![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 8, 2024, 9:27 PM IST
ಮಂಗಳೂರು: ದನಗಳನ್ನು ಕಳವುಗೈದು ವಧೆ ಮಾಡಿ ಅವುಗಳ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಕಣ್ಣೂರು ಕುಂಡಾಲದ ಬದ್ರುದ್ದೀನ್ (65), ಜಿ. ಅಬ್ದುಲ್ ಮಜೀದ್ (43), ಖಲೀಲ್ (35) ಮತ್ತು ಹರೇಕಳದ ಮಹಮ್ಮದ್ (56) ಬಂಧಿತ ಆರೋಪಿಗಳು. ಕುಂಡಾಲದಲ್ಲಿರುವ ಬದ್ರುದ್ದೀನ್‌ನ ಮನೆಯಲ್ಲಿ ಮಜೀದ್, ಮಹಮ್ಮದ್, ಖಲೀಲ್, ಅನ್ಸಾರ್ ಮತ್ತು ಇತರರು ಸೇರಿಕೊಂಡು ಕಳವು ಮಾಡಿಕೊಂಡು ಬಂದ ಗೋವುಗಳನ್ನು ವಧೆ ಮಾಡಿ ಮಾರಾಟದ ಪ್ರಯತ್ನದಲ್ಲಿದ್ದರು.
ಆ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಧೆ ಮಾಡಿದ್ದ ದನದ ಕಳೇಬರ ಮತ್ತು ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಅಂದಾಜು ಮೌಲ್ಯ 32,850 ರೂ. ಆಗಿದೆ. ಈ ಪ್ರಕರಣದಲ್ಲಿ ಇನ್ನೂ 5 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.