Cyber fraudsters: ಎಂಜಿನಿಯರ್‌ಗೆ ಬೆದರಿಸಿ 2.42 ಕೋಟಿ ಸುಲಿಗೆ ಮಾಡಿದ ಸೈಬರ್ ವಂಚಕರು
Team Udayavani, Apr 12, 2024, 11:52 AM IST
ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು ಬೆದರಿಸಿ ನಗರದ ಎಂಜಿನಿಯರ್‌ವೊಬ್ಬರಿಂದ ಎರಡೂವರೆ ಕೋಟಿ ರೂ. ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಅಮೃತಹಳ್ಳಿ ನಿವಾಸಿ ಎಂಜಿನಿಯರ್ ವೊಬ್ಬರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರುದಾರ ಎಂಜಿನಿಯರ್, ಸ್ಥಳೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಇತ್ತೀಚೆಗೆ ಕರೆ ಮಾಡಿದ್ದ ವಂಚಕರು, ನಿಮ್ಮ ಹೆಸರಿನಲ್ಲಿ ಹೊರ ದೇಶಕ್ಕೆ ಕೋರಿಯರ್ ಹೋಗುತ್ತಿದೆ. ಅದರಲ್ಲಿ ಡ್ರಗ್ಸ್, ನಕಲಿ ಪಾಸ್‌ಪೋರ್ಟ್ ಮತ್ತು ನಕಲಿ ಎಟಿಎಂ ಕಾರ್ಡ್‌ಗಳು ಸಿಕ್ಕಿವೆ ಎಂದು ಬೆದರಿಸಿದ್ದಾರೆ.
ಹೀಗಾಗಿ ನಿಮ್ಮ ವಿರುದ್ಧ ಡ್ರಗ್ಸ್ ಸಾಗಣೆ ಹಾಗೂ ಅಕ್ರಮ ಚಟುವಟಿಕೆ ಸಂಬಂಧ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಕೆಲ ಕಾನೂನು ಪ್ರಕ್ರಿಯೆ ನಡೆಸಬೇಕು. ನಾವು ಕಳುಹಿಸುವ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇಲ್ಲವಾದರೆ ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ಹೆದರಿಸಿದ್ದಾರೆ. ಅದರಿಂದ ಗಾಬರಿಗೊಂಡ ಎಂಜಿನಿಯರ್, ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆ ಆ್ಯಪ್ ಮೂಲಕ ಆರೋಪಿಗಳು ವಿಡಿಯೋ ಕರೆ ಮಾಡಿದ್ದಾರೆ. ಆಗ ಪೊಲೀಸ್ ಸಮವಸ್ತ್ರದಲ್ಲಿದ್ದ ಆರೋಪಿ, ಕೇಸು ದಾಖಲಾದರೆ ನೀವು ಜೈಲಿಗೆ ಹೋಗುವುದು ನಿಶ್ಚಿತ. ಹಣ ನೀಡಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದಿದ್ದ. ಅದನ್ನು ನಂಬಿದ್ದ ಎಂಜಿನಿಯರ್, ಆರೋಪಿ ನೀಡಿದ್ದ 8 ಬ್ಯಾಂಕ್ ಖಾತೆಗಳಿಗೆ ಹಂತವಾಗಿ 2.42 ಕೋಟಿ ಹಾಕಿ ದ್ದಾರೆ. ಆರೋಪಿಗಳು ಮತ್ತೂಮ್ಮೆ ಹಣ ಕೇಳಿದಾಗ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.