![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 9, 2024, 12:53 PM IST
ಹೊಸದಿಲ್ಲಿ: ಅರವಿಂದ್ ಕೇಜ್ರಿವಾಲ್‌ಗೆ ಬೆಂಬಲ ನೀಡಲು ಹಾಗೂ ಲೋಕಸಭೆ ಚುನಾವಣೆಗಾಗಿ ಆಪ್ “ಜೈಲ್ ಕಾ ಜವಾಬ್ ಓಟ್ ಸೇ'(ಮತಗಳ ಮೂಲಕ ಜೈಲಿಗೆ ಉತ್ತರ) ಅಭಿಯಾನವನ್ನು ಸೋಮವಾರ ಆರಂಭಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಪ್‌ನ ರಾಜ್ಯಸಭಾ ಎಂಪಿ ಸಂದೀಪ್ ಪಾಠಕ್ ಅವರು, “ದೊಡ್ಡ ಸಂಚಿನ ಭಾಗವಾಗಿ ಕೇಜ್ರಿವಾಲ್‌ರನ್ನು ಬಂಧಿಸಲಾಗಿದೆ. ಜೈಲ್ ಕಾ ಜವಾಬ್ ಓಟ್ ಸೇ ಅಭಿಯಾನದ ಭಾಗವಾಗಿ ಕಾರ್ಯಕರ್ತರು ಮತ್ತು ನಾಯಕರು ಆಪ್ ಸ್ಪರ್ಧಿಸಿರುವ ದಿಲ್ಲಿಯ 4 ಲೋಕಸಭೆ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಮಾಡಲಿದ್ದಾರೆ’ ಎಂದು ತಿಳಿಸಿದರು. ಜತೆಗೆ, “ನೀವು ಸರ್ವಾಧಿಕಾರವನ್ನು ಸೋಲಿಸಬೇಕು. ಮತದಾನ ಮಾಡುವ ವೇಳೆ ಕೇಜ್ರಿವಾಲ್ ಅವರ ಮುಖವನ್ನು ನೆನಪಿಸಿಕೊಂಡು ಹಕ್ಕು ಚಲಾಯಿಸಬೇಕು’ ಎಂದು ಮತದಾರರಿಗೆ ಕರೆ ನೀಡಿದ್ದಾರೆ.
ಕೇಜ್ರಿ ಪಿಎ, ಆಪ್ ಶಾಸಕ ವಿಚಾರಣೆ: ಈ ಮಧ್ಯೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಿಎ ಬಿಭವ್ ಕುಮಾರ್ ಹಾಗೂ ಆಪ್ ಶಾಸಕ ದುರ್ಗೇಶ್ ಪಾಠಕ್ ಅವರನ್ನು ಇ.ಡಿ. ವಿಚಾರಣೆ ನಡೆಸಿದೆ. ಈ ಇಬ್ಬರನ್ನು ಇ.ಡಿ. ಈ ಹಿಂದೆಯೂ ವಿಚಾರಣೆಗೊಳಪಡಿಸಿತ್ತು.
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
You seem to have an Ad Blocker on.
To continue reading, please turn it off or whitelist Udayavani.