Kannada Cinema; ‘ಕರಿಮಣಿ ಮಾಲೀಕ’ನ ನಂಬಿ ಬಂದವರು
Team Udayavani, Apr 13, 2024, 5:14 PM IST
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ “ಕರಿಮಣಿ ಮಾಲೀಕ…’ ಹಾಡು ಸಖತ್ ಸದ್ದು ಮಾಡಿತ್ತು. ಈಗ ಇದೇ ಹಾಡನ್ನು ಸಿನಿಮಾದ ಟೈಟಲ್‌ನ್ನಾಗಿಸಿದೆ ಚಿತ್ರ ತಂಡ. ಚಿತ್ರಕ್ಕೆ “ಕರಿಮಣಿ ಮಾಲೀಕ ನೀನಲ್ಲ’ ಎಂಬ ಟೈಟಲ್ ಇಡಲಾಗಿದ್ದು, ಚಂದ್ರು ಓಬಯ್ಯ ಈ ಸಿನಿಮಾದ ನಿರ್ದೇಶಕರು.
“ಈ ಚಿತ್ರವನ್ನು ಮುಂದಿನ ತಿಂಗಳು ಪ್ರಾರಂಭಿಸುತ್ತಿದ್ದೇನೆ. ಎಳನೀರು ಮಾರೋ ಹುಡುಗ, ಹೂ ಮಾರೋ ಹುಡುಗಿಯ ನಡುವೆ ನಡೆಯೋ ವಿಭಿನ್ನ ಪ್ರೇಮಕಥೆ ಈ ಚಿತ್ರದಲ್ಲಿದೆ. ನಾನು ಸಿದ್ಧಮಾಡಿಕೊಂಡಿದ್ದ ಮಾಡಿಕೊಂಡಿದ್ದ ಕಥೆಗೆ ಈ ಟೈಟಲ್ ಸೂಕ್ತ ಎನಿಸಿ ಇಟ್ಟಿದ್ದೇನೆ. ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಿ, 40ದಿನಗಳ ಕಾಲ ಬೆಂಗಳೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಶೂಟಿಂಗ್ ನಡೆಯಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಂಗೀತ ಕೂಡಾ ನನ್ನದೇ. ನಾಯಕಿಯಾಗಿ ರಮಿಕಾ ಸುತಾರ ಅಭಿನಯಿಸುತ್ತಿದ್ದು, ನಾಯಕನ ಪಾತ್ರಕ್ಕೆ ಹುಡುಕಾಟ ನಡೆಸಿದ್ದೇವೆ’ ಎಂದು ವಿವರ ನೀಡಿದರು ಚಂದ್ರು ಓಬಯ್ಯ.
ನಾಯಕಿ ರಮಿಕಾ ಸುತಾರ ಚಿತ್ರದಲ್ಲಿ ಹೂ ಮಾರುವ ಹುಡುಗಿಯಾಗಿ ನಟಿಸುತ್ತಿದ್ದಾರೆ. ಮತ್ತೂಬ್ಬ ನಟಿ ಮೀನಾ ಕಿರಣ್ ಮಾತನಾಡಿ, ಇದರಲ್ಲಿ ನಾನು ನಾಯಕಿಯ ತಾಯಿ ಪಾತ್ರ ಮಾಡುತ್ತಿದ್ದೇನೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.