Kerala: ವಯನಾಡಿನಲ್ಲಿ ಗೆದ್ದರೆ ಸುಲ್ತಾನ್ ಬತ್ತೇರಿ ಹೆಸರು ಮರುನಾಮಕರಣ: ಕೆ.ಸುರೇಂದ್ರನ್
ಕೇರಳದಲ್ಲಿ ಲಕ್ಷಾಂತರ ಮಂದಿ ಹಿಂದುಗಳನ್ನು ಮತಾಂತರ ಮಾಡಿದ್ದ.
Team Udayavani, Apr 11, 2024, 3:43 PM IST
ತಿರುವನಂತಪುರಂ:ಒಂದು ವೇಳೆ ವಯನಾಡ್ ಲೋಕಸಭಾ ಕ್ಷೇತ್ರದ ಜನತೆ ತನ್ನ ಆಯ್ಕೆ ಮಾಡಿದರೆ, ಸುಲ್ತಾನ್‌ಬತ್ತೇರಿ ನಗರದ ಹೆಸರನ್ನು ಗಣಪತಿ ವಟ್ಟಾಂ ಎಂದು ಬದಲಾಯಿಸುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ, ವಯನಾಡ್ ಕ್ಷೇತ್ರದ ಅಭ್ಯರ್ಥಿ ಕೆ.ಸುರೇಂದ್ರನ್ ನೀಡಿರುವ ಹೇಳಿಕೆ ರಾಜಕೀಯ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.
ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಸಂಸದ ರಾಹುಲ್ ಗಾಂಧಿ ಅಖಾಡಕ್ಕಿಳಿದಿದ್ದು, ಬಿಜೆಪಿಯಿಂದ ಕೆ.ಸುರೇಂದ್ರನ್ ಸ್ಪರ್ಧಿಸಿದ್ದಾರೆ. ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್ ಅಂದು ವಯನಾಡ್ ಸೇರಿದಂತೆ ಕೇರಳದಲ್ಲಿ ಲಕ್ಷಾಂತರ ಮಂದಿ ಹಿಂದುಗಳನ್ನು ಮತಾಂತರ ಮಾಡಿದ್ದ.ಟಿಪ್ಪು ಸುಲ್ತಾನ್ ಯಾರು? ಆತ ವಯನಾಡಿಗೆ ಬಂದಿದ್ದು ಯಾವಾಗ, ಆತನಿಗೆ ಯಾಕೆ ಮಹತ್ವ ನೀಡಬೇಕು? ಇದು ಗಣಪತಿ ವಟ್ಟಂ ಎಂದೇ ಜನಪ್ರಿಯವಾದ ಸ್ಥಳವಾಗಿದೆ. ಜನರಿಗೆ ಈ ಬಗ್ಗೆ ಅರಿವು ಇದೆ. ಕಾಂಗ್ರೆಸ್ ಮತ್ತು ಎಲ್ ಡಿಎಫ್ ಈಗಲೂ ಟಿಪು ಸುಲ್ತಾನ್ ಜತೆಗಿದೆ. ಈ ಸರ್ಕಾರಗಳೇ ಹೆಸರನ್ನು ಬದಲಾಯಿಸಿ ಸುಲ್ತಾನ್ ಬತ್ತೇರಿ ಎಂದು ಮಾಡಿರುವುದಾಗಿ ಸುರೇಂದ್ರನ್ ಆರೋಪಿಸಿದರು.
ಟಿಪ್ಪು ಸುಲ್ತಾನ್ ಕೇರಳದಲ್ಲಿ ಹಲವಾರು ದೇವಾಲಯಗಳನ್ನು ಧ್ವಂಸಗೊಳಿಸಿದ್ದ, ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಿಸುವುದಕ್ಕೂ ಪಕ್ಷ ಆಕ್ಷೇಪ ಎತ್ತಿತ್ತು ಎಂದು ಸುರೇಂದ್ರನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.