Koppal Lok Sabha Constituency; ಕೃಷಿ-ಕೈಗಾರಿಕೆ ವಲಯಕ್ಕೂ 371(ಜೆ) ಮೀಸಲಾತಿ
ರಾಜಕೀಯ ಹಿನ್ನೆಲೆಯ ಕುಟುಂಬ ಸದಸ್ಯನಾಗಿದ್ದರಿದ ಸ್ಪರ್ಧೆ ಹೊಸತಾದರೂ ಚುನಾವಣೆ ಹೊಸದಲ್ಲ
Team Udayavani, Apr 9, 2024, 8:00 AM IST
ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಕೆ.ಶರಣಪ್ಪ ಅವರ ಪುತ್ರ, ಎಲುಬು ಮತ್ತು ಕೀಲು ತಜ್ಞರಾದ ಡಾ| ಬಸವರಾಜ ಕ್ಯಾವಟರ್ ಅವರು ದೇಶ-ವಿದೇಶಗಳಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಹೆಸರಾದವರು. ತಂದೆಯಂತೆ ರಾಜಕೀಯದಲ್ಲಿ ಜನಸೇವೆ ಮಾಡಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಪ್ರೇರಣೆಯಿಂದ ರಾಜಕೀಯಕ್ಕೆ ಬಂದಿರುವ ಇವರು, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಎದುರಾಳಿಯಾಗಿದ್ದಾರೆ.
ಜೀವನದಲ್ಲಿ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತದೆ?
ನನಗೆ ಈ ಲೋಕಸಭೆ ಚುನಾವಣೆ ಹೊಸತು. ಆದರೆ ತಂದೆಯವರ ಕಾಲದಿಂದಲೂ ಹಲವು ಚುನಾವಣೆಗಳನ್ನು ಎದುರಿಸಿದ ಅನುಭವವಿದೆ. ತಂದೆ ಶಾಸಕ ಹಾಗೂ ಸಹೋದರ ಜಿ.ಪಂ. ಸದಸ್ಯರಾಗಿದ್ದರು. ಈಗ ಬಿಜೆಪಿ ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿರುವುದು ಖುಷಿ ತರಿಸಿದೆ. ಗೆಲ್ಲುವೆ ಎನ್ನುವ ವಿಶ್ವಾಸವಿದೆ.
ಚುನಾವಣೆಗೆ ಸ್ಪರ್ಧಿಸಬೇಕೆಂದು ನಿಮಗೆ ಅನ್ನಿಸಿದ್ದು ಯಾವಾಗ? ಯಾಕೆ ಮತ್ತು ಏನು ಪ್ರೇರಣೆ ಏನು?
ವೃತ್ತಿಯಲ್ಲಿ ವೈದ್ಯನಾಗಿದ್ದು, ಅಲ್ಲಿ ಜನಸೇವೆ ಮಾಡುತ್ತಿದ್ದೆ. ತಂದೆ ಶಾಸಕರಾಗಿದ್ದಾಗ ಹಾಗೂ ಅನಂತರದ ದಿನಗಳಲ್ಲಿ ಕ್ಷೇತ್ರದ ಜನತೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಅಭಿವೃದ್ಧಿ ವಿಷಯಗಳನ್ನು ಪ್ರಸ್ತಾವಿಸುತ್ತಿದ್ದರು. ಅವರ ಸಂಕಷ್ಟಕ್ಕೆ ನೆರವಾಗಬೇಕು. ನಾನೂ ಜನಸೇವೆ ಮಾಡಬೇಕು ಎನ್ನುವ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸಬೇಕೆನಿಸಿತು. ಪ್ರಧಾನಿ ನರೇಂದ್ರ ಮೋದಿ ಅವರ ಕನಸುಗಳು, ಯೋಜನೆಗಳು, ಮಾಡಿದ ಅಭಿವೃದ್ಧಿ ಪರ್ವ ರಾಜಕೀಯಕ್ಕೆ ಬರುವಂತೆ ಪ್ರೇರೇಪಿಸಿತು.
ರಾಜಕೀಯದಲ್ಲಿ ನಿಮ್ಮ ಗಾಡ್ ಫಾದರ್ ಯಾರು ಮತ್ತು ಯಾಕೆ?
ಪ್ರಧಾನಿ ನರೇಂದ್ರ ಮೋದಿ ಅವರೇ ಗಾಡ್‌ಫಾದರ್. ಜತೆಗೆ ನನ್ನ ತಂದೆ ಹಾಗೂ ರಾಜ್ಯ ನಾಯಕರಾದ ಬಿ. ಎಸ್. ಯಡಿಯೂರಪ್ಪ ಅವರ ಆಡಳಿತ ವೈಖರಿ ನನಗೆ ಮಾದರಿ.
ಮೊದಲ ಪ್ರಯತ್ನದಲ್ಲೇ ನೀವು ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ನಾನು ಚುನಾವಣೆಯ ಸ್ಪರ್ಧೆಗಿಳಿದಿ ದ್ದೇನೆ. ವೈದ್ಯ ಸೇವೆ ಜತೆಗೆ ತಂದೆ ಯಂತೆ ಜನಸೇವೆ ಮಾಡಬೇಕು ಎನ್ನುವ ಉತ್ಸಾಹವಿದೆ. ಜನರೂ ಪ್ರೇರಣೆ ನೀಡುತ್ತಿದ್ದಾರೆ. ಮನೆಯ ಮಗನಂತೆ, ಕುಟುಂಬದ ಸದಸ್ಯನಂತೆ ಸ್ವಾಗತಿಸುತ್ತಿ
ದ್ದಾರೆ. ಇದು ನಿಜಕ್ಕೂ ಸಂತಸ ತರಿಸಿದೆ.
ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ಚುನಾವಣೆಗೆ ನಾನು ಸ್ಪರ್ಧಿಸಿರ ಬಹುದು. ಆದರೆ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎನ್ನುವುದು ಜನರ ಆಶಯ. ಜತೆಗೆ ಅವರ ಆಡಳಿತದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲು ಜನತೆ ನನ್ನನ್ನು ಬೆಂಬಲಿಸಬೇಕಿದೆ.
ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? ಪ್ರಮುಖ ಕಾರಣಗಳನ್ನು ತಿಳಿಸಿ?
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶ ದಲ್ಲಿ ಮಾಡಿರುವ ಕಾರ್ಯಗಳು, ಜೆಡಿಎಸ್- ಬಿಜೆಪಿ ಮೈತ್ರಿ, ಮೋದಿ ಅವರನ್ನು ಮೂರನೇ ಅವಧಿಗೆ ಪ್ರಧಾನಿ ಮಾಡಲು ಜನ ನಿರ್ಧರಿಸಿರುವುದು, ಶಾಸಕ ಜನಾರ್ದನ ರೆಡ್ಡಿ ಅವರ ಸೇರ್ಪಡೆಯಿಂದ ಬಿಜೆಪಿಗೆ ಮತ್ತಷ್ಟು ಬಲ ಬಂದಿರುವುದು… ಹೀಗೆ ಹಲವಾರು ಕಾರಣಗಳಿಂದ ನನಗೆ ಗೆಲುವಾಗಲಿದೆ.
ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕು ಎಂದಿದ್ದೀರಿ ?
ಉತ್ಕೃಷ್ಟ ಶಿಕ್ಷಣಕ್ಕೆ ಒತ್ತು ಕೊಡುವುದು, ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು, ಕೊಪ್ಪಳ ಬಿ ಸ್ಕೀಂ ಜಾರಿ, ಕಲ್ಯಾಣ ಕರ್ನಾಟಕದ 371(ಜೆ) ಮೀಸಲಾತಿ ಕೃಷಿ-ಕೈಗಾರಿಕೆ ವಲಯಕ್ಕೂ ವಿಸ್ತರಣೆಗೆ ಹೋರಾಟ ನನ್ನ ಆದ್ಯತೆ. ಕೃಷಿ-ಕೈಗಾರಿಕೆಗೆ ಮೀಸಲಾತಿ ದೊರೆತರೆ ಈ ಭಾಗದ ಲಕ್ಷಾಂತರ ಜನರಿಗೆ ವರದಾನವಾಗಲಿದೆ. ಅವೆಲ್ಲವನ್ನು ದಿಲ್ಲಿ ಮಟ್ಟದಲ್ಲಿ ಚರ್ಚಿಸಲಿದ್ದೇನೆ.
ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು ?
ಅಯೋಧ್ಯೆಯ ರಾಮ ಮಂದಿರದಂತೆ ನಮ್ಮ ಕ್ಷೇತ್ರದಲ್ಲಿ ಅಂಜನಾದ್ರಿಯ ಅಭಿವೃದ್ಧಿ ಮಾಡುವುದು ನನ್ನ ಕನಸಾಗಿದೆ. ಅಂಜನಾದ್ರಿ ಜತೆಗೆ ಸುತ್ತಲಿನ ನೂರಾರು ಐತಿಹಾಸಿಕ, ಪಾರಂಪರಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು, ಕೃಷಿ ಸಂಬಂಧಿ ಕೈಗಾರಿಕೆ ತರುವುದು ಪ್ರಮುಖ ಯೋಜನೆಗಳಲ್ಲಿ ಸೇರಿದೆ.
ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ ಐದು ಕನಸುಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ರೈಲು- ಹೆದ್ದಾರಿ- ವಾಯು ಮಾರ್ಗ ವಿಸ್ತರಣೆ, ಪ್ರವಾಸೋದ್ಯಮಕ್ಕೆ ಕಾಯಕಲ್ಪ, ನೀರಾವರಿ ಯೋಜನೆಗಳಿಗೆ ಶಕ್ತಿ, ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹೀಗೆ ಹತ್ತಾರು ಕನಸುಗಳಿವೆ. ಮೋದಿಜಿ ಸರಕಾರ, ನಮ್ಮ ನಾಯಕರೊಂದಿಗೆ ಸಮನ್ವಯದಿಂದ ಅನುದಾನ ತಂದು ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುವೆ.
ಚುನಾವಣೆಯ ವೇಳೆ ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿ ಸುತ್ತೀರಿ?
ನಮ್ಮ ಕ್ಷೇತ್ರದಲ್ಲಿ ಯಾರೂ ಅಸಮಾಧಾ ನಿತರಿಲ್ಲ. ಎಲ್ಲರೂ ನಮ್ಮೊಂದಿಗೆ ಇದ್ದಾರೆ. ಸಂಸದ ಸಂಗಣ್ಣ ಕರಡಿ ಅವರು ಪ್ರಚಾರಕ್ಕೆ ಬರುತ್ತಿದ್ದಾರೆ. ಹಿರಿಯ ನಾಯಕರ ಮಾರ್ಗದರ್ಶನ, ಸಲಹೆ ಪಡೆದು ಮುನ್ನಡೆಯುತ್ತಿದ್ದೇನೆ. ಎಲ್ಲರ ಸಹಕಾರವೂ ನನಗಿದೆ.
– ದತ್ತು ಕಮ್ಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.