ಬೈಕಂಪಾಡಿ ಕೈಗಾರಿಕೆ ಟೌನ್‌ಶಿಪ್ ಪ್ರಾಧಿಕಾರಕ್ಕೆ “ನಿಯಮ’ವೇ ಅಡ್ಡಿ!
Team Udayavani, Apr 11, 2024, 2:20 PM IST
ಮಹಾನಗರ: ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬೈಕಂಪಾಡಿ ಕೈಗಾರಿಕೆ ವಲಯದ ಅಭಿವೃದ್ಧಿಗೆ ಮರು ಜೀವ ನೀಡಬಹುದಾದ “ಬೈಕಂಪಾಡಿ ಕೈಗಾರಿಕೆ ಟೌನ್‌ಶಿಪ್ ಪ್ರಾಧಿಕಾರ’ ರಚನೆಗೆ ಸರಕಾರದ ನಿಯಮಾವಳಿಯೇ ಈಗ ಅಡ್ಡಿಯಾಗಿದೆ!
ಟೌನ್‌ಶಿಪ್ ಪ್ರಾಧಿಕಾರ ರಚನೆಗೆ ಸರಕಾರ ಈ ಹಿಂದೆಯೇ ನಿರ್ಧರಿಸಿ ಈ ಕುರಿತ ಸಿದ್ಧತೆ ನಡೆಸಿತ್ತು. ಆದರೆ ಬಳಿಕ ಹೊಸದಾಗಿ ಕೈಗಾರಿಕೆ ನಿಯಮಾವಳಿ ರೂಪಿಸಿದ ಸಂದರ್ಭ ಇದಕ್ಕೆ ವಿಘ್ನ ಎದುರಾಯಿತು.
ಸರಕಾರದ ಹೊಸ ನಿಯಮಾವಳಿ ಪ್ರಕಾರ ಈಗ ಇರುವ ಕೈಗಾರಿಕೆ ಪ್ರದೇಶವು 1 ಸಾವಿರ ಎಕ್ರೆ ಹೊಂದಿದ್ದರೆ ಮಾತ್ರ
ಅದನ್ನು ಕೈಗಾರಿಕೆ ಟೌನ್‌ಶಿಪ್ ಪ್ರಾಧಿಕಾರ ಮಾಡಲಾಗುತ್ತದೆ. ಅದಕ್ಕಿಂತ ಕಡಿಮೆ ವಿಸ್ತಾರ ಹೊಂದಿದ್ದರೆ ಪ್ರಾಧಿಕಾರ ಮಾಡಲು
ಆಗುವುದಿಲ್ಲ. ಸದ್ಯ ಬೈಕಂಪಾಡಿ ಕೈಗಾರಿಕೆ ಪ್ರದೇಶವು ಕಡಿಮೆ ವ್ಯಾಪ್ತಿ ಹೊಂದಿರುವುದರಿಂದ ಪ್ರಾಧಿಕಾರ ರಚನೆಗೆ ಅಡ್ಡಿಯಾಗಿದೆ.
ತೆರಿಗೆ ಬೇಕು-ಅಭಿವೃದ್ಧಿ ಇಲ್ಲ!
ಸುಮಾರು 50 ವರ್ಷಗಳ ಹಿಂದೆ ಸ್ಥಾಪನೆಯಾದ ಬೈಕಂಪಾಡಿ ಕೈಗಾರಿಕೆ ವ್ಯಾಪ್ತಿ ಕೆಐಎಡಿಬಿ ವ್ಯಾಪ್ತಿಗೆ ಬರುತ್ತದೆ. ಆದರೆ ಕೆಐಎಡಿಬಿ ಈ ಪ್ರದೇಶವನ್ನು ಅಭಿವೃದ್ಧಿ ಮಾಡುತ್ತಿಲ್ಲ. ಕೆಐಎಡಿಬಿಗೆ ಸರಕಾರದಿಂದ ಸೂಕ್ತ ಅನುದಾನ ಬಿಡುಗಡೆ ಆಗದ ಕಾರಣ ನಿರ್ವಹಣೆ ಧ್ಯವಾಗುತ್ತಿಲ್ಲ . ಇದೇ ವೇಳೆ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹ ಮಾಡುತ್ತಿವೆಯೇ
ವಿನಃ ಅಭಿವೃದ್ಧಿ ಮಾಡಲು ಆಸಕ್ತಿ
ತೋರುತ್ತಿರಲಿಲ್ಲ.
ಪ್ರಾಧಿಕಾರ ಯಾಕಾಗಿ?
ಇಂಡಸ್ಟ್ರಿಯಲ್ ಟೌನ್ ಶಿಪ್ ಪ್ರಾಧಿಕಾರ ಸ್ಥಾಪನೆ ಆದಲ್ಲಿ ಕೈಗಾರಿಕೆ ವಲಯದ ಸಮಗ್ರ ಅಭಿವೃದ್ಧಿ ಇದರ ವ್ಯಾಪ್ತಿಗೆ ಬರಲಿದೆ. ರಸ್ತೆ, ವಿದ್ಯುತ್, ಕುಡಿಯುವ ನೀರು, ಒಳಚರಂಡಿ ಸೇರಿ ಎಲ್ಲ ಅಭಿವೃದ್ಧಿಗಳನ್ನು ಈ ಪ್ರಾಧಿಕಾರವೇ ನಿರ್ವಹಿಸಬೇಕು. ಈ ಕಾರಣದಿಂದ ಕೈಗಾರಿಕೆ ವಲಯದ ವ್ಯಾಪ್ತಿಯ ಎಲ್ಲ ಸಂಸ್ಥೆಗಳ ತೆರಿಗೆಗಳು ಇದರ ವ್ಯಾಪ್ತಿಗೆ ಬರಲಿದೆ. ಇದರಲ್ಲಿ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಶೇ.30ರಷ್ಟು ತೆರಿಗೆಯನ್ನು ಮಾತ್ರ ಪ್ರಾಧಿಕಾರ
ನೀಡಬೇಕಾಗುತ್ತದೆ.
500 ಎಕ್ರೆ ಪರಿಗಣಿಸಲು ಆಗ್ರಹ
1,000 ಎಕ್ರೆ ವ್ಯಾಪ್ತಿಯ ನಿಯಮ ಕೈಬಿಟ್ಟು 500 ಎಕ್ರೆ ವ್ಯಾಪ್ತಿಯ ಕೈಗಾರಿಕೆ ಪ್ರದೇಶವನ್ನು ಸರಕಾರ ಟೌನ್‌ಶಿಪ್ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ ಈಗಾಗಲೇ ಸರಕಾರದ ಗಮನ ಸೆಳೆಯಲಾಗಿದೆ. ಪ್ರಾಧಿಕಾರ ರಚನೆಯಾದರೆ ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಿ ವಿವಿಧ ರೀತಿಯ ಮೂಲ ವ್ಯವಸ್ಥೆಗಳು ಸುಧಾರಣೆಗೊಳ್ಳಲಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. – ಅರುಣ್ ಪಡಿಯಾರ್, ಅಧ್ಯಕ್ಷರು ಬೈಕಂಪಾಡಿ ಕೆನರಾ ಸಣ್ಣ ಕೈಗಾರಿಕೆಗಳ ಸಂಘ
*ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.