Tragedy: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಮೃತ್ಯು… ಓರ್ವನ ರಕ್ಷಣೆ
Team Udayavani, Apr 10, 2024, 3:59 PM IST
ಮಹಾರಾಷ್ಟ್ರ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಜೀವ ಕಳೆದುಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಅಹಮದ್‌ನಗರದ ವಾಡ್ಕಿ ಗ್ರಾಮದಲ್ಲಿ ನಡೆದಿದೆ.
ವಾಡ್ಕಿ ಗ್ರಾಮದ ವ್ಯಕ್ತಿಯೊಬ್ಬರು ಮುದ್ದಾಗಿ ಸಾಕಿದ ಬೆಕ್ಕೊಂದು ಕಾಣೆಯಾಗಿತ್ತು ಎಲ್ಲ ಕಡೆ ಹುಡುಕಾಡಿದರೂ ಬೆಕ್ಕಿನ ಪತ್ತೆಯಾಗಲಿಲ್ಲ ಮಧ್ಯರಾತ್ರಿವರೆಗೂ ಮನೆಮಂದಿ ಬೆಕ್ಕು ಮನೆಗೆ ಬರಬಹುದು ಎಂದು ಕಾಯುತಿದ್ದರು ಆದರೆ ಬೆಕ್ಕು ಬರಲೇ ಇಲ್ಲ ಕೊನೆಗೆ ಎಲ್ಲ ಕಡೆ ಹುಡಕಾಡಿದಾಗ ಪಾಳುಬಿದ್ದ ಬಾವಿಯಲ್ಲಿ ಬೆಕ್ಕು ಕೂಗುವ ಸದ್ದು ಕೇಳಿದೆ.
ಈ ಪಾಳುಬಿದ್ದ ಬಾವಿಯನ್ನು ಜೈವಿಕ ಅನಿಲ ಪಿಟ್ ಆಗಿ ಬಳಸಲಾಗುತ್ತಿತ್ತು ಈ ವೇಳೆ ಬೆಕ್ಕಿನ ರಕ್ಷಣೆಗೆ ಒಬ್ಬೊಬ್ಬರಾಗಿ ಇಳಿದಿದ್ದಾರೆ ಆದರೆ ಬಾವಿಗೆ ಇಳಿದ ವ್ಯಕ್ತಿ ಮೇಲಕ್ಕೆ ಬರದೇ ಇರುವುದನ್ನು ಕಂಡು ಇನ್ನೋರ್ವ ವ್ಯಕ್ತಿ ಬಾವಿಗೆ ಹೀಗೆ ಐದು ಮಂದಿ ಬಾವಿಗೆ ಇಳಿದವರು ಬಾವಿಯಲ್ಲೇ ಉಸಿಗಟ್ಟಿ ಮೃತಪಟ್ಟಿದ್ದಾರೆ.
ಬಾವಿಗೆ ಇಳಿದ ಆರು ಜನರ ಪೈಕಿ ಐವರು ಮಂದಿ ಬಾವಿಯಲ್ಲೇ ಸಾವನ್ನಪ್ಪಿದ್ದರೆ. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಇಳಿದಿದ್ದ ಒಬ್ಬನನ್ನು ಪೊಲೀಸರು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ತಂಡ ಐದು ಮೃತದೇಹಗಳನ್ನು ಹೊರತೆಗೆದಿದೆ. ಅಹಮದ್‌ನಗರದ ನೆವಾಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಧನಂಜಯ್ ಜಾಧವ್ ತಿಳಿಸಿದ್ದಾರೆ.
#WATCH | Five people died in a bid to save a cat who fell into an abandoned well (used as a biogas pit) in Wadki village of Ahmednagar, Maharashtra, late at night.
According to Dhananjay Jadhav, Senior Police Officer of Nevasa Police station, Ahmednagar, “A rescue team… pic.twitter.com/fb4tNY7yzD
— ANI (@ANI) April 10, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.