Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…!
Team Udayavani, Apr 17, 2024, 12:09 AM IST
ಪುತ್ತೂರು: ನಾನು ಖಾಸಗಿ ಬಸ್‌ನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ. ನನ್ನಂತೆ ಹತ್ತಾರು ಜನ ಬೇರೆ ಬೇರೆ ಉದ್ಯೋಗದಲ್ಲಿ ಇದ್ದರು. ಚುನಾವಣೆಯ ಸಂದರ್ಭದಲ್ಲಿ ನಾವು ಕೆಲಸಕ್ಕೆ ರಜೆ ಹಾಕಿ ಮನೆ-ಮನೆಗೆ ಪ್ರಚಾರಕ್ಕೆ ಹೋಗುತ್ತಿದ್ದೆ. ಯಾರಿಂದಲೂ ದುಡ್ಡು ಪಡೆಯದೇ ಕೈಯಿಂದಲೇ ಖರ್ಚು ಮಾಡಿ ಪ್ರಚಾರಕ್ಕೆ ಹೋಗುತ್ತಿದ್ದೆವು. ಆಗ ಇದದ್ದು ತತ್ವ, ಸಿದ್ಧಾಂತದ ಮೇಲಿನ ಪ್ರೀತಿ. ಅದಕೋಸ್ಕರ ಹತ್ತಾರು ಕಿ.ಮೀ. ದೂರ ನಡೆದುಕೊಂಡೇ ಹೋಗಿ ಪ್ರಚಾರ ಮಾಡಬೇಕಾದ ಅಗತ್ಯ ಇತ್ತು…. ಹಳೆಯ ದಿನಗಳ ಮೆಲುಕು ಹಾಕಿ ಮಾತನಾಡಿದವರು ಸುದೀರ್ಘ ಅವಧಿಯ ತನಕ ಚುನಾವಣ ಪ್ರಚಾರ ಕಾರ್ಯ ನಡೆಸಿದ್ದ 84ರ ಹರೆಯದ ಪುತ್ತೂರು ನಗರದ ಏಳು¾ಡಿ ನಿವಾಸಿ ಗೋಪಾಲ ನಾೖಕ್.
ಚುನಾವಣೆ ಮುಗಿದ ಬಳಿಕ ಮತ್ತೆ ಕೆಲಸಕ್ಕೆ ಹೋಗುತ್ತಿದ್ದೆವು. ಅಲ್ಲಿಗೆ ನಮ್ಮ ಕೆಲಸ ಮುಗಿ ಯಿತು. ಅಷ್ಟು ದಿನ ಸಂಬಳ ಇಲ್ಲ ಎಂದು ಲೆಕ್ಕ ಹಾಕಿ ಕೂರುವವರು ಇರಲಿಲ್ಲ. ಏಕೆಂದರೆ ನಮಗೆ ನಮ್ಮ ಪಕ್ಷದ ಪರ ಪ್ರಚಾರ ಮುಖ್ಯವಾಗಿತ್ತು ಎನ್ನುವ ಗೋಪಾಲ ನಾೖಕ್ ಅವರು 1957ರಿಂದ ಇತ್ತೀಚಿನ ತನಕವೂ ಮನೆ ಮನೆಗೆ ತೆರಳಿ ಚುನಾವಣ ಪ್ರಚಾರ ಕಾರ್ಯಕ್ಕೆ ಇಳಿದವರು.
ಮನೆಯೇ ಪ್ರಚಾರದ ಕೇಂದ್ರ
ಆಗ ನಾನು ಪ್ರಚಾರ ಮಾಡುತ್ತಿದ್ದ ಪಕ್ಷದ ಪರ ಪ್ರಚಾರಕ್ಕೆ ತೆರಳುವವರ ಸಂಖ್ಯೆ ಕಡಿಮೆ ಇತ್ತು. ನಾವು ನಾಲ್ಕೆ çದು ಜನ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೆವು. ಯಾವುದೇ ವಾಹನದ ವ್ಯವಸ್ಥೆ ಇರಲಿಲ್ಲ. ನಡೆದುಕೊಂಡೇ ಹೋಗುತ್ತಿದ್ದೆವು. ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ತೆಗಳು ವಂತಹ ಪ್ರಚಾರ ಇರಲಿಲ್ಲ, ಸಭೆ ಸಮಾವೇಶಗಳಿಗೆ ಬರುವವರು ಕಡಿಮೆ ಇದ್ದರು. ದೊಡ್ಡ ನಾಯಕರು ಬಂದಾಗ ಒಂದಷ್ಟು ಜನ ಸೇರುತ್ತಿದ್ದರು. ಏನಿದ್ದರೂ ಮನೆಯೇ ಪ್ರಚಾರದ ಕೇಂದ್ರ ಸ್ಥಾನವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಅವರು.
ದೂರದ ಮನೆಗೆ ತಲುಪುವುದೇ ಸಾಹಸ
ಗೋಪಾಲ ನಾೖಕ್ ಅವರು ಅನುಭವ ಬಿಚ್ಚಿಡುತ್ತಿದ್ದ ವೇಳೆ ಇನ್ನಷ್ಟು ನೆನಪು ಗಳನ್ನು ಮೆಲುಕು ಹಾಕಿದ್ದು ಅವರ ಪತ್ನಿ ಶಶಿಕಲಾ. ನಾನು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದೇನೆ. ಬೆಳಗ್ಗೆ ಹೊರಟರೆ ಮರಳಿ ಬರುವಾಗ ರಾತ್ರಿ ಆದದ್ದು ಇದೆ. ಊಟ, ತಿಂಡಿ ಎಲ್ಲ ಜತೆಗಿದ್ದವರೂ ಸೇರಿ ಮಾಡುತ್ತಿದ್ದೆವು. ಅದಕ್ಕೆ ನಿರ್ದಿಷ್ಟ ಸ್ಥಳ ಅಂತ ಏನೂ ಇರಲಿಲ್ಲ. ರಸ್ತೆ, ವಾಹನ ಇರಲಿಲ್ಲ. ದೂರ ದೂರ ಮನೆ ಇತ್ತು. ಅಲ್ಲಿಗೆ ತಲುಪುವುದೇ ಸಾಹಸವಾಗಿತ್ತು. ಮನೆ ಮಂದಿಗೆ ಮನ ಮುಟ್ಟುವ ರೀತಿಯಲ್ಲಿ ಹೇಳುತ್ತಿದ್ದೆವು. ಏಕೆಂದರೆ ಮತ್ತೆ ಆ
ಮನೆಗೆ ಇನ್ನೊಮ್ಮೆ ಬರುವುದು ಕಷ್ಟ ಆಗಿದ್ದ ಕಾಲ ಎನ್ನುತ್ತಾರೆ ಅವರು.
ಪುರುಸೊತ್ತು ಇದ್ದರೆ ಪಕ್ಷದ ಪರ ಕೆಲಸ ಅನ್ನುವ ಸ್ಥಿತಿ ಆಗ ಇರಲಿಲ್ಲ. ಜಾತಿ, ಮತ ಅನ್ನುವ ಭೇದ-ಭಾವ ಇರಲಿಲ್ಲ. ನಾವು ತಂಡವಾಗಿ ಪ್ರಚಾರ ಮಾಡುತ್ತಿದ್ದೆವು. ಆಗ ಯಾವುದೇ ಕೆಲಸ ಮಾಡುತ್ತಿದ್ದರೂ ಅದಕ್ಕೆ ಶಿಸ್ತು ಇತ್ತು. ಗೋಡೆ ಬರೆಹ, ಡಾಮರು ರಸ್ತೆಗಳಲ್ಲಿ ಚಿತ್ರ ಬಿಡಿಸಿ ಮತ ಯಾಚನೆ ಮಾಡುತ್ತಿದ್ದೆವು. ಅನಂತರ ಅದಕ್ಕೂ ನಿರ್ಬಂಧ ಬಂತು. ಈಗಂತೂ ಪ್ರಚಾ ರದ ವೈಖರಿಯೇ ಬದಲಾಗಿದೆ. ಈಗ ಸುಧಾರಿತ ತಂತ್ರಜ್ಞಾನ ಬಳಸಿ ಕ್ಷಣ ಮಾತ್ರದಲ್ಲಿ ಮತದಾರರನ್ನು ತಲುಪಬಹುದು. ಆದರೆ ಆ ಕಾಲದಲ್ಲಿ ಮ್ಯಾನು ವೆಲ್ ಆಧಾರಿತ ಶ್ರಮವೇ ಪ್ರಧಾನವಾಗಿತ್ತು ಎಂದು ಗೋಪಾಲ್ ನಾೖಕ್ ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.