ವಿಯೆಟ್ನಾಂ: ಶ್ರೀಮಂತ ಮಹಿಳಾ ಉದ್ಯಮಿಗೆ ಗಲ್ಲು
Team Udayavani, Apr 12, 2024, 6:40 AM IST
ಹನೋಯಿ: ವಿಯೆಟ್ನಾಂನ 2023ರ ಜಿಡಿಪಿ ದರದ ಶೇ.6ರಷ್ಟು ಮೊತ್ತವನ್ನು ವಂಚಿಸಿ, ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡುವಂಥ ಹಗರಣ ಎಸಗಿರುವ ಆ ದೇಶದ ಕೋಟ್ಯಧಿಪತಿ ಮಹಿಳೆ ಟ್ರಾಂಗ್ ಮೈ ಲ್ಯಾನ್‌ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವ್ಯಾನ್ ಥಿನ್ ಫಾಟ್ ಎಂಬ ಡೆವಲ ಪರ್ ಸಂಸ್ಥೆಯ ಮುಖ್ಯಸ್ಥೆಯಾಗಿರುವ ಟ್ರಾಂಗ್, ಸೈಗೋನ್ ಕಮರ್ಷಿಯಲ್ ಬ್ಯಾಂಕ್ (ಎಸ್‌ಸಿಬಿ) ನಲ್ಲಿ ಶೇ.90ರಷ್ಟು ಷೇರು ಹೊಂದಿ ದ್ದ ಳು. ಈ ಅಧಿಕಾರ ದುರ್ಬ ಳಕೆ ಮಾಡಿ ಕೊಂಡು ಬ್ಯಾಂಕನ್ನು ತನ್ನ ಹಿಡಿತದ ಲ್ಲಿ ಟ್ಟು ಕೊಂಡ ಆಕೆ, 2012 ರಿಂದ 2022ರ ಅವಧಿಯಲ್ಲಿ 2,500 ಕಂಪೆನಿಗಳಿಗೆ ಬ್ಯಾಂಕ್‌ನಿಂದ ಸಾಲ ಕೊಡಿಸಿದ್ದಾಳೆ. ಆದರೆ ಸಾಲ ಪಡೆದ ಯಾವ ಕಂಪೆನಿಯೂ ನೈಜವಾದುದಲ್ಲ. ಬದಲಿಗೆ ಆಕೆಯೇ ಫೇಕ್ ಆ್ಯಪ್ಲಿಕೇಶನ್‌ಗಳನ್ನು ತಯಾರಿಸಿ ಆ ಮೂಲಕ ತನ್ನ ಬೇನಾಮಿ ಕಂಪೆನಿಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾಳೆ.
ಇದರಿಂದಾ ಗಿ ಬ್ಯಾಂಕ್‌ಗೆ ಬರೋಬ್ಬರಿ 27 ಶತಕೋಟಿ ಡಾಲರ್(2.25 ಲಕ್ಷ ಕೋಟಿ ರೂ.) ನಷ್ಟವಾಗಿದ್ದು, ಈ ಮೊತ್ತವು ವಿಯೆಟ್ನಾಂ ನ ಜಿಡಿಪಿಯ ಶೇ.6ಕ್ಕೆ ಸಮನಾಗಿದೆ. 2022ರಲ್ಲಿ ಬಂಧಿಸಲ್ಪಟ್ಟ ಆಕೆಯನ್ನು ಮರಣದಂಡನೆಗೆ ಗುರಿಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.