿ ಸದಸ್ಯರಲ್ಲಿ 54 ಜನರು ಮಾತ್ರ ಹಾಜರಾಗಿದ್ದುದು. ಇನ್ನು ಒಂದು ತಿಂಗಳು ಲೋಕಸಭಾ ಚುನಾವಣೆಗೆ ಸಮಯ ಇದೆ. ಇಷ್ಟು ಕಡಿಮೆ ಸಮಯದಲ್ಲೂ ಪ್ರಮುಖರೇ ನಿರ್ಲಕ್ಷ್ಯ ಮಾಡಿದರೆ ಸಹಿಸಲು ಸಾಧ್ಯ ಇಲ್ಲ. ಕೆಲಸ ಮಾಡಲು ಆಗದೇ ಇದ್ದರೆ ಇನ್ನೊಬ್ಬರಿಗೆ ಅವಕಾಶ ಕೊಡುತ್ತೇವೆ ಎಂದೂ ಸಭೆಯಲ್ಲಿ ಭಂಡಾರಿ ಹೇಳಿದ್ದಾರೆ ಎಂದು ಪಕ್ಷದ ಪ್ರಮುಖರೊಬ್ಬರು ತಿಳಿಸಿದ್ದಾರೆ.
ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಉತ್ತರ ಕನ್ನಡಕ್ಕೆ ಸ್ವತಃ ಸಿಎಂ ಕದಂಬೋತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ಕರೆತಂದಾಗಲೇ ಅವರಿಗೇ ಟಿಕೆಟ್ ಎಂಬ ಗುಸುಗುಸು ಕೇಳೀ ಬಂದಿತ್ತು. ನಂತರ ಅರಣ್ಯ ಅತಿಕ್ರಮಣದಾರರ ಪರ ಹೋರಾಟ ಮಾಡುತ್ತಿರುವ ರವೀಂದ್ರ ನಾಯ್ಕ, ಅಶ್ವಿನ್ ಭೀಮಣ್ಣ ನಾಯ್ಕ ಹೆಸರೂ ಮುಂಚೂಣಿಗೆ ಬಂದಿತ್ತು. ಆದರೆ, ಕೊನೇ ಘಳಿಗೆಯಲ್ಲಿ ಅಂಜಲಿ ಹೆಸರು ಪ್ರಕಟಗೊಂಡು ಕ್ಷೇತ್ರದ ಓಡಾಟ ಹೆಚ್ಚಿಸಿಕೊಂಡಿದ್ದಾರೆ. ಮೊನ್ನೆ ಬೆಂಗಳೂರಿಂದ ಬಿ ಫಾರಂ ಕೂಡ ತಂದಿದ್ದಾರೆ. ಮಠಾಧೀಶರ, ದೇವಸ್ಥಾನದ ಓಡಾಟ ಮಾಡಿದ್ದಾರೆ.
ಇಡೀ ದಿನ ನಡೆದ ವಿವಿಧ ಸೆಲ್‌ಗಳ ಸಭೆಯಲ್ಲಿ ಅನೇಕರು ಗೈರಾಗಿದ್ದರು. ಹಳಬರೂ ಕೆಲಸ ಮಾಡಲ್ಲ ಎಂದರೆ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಅವರ ಮಾತು ಅನೇಕರಿಗೆ ನುಂಗಲಾರದ ತುತ್ತಾಗಿದೆ. ತನ್ಮಧ್ಯೆ ಚುನಾವಣೆ ಅಖಾಡ ಸಮೀಪ ಆಗುತ್ತಿದ್ದಂತೆ, ಅಭ್ಯರ್ಥಿ ಬಿರುಸಿನ ಓಡಾಟ ನಡೆಸುತ್ತಿದ್ದರೂ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖರು ಗೈರಾಗುತ್ತಿರುವದರ ಹೊಗೆಯ ಮೂಲ ಸಭೆಯಲ್ಲಿದ್ದ ಕಾಂಗ್ರೆಸ್ಸಿಗರಿಗೂ ಗೊತ್ತಾಗಿಲ್ಲ ಎನ್ನಲಾಗಿದೆ. ಈ ಮಧ್ಯೆ ಸುದ್ದಿಗೋಷ್ಠಿಯಲ್ಲೂ ಮಾತನಾಡಿದ್ದ ಮಂಜುನಾಥ ಅವರು, ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯ ಮಾಡದ ಪ್ರಮುಖರ ಹುದ್ದೆ ಬದಲಾವಣೆಗೂ ಸೂಚಿಸುವದಾಗಿ ಹೇಳಿದ್ದರು.
ಈ ಮಧ್ಯೆ ಕೆಲವು ಪ್ರಭಾವಿಗಳೇ ರವಿವಾರದ ಸಭೆಗೆ ಗೈರಾಗಿದ್ದರು. ಅವರನ್ನು ಆ ಹುದ್ದೆಯಿಂದ ಚುನಾವಣೆಯ ಕಾಲ ಘಟ್ಟದಲ್ಲಿ ಬದಲಾಯಿಸಿದರೆ ಅದು ಚುನಾವಣೆಯ ಮೇಲೂ ಪರಿಣಾಮ ಆಗಬಹುದು ಎಂಬುದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ, ಇದ್ದೂ ಇಲ್ಲದಂತೆ ಇರುವವರನ್ನು ಇಟ್ಟುಕೊಂಡು ಚುನಾವಣೆ ನಡೆಸುವದು ಹೇಗೆ ಎಂಬುದು ಇನ್ನೊಂದು ಪ್ರಶ್ನೆಯಾಗಿದೆ.
ಈ ಮಧ್ಯೆ ಪಕ್ಷದಲ್ಲಿ ಸಕ್ರೀಯವಾಗಿ ಕೆಲಸ ಮಾಡಿದ್ದ ಅನೇಕರನ್ನು ಈ ಚುನಾವಣೆಯ ಸಂಘಟನೆಯಲ್ಲಿ ದೂರ ಇಡಲಾಗುತ್ತಿದೆ ಎಂಬ ಮಾತುಗಳೂ ಕೇಳಿ ಬಂದಿದೆ. ಚುನಾವಣೆ ಘೋಷಣೆಗೂ ಮೊದಲು ಗ್ಯಾರಂಟಿ ಅನುಷ್ಠಾನ ಸಮಿತಿಗೆ ನೇಮಕವಾದ ಅನೇಕರು ಸಭೆಗೆ ಬಾರದಿರುವರಿಗೆ ತೂಗು ಕತ್ತಿಯೇ ಎಂದು ಕಾದುನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.