Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್ 75000ಕ್ಕೆ ಜಿಗಿತ
ಷೇರು ಪೇಟೆ ಸೂಚ್ಯಂಕ 75000!
Team Udayavani, Apr 10, 2024, 10:49 PM IST
ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಸಂವೇದಿ ಸೂಚ್ಯಂಕ ಮಂಗಳವಾರ 75 ಸಾವಿರಕ್ಕೆ ತಲುಪಿ ದಾಖಲೆ ನಿರ್ಮಿಸಿತ್ತು. ಅದೇ ಏರಿಕೆಯನ್ನು ಬಾಂಬೆ ಷೇರು ಪೇಟೆಯಲ್ಲಿ ಸೂಚ್ಯಂಕ ಬುಧವಾರವೂ ಕಾಯ್ದು ಕೊಂಡಿದೆ. ದಿನಾಂತ್ಯಕ್ಕೆ 354.45 ರಲ್ಲಿ ಸೂಚ್ಯಂಕ ಮುಕ್ತಾಯಗೊಂಡು 75038ರಲ್ಲಿ ಅಂತ್ಯಾಗಿದೆ. ಮಧ್ಯಂತರದಲ್ಲಿ 421 ಅಂಕ ಏರಿಕೆಯಾಗಿ 75105 ವರೆಗೆ ಏರಿಕೆಯಾಗಿದೆ.
ಇನ್ನು ನಿಫ್ಟಿ ಸೂಚ್ಯಂಕ ಕೂಡ ಬುಧ ವಾರ 111 ಪಾಯಿಂಟ್ಸ್ ಏರಿಕೆಯಾಗಿ 22753 ಪಾಯಿಂಟ್ಸ್‌ಗೆ ಮುಕ್ತಾಯ ಗೊಂಡಿತು. ಮಧ್ಯಂತರದಲ್ಲಿ ನಿಫ್ಟಿ ಸೂಚ್ಯಂಕ 22756 ಪಾಯಿಂಟ್ಸ್ ವರೆಗೆ ಜಿಗಿದಿತ್ತು. ಪ್ರಧಾನಿ ಮೋದಿ 2014 ರಲ್ಲಿ ಅಧಿಕಾರಕ್ಕೆ ಬಂದಿದ್ದ ಅವಧಿಯಲ್ಲಿ ಬಾಂಬೆ ಷೇರು ಪೇಟೆ ಸೂಚ್ಯಂಕ 25000ದಷ್ಟೇ ಇತ್ತು. ಮೋದಿ 2019ರಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ 2021ರ ಜ.21ರಂದು ಬಾಂಬೆ ಷೇರು ಪೇಟೆ ಸೂಚ್ಯಂಕ 50000ಕ್ಕೆ ಏರಿಕೆಯಾ ಗಿತ್ತು. ಏ.9 ರಂದು ಸೂಚ್ಯಂಕ 75124 ತಲುಪಿ ದಾಖಲೆ ನಿರ್ಮಾಣವಾಗಿತ್ತು. ಅಂದರೆ 10 ವರ್ಷಗಳ ಹಾಲಿ ಕೇಂದ್ರ ಸರ್ಕಾರದ ಅವಧಿಯಲ್ಲಿ ಷೇರುಪೇಟೆ ಸೂಚ್ಯಂಕವೂ ದಾಖಲೆಯಾಗಿ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.