Kalaburagi; ಭರ್ಜರಿ ಮಳೆ: ತಂಪಾಯಿತು ಕಾದು ಕೆಂಡವಾಗಿದ್ದ ಇಳೆ
Team Udayavani, Apr 11, 2024, 8:58 PM IST
ಕಲಬುರಗಿ: ಈ ವರ್ಷದ ಬೇಸಿಗೆ ಆರಂಭದಿಂದಲೂ 40 ಡಿಗ್ರಿ ಸೆಲ್ಸಿಯತ್ಕಿಂತಲೂ ಹೆಚ್ಚು ರಣಬಿಸಿಲಿನಿಂದ ಕಾದು ಕೆಂಡವಾಗಿದ್ದ ಕಲಬುರಗಿ ಜಿಲ್ಲೆಯ ನೆಲಕ್ಕೆ ಗುರುವಾರ ಸಂಜೆ ಭಾರಿ ಮಳೆ ಬಿದ್ದು ನೆಲ ತಂಪಾಯಿತು. ಬಹುತೇಕ ಜಿಲ್ಲೆಯ ಎಲ್ಲ ಕಡೆಯಲ್ಲಿ ಮಳೆ ಆಗಿರುವ ಸಾಧ್ಯತೆಗಳಿವೆ. ಸಣ್ಣ ಗುಡುಗು ಮಿಂಚಿನ ಸಮೇತ ಧಾರಾಕಾರ ಮಳೆ ಸುರಿದು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ರಸ್ತೆ ಮತ್ತು ಚರಂಡಿಗಳಲ್ಲಿ ನೀರು ಹರಿಯಿತು.
ಜಿಲ್ಲೆಯ ಜೇವರ್ಗಿ, ಚಿತ್ತಾಪುರ, ವಾಡಿ, ಆಳಂದ, ಅಂಬಲಗಾ, ನಿಂಬರ್ಗಾ, ಆಜಾದಪುರ, ಕಾಳಗಿ ಭಾರಿ ಮಳೆಯಾಗಿದೆ. ಅಫಜಲಪುರ ಸಣ್ಣ ಪ್ರಮಾಣದ ಮಳೆಯಾಗಿದೆ. ಇನ್ನೂ ಹಕವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಿಂಚು, ಗುಡುಗು ಸಮೇತ ಮಳೆಯಾಗಿದೆ.
ಮಳೆಗೂ ಮುನ್ನ ಬೀಸೀದ ಬಿರುಗಾಳಿ ಹಲವು ತಾಲೂಕುಗಳಲ್ಲಿ ಅವಾಂತರ ಸೃಷ್ಟಿ ಮಾಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲಲ್ಲಿ ಮನೆ ಮುಂಭಾಗದ ಪತ್ರಾಸ ಹಾರಿ ಹೋಗಿವೆ.
ಭಾರಿ ಪ್ರಮಾಣದಲ್ಲಿ ಗುಡುಗಿದ್ದರೂ, ಸಿಡಿಲು ಬಿದ್ದ ಮಾಹಿತಿ ಸಿಕ್ಕಿಲ್ಲ. ಅದರೆ, ಸಿಡಿಲು ಬೀಳುವ ಸಾಧ್ಯತೆ ಹೆಚ್ಚಿದ್ದು ಜನರು ರಕ್ಷಣಾತ್ಮಕ ಪ್ರದೇಶದಲ್ಲಿ ಮಳೆಯಿಂದ ಆಸರೆ ಪಡೆಯಬೇಕು ಎಂದು ಜಿಲ್ಲಾಡಳಿತ ಗುರುವಾರ ಸಂಜೆ ಕೊನೆ ಘಳಿಗೆಯಲ್ಲಿ ಜನರಿಗೆ ಮಾಹಿತಿ ತಲುಪಿಸುವ ಪ್ರಯತ್ನವೂ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.