Mangaluru: ಪಿಎಂ ಮೋದಿ ಭೇಟಿ ವೇಳೆ ದೈವಾರಾಧನೆ, ಕಂಬಳ ಝಲಕ್‌

ಎಪ್ರಿಲ್‌ 14ರಂದು ಸಂಜೆ ಮಂಗಳೂರಿನಲ್ಲಿ ಮೆಗಾ ಶೋ

Team Udayavani, Apr 12, 2024, 6:55 AM IST

Kambala

ಮಂಗಳೂರು: ಮೊದಲ ಬಾರಿಗೆ ಮಂಗಳೂರಿನಲ್ಲಿ ಅಧಿಕೃತ ರೋಡ್‌ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರಾವಳಿಯ ವೈಶಿಷ್ಟ್ಯಗಳನ್ನು ಪರಿಚಯಿಸುವ ಬಗ್ಗೆ ತಯಾರಿ ನಡೆಸಲಾಗುತ್ತಿದೆ.

ಪೂರ್ಣ ಭದ್ರತೆಯೊಂದಿಗೆ ತೆರೆದ ವಾಹನದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿರುವಾಗಲೇ ಮೋದಿ ಅವರಿಗೆ ಕರಾವಳಿ ವೈಶಿಷ್ಟéಗಳಾದ ದೈವಾರಾಧನೆಯ ತುಣುಕು, ಕಂಬಳದ ಚಿತ್ರಣ, ಹುಲಿ ವೇಷದ ಅಬ್ಬರ, ಭರತನಾಟ್ಯದ ಝಲಕ್‌ ಇತ್ಯಾದಿಗಳನ್ನು ಕೂಡ ನೋಡಿ ಆನಂದಿಸ ಬಹುದು.
ಇದೆಲ್ಲವೂ ಪಕ್ಷದಿಂದ ಕೈಗೊಳ್ಳುವ ಕಾರ್ಯಕ್ರಮಗಳಲ್ಲ, ಬದಲಿಗೆ ಮೋದಿ ಅಭಿಮಾನಿಗಳು ಅವರಾಗಿಯೇ ಕೇಳಿಕೊಂಡಿರುವಂಥದ್ದು. ಇವು ಗಳಿಗೆ ಅಂತಿಮವಾಗಿ ಪ್ರಧಾನಿ ಯವರ ಭದ್ರತೆ ನೋಡಿಕೊಳ್ಳುವ ವಿಶೇಷ ಭದ್ರತಾ ತಂಡ (ಎಸ್‌ಪಿಜಿ) ಅನುಮತಿ ನೀಡಿದರೆ ಇದೊಂದು ವಿಶಿಷ್ಟ ರೋಡ್‌ ಶೋ ಎನ್ನಿಸಿಕೊಳ್ಳಲಿದೆ. ಈ ಎಲ್ಲ ವೈಶಿಷ್ಟéಗಳನ್ನೂ ರಸ್ತೆ ಬದಿಯಲ್ಲಿ ಚಿಕ್ಕ ಚಿಕ್ಕ ವೇದಿಕೆಗಳ ಮೂಲಕ ಪ್ರದರ್ಶಿಸಲಾಗುವುದು.

ಕಂಬಳದ ಕೋಣಗಳನ್ನೇ ಹೋಲುವ ಪ್ರತಿಕೃತಿ ಪ್ರದರ್ಶನ, ಹುಲಿವೇಷ ಕುಣಿತ ಪ್ರದರ್ಶನ, ಭರತ ನಾಟ್ಯ ಪ್ರದರ್ಶನ ನಡೆಯಲಿದ್ದು, ದೈವಾರಾಧನೆಯನ್ನು ಎಲ್‌ಇಡಿ ಮೂಲಕ ತೋರ್ಪಡಿಸಲಾಗುವುದು ಎಂದು ತಿಳಿದುಬಂದಿದೆ.

ಎ. 14ರಂದು 6ಕ್ಕೆ ಲೇಡಿಹಿಲ್‌ನ ಶ್ರೀ ನಾರಾಯಣಗುರು ವೃತ್ತದಲ್ಲಿ ಮೊದಲು ನಾರಾಯಣಗುರುಗಳ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡುವುದರೊಂದಿಗೆ ರೋಡ್‌ಶೋ ಆರಂಭಗೊಳ್ಳಲಿದೆ. ಬಳಿಕ ಲಾಲ್‌ಬಾಗ್‌ ಜಂಕ್ಷನ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ಜಂಕ್ಷನ್‌ ಮೂಲಕ ನವಭಾರತ ವೃತ್ತ ತಲುಪಲಿದೆ. ಸದ್ಯ ನವಭಾರತ ವೃತ್ತದ ವರೆಗೆ ರೋಡ್‌ ಶೋ ಎಂದಿದ್ದರೂ ಹಂಪನಕಟ್ಟೆ ಜಂಕ್ಷನ್‌ ವರೆಗೂ ರೋಡ್‌ ಶೋ ನಡೆಸುವ ಬಗ್ಗೆ ಯೋಚನೆ ಇದೆ, ಇಲ್ಲೂ ಅಂತಿಮ ನಿರ್ಧಾರವನ್ನು ಎಸ್‌ಪಿಜಿ ತೆಗೆದುಕೊಳ್ಳಲಿದೆ.

ಭರ್ಜರಿ ಭದ್ರತೆ: ಸಮಾವೇಶಕ್ಕಿಂ ತಲೂ ಹೆಚ್ಚಿನ ಮುನ್ನೆಚ್ಚರಿಕೆ ರೋಡ್‌ ಶೋದಲ್ಲಿ ಬೇಕಾಗುತ್ತದೆ. ಈಗಾಗಲೇ ಎಸ್‌ಪಿಜಿ ನೇತೃತ್ವದಲ್ಲಿ ಭದ್ರತಾ ಕಾರ್ಯ ಆರಂಭವಾಗಿದೆ.

ಜಿಲ್ಲಾಡಳಿತ, ಪೊಲೀಸ್‌ ಕಮಿಷನರ್‌ ಸಹಿತ ಹಿರಿಯ ಅಧಿ ಕಾರಿಗಳ ಸಭೆ ನಡೆದಿದ್ದು ಪ್ರಧಾನಿ ಆಗಮನ, ಭದ್ರತೆ ಇತ್ಯಾದಿ ಅಂಶಗಳನ್ನು ಚರ್ಚಿಸಲಾಗಿದೆ. ಲೇಡಿಹಿಲ್‌ನಿಂದ ರೋಡ್‌ ಶೋ ಮುಗಿಯುವಲ್ಲಿ ವರೆಗೂ ರಸ್ತೆ ಇಕ್ಕೆಲಗಳಲ್ಲೂ ಕಬ್ಬಿಣದ ತಾತ್ಕಾಲಿಕ ತಡೆಬೇಲಿ ನಿರ್ಮಿಸಲಾಗುತ್ತದೆ. ರಸ್ತೆಗೆ ಇಳಿಯಲು ಯಾರಿಗೂ ಅವಕಾಶ ಇರುವುದಿಲ್ಲ. ಬ್ಯಾರಿಕೇಡ್‌ನ‌ ಹಿಂದೆ ನಿಂತು ವೀಕ್ಷಿಸಬಹುದು.

ಜೇನುಗೂಡು ತೆರವು!
ರೋಡ್‌ ಶೋ ಸಾಗುವ ಕಟ್ಟಡ, ಮರಗಳಲ್ಲಿರುವ ಜೇನುಗೂಡು ಗಳನ್ನು ತೆರವುಗೊಳಿಸುವಂತೆ ಪೊಲೀಸ್‌ ಆಯುಕ್ತರ ಕಚೇರಿಯಿಂದ ಅರಣ್ಯಾಧಿಕಾರಿಗೆ ಸೂಚನೆ ಬಂದಿದೆ.
ಮಾಹಿತಿ ಸಂಗ್ರಹ: ಎಂ.ಜಿ. ರಸ್ತೆಯ ಇಕ್ಕೆಲದ ಕಟ್ಟಡಗಳ ತಪಾಸಣೆ, ಅಲ್ಲಿರುವವರೆಲ್ಲರ ಗುರುತುಪತ್ರ, ಆಧಾರ್‌ ಸಹಿತ ಮಾಹಿತಿ ಸಂಗ್ರಹ ಇತ್ಯಾದಿ ಕೆಲಸಗಳನ್ನು ಪೊಲೀಸರು ನಡೆಸಿದ್ದಾರೆ. ಅಲ್ಲದೆ ಕಟ್ಟಡ, ಮನೆ, ಅಪಾರ್ಟ್‌ಮೆಂಟ್‌, ಶೈಕ್ಷಣಿಕ ಸಂಸ್ಥೆ, ಹೊಟೇಲ್‌, ವಸತಿಗೃಹ ಮುಂತಾದೆಡೆ ಕಾರ್ಯ ನಿರ್ವಹಿಸುತ್ತಿರುವ/ಕಾರ್ಯ ನಿರ್ವಹಿಸದ ಸಿಸಿ ಕೆಮರಾ ಮಾಹಿತಿ ಯನ್ನೂ ಪಡೆದುಕೊಳ್ಳಲಾಗಿದೆ. ರೋಡ್‌ ಶೋ ವೇಳೆ ಕಟ್ಟಡಗಳ ಮೇಲೆ ಕೂಡ ಯಾರೂ ನಿಲ್ಲುವಂತಿಲ್ಲ.

ಸಂಜೆ 5ರ ಅನಂತರ ನಗರದೊಳಕ್ಕೆ ಪ್ರವೇಶ ಬಂದ್‌!
ಅಂದಾಜು ಸಂಜೆ 5ರ ಬಳಿಕ ಬಲ್ಮಠ ಕಡೆಯಿಂದ ಹಾಗೂ ಕೊಟ್ಟಾರ ಕಡೆಯಿಂದ ನಗರದೊಳಕ್ಕೆ ವಾಹನ ಸಂಚಾರ ಪೂರ್ಣ ಬಂದ್‌ಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಕೊಟ್ಟಾರ ಕಡೆಯಿಂದ ಮೋದಿ ಅವರು ನಾರಾಯಣಗುರು ವೃತ್ತಕ್ಕೆ ಆಗಮಿಸಿದರೆ ಬಲ್ಮಠ, ತೋಟಗಾರಿಕೆ ಇಲಾಖೆ ರಸ್ತೆ ಮೂಲಕ ತೆರಳುವ ನಿರೀಕ್ಷೆ ಇದೆ. ಹಾಗಾಗಿ ಹಂಪನಕಟ್ಟೆ, ಬಂಟ್ಸ್‌ಹಾಸ್ಟೆಲ್‌ ಕಡೆಗೆ ಬರುವಂತಹವರು ಅದಕ್ಕಿಂತ ಮೊದಲೇ ಸೇರಿಕೊಳ್ಳಬೇಕು.

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.