Sunrisers Hyderabad ವಿರುದ್ಧ ಅದ್ಭುತ ಹೋರಾಟ ನೀಡಿ ಸೋಲು ಅನುಭವಿಸಿದ ಆರ್ ಸಿಬಿ
ಶಾಪವಾಗಿ ಪರಿಣಮಿಸಿರುವ ಬೌಲಿಂಗ್ ...
Team Udayavani, Apr 15, 2024, 11:18 PM IST
ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರನ್ ಮಳೆ ಹರಿದು ಐಪಿಎಲ್ ನ ಹೊಸ ದಾಖಲೆ ನಿರ್ಮಾಣವಾಯಿತು. ರೋಮಾಂಚನಕಾರಿ ಪಂದ್ಯದಲ್ಲಿ ಆರ್ ಸಿಬಿ ಅದ್ಭುತ ಹೋರಾಟ ಸಂಘಟಿಸಿ ಮತ್ತದೇ ಸೋಲಿನ ಕಹಿ ಉಂಡಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಸಾಮರ್ಥ್ಯ ಮೆರೆದು ಬರೋಬ್ಬರಿ 287 ರನ್ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ತನ್ನದೇ ದಾಖಲೆ ಮುರಿದು ಹೊಸ ಇತಿಹಾಸ ಬರೆಯಿತು. ಹೈದರಾಬಾದ್ ತಂಡ ಈ ಐಪಿಎಲ್ ನಲ್ಲಿ ಮುಂಬೈ ಎದುರು 277/3 ಇದುವರೆಗಿನ ಐಪಿಎಲ್ ಗರಿಷ್ಠ ದಾಖಲೆಯ ಸ್ಕೋರ್ ಆಗಿತ್ತು.
ಬೃಹತ್ ದಾಖಲೆಯ ಗುರಿ ಬೆನ್ನಟ್ಟಿದ ಆರ್ ಸಿಬಿ ಹೋರಾಟವನ್ನೇ ಸಂಘಟಿಸಿತು. ವಿರಾಟ್ ಕೊಹ್ಲಿ 42(20 ಎಸೆತ) , ನಾಯಕ ಫಾಫ್ ಡು ಪ್ಲೆಸಿಸ್ 62(28 ಎಸೆತ) ಉತ್ತಮ ಆರಂಭ ಒದಗಿಸಿಕೊಟ್ಟರು. 6.2 ಓವರ್ ಗಳಲ್ಲಿ ತಂಡ 80 ರನ್ ಗಳಿಸಿದ್ದ ವೇಳೆ ಕೊಹ್ಲಿ ಔಟಾದರು. ವಿಲ್ ಜ್ಯಾಕ್ಸ್ 7 ಗಳಿಸಿದ್ದ ವೇಳೆ ರನ್ ಔಟ್ ಆದರು. ರಜತ್ ಪಾಟಿದಾರ್ 9 ರನ್ ಗಳಿಸಿ ಔಟಾದರು. ಸೌರವ್ ಚೌಹಾನ್ ಶೂನ್ಯಕ್ಕೆ ನಿರ್ಗಮಿಸಿದರು.
ದಿನೇಶ್ ಕಾರ್ತಿಕ್ ಆಸೆ ಚಿಗುರಿಸಿದರು
ಹೊಡಿ ಬಡಿ ಆಟಗಾರ ದಿನೇಶ್ ಕಾರ್ತಿಕ್ ಅದ್ಭುತ ಹೋರಾಟ ನೀಡಿ ಬ್ಯಾಟಿಂಗ್ ಸಾಮರ್ಥ್ಯ ಮೆರೆದರು. 35 ಎಸೆತಗಳಲ್ಲಿ 83 ರನ್ ಚಚ್ಚಿ ಕೊನೆಯಲ್ಲಿ ಔಟಾದರು. 5 ಬೌಂಡರಿ ಮತ್ತು 7 ಅದ್ಭುತ ಸಿಕ್ಸರ್ ಸಿಡಿಸಿದರು. ಮಹಿಪಾಲ್ ಲೊಮ್ರೋರ್ 19, ಅನುಜ್ ರಾವತ್ ಔಟಾಗದೆ 25 ರನ್ ಗಳಿಸಿದರು. 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿದ ಆರ್ ಸಿಬಿ 25 ರನ್ ಗಳ ಅಂತರದ ಸೋಲು ಅನುಭವಿಸಿತು. ಇದು ಆರ್ ಸಿಬಿ ಆಡಿದ 7 ನೇ ಪಂದ್ಯದಲ್ಲಿ 6 ನೇ ಸೋಲಿನ ಬರೆಯಾಗಿದೆ.
ಅಬ್ಬರಿಸಿದ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಔಟಾದರು. 41 ಎಸೆತಗಳಲ್ಲಿ 102 ರನ್ ಗಳಿಸಿದರು.9 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಚಚ್ಚಿ ಆರ್ ಸಿಬಿ ಬೌಲರ್ ಗಳಿಗೆ ಕಂಟಕವಾಗಿ ಕಾಡಿದರು. ಅಭಿಷೇಕ್ ಶರ್ಮ 34(22ಎಸೆತ), ಗಳಿಸಿ ಔಟಾದರು. ಮತ್ತೆ ಅಬ್ಬರಿಸಿದ ಹೆನ್ರಿಕ್ ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ ಚಚ್ಚಿದರು. 2ಬೌಂಡರಿ ಮತ್ತು 7 ಸಿಕ್ಸರ್ ಗಳ ಮೂಲಕ ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆಗೆ ತಲುಪಿಸಿದರು. ಏಡನ್ ಮಾರ್ಕ್ರಾಮ್ ಬ್ಯಾಟಿಂಗ್ 32 ರನ್ ಮತ್ತು ಅಬ್ದುಲ್ ಸಮದ್ 10 ಎಸೆತಗಳಲ್ಲಿ 37 ರನ್ ಗಳಿಸಿ ಔಟಾಗದೆ ಉಳಿದರು.
ಬೌಲಿಂಗ್ ಸಾಮರ್ಥ್ಯ ಇರದೇ ಇರುವುದು ಆರ್ ಸಿಬಿ ಪಾಲಿಗೆ ಮುಳುವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.