IPL ಬ್ರೇಕ್ ಪಡೆದ ಗ್ಲೆನ್ ಮ್ಯಾಕ್ಸ್‌ವೆಲ್
Team Udayavani, Apr 17, 2024, 1:25 AM IST
ಬೆಂಗಳೂರು: ತೀವ್ರ ರನ್ ಬರಗಾಲದಲ್ಲಿರುವ ಆರ್‌ಸಿಬಿಯ ಆಸ್ಟ್ರೇಲಿಯನ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಬ್ರೇಕ್ ಪಡೆ ಯಲು ನಿರ್ಧ ರಿಸಿದ್ದಾರೆ. ತಾನು ಮಾನಸಿಕ ಹಾಗೂ ದೈಹಿಕ ಕ್ಷಮತೆ ಯನ್ನು ಹೊಂದಿಲ್ಲದ ಕಾರಣ ಈ ನಿರ್ಧಾರಕ್ಕೆ ಬಂದಿ ರುವು ದಾಗಿ ಹೇಳಿದ್ದಾರೆ.
ಮ್ಯಾಕ್ಸ್‌ವೆಲ್ ಉಳಿದೆಲ್ಲ ಪಂದ್ಯ ಗಳಿಂದಲೂ ದೂರ ಉಳಿಯುತ್ತಾರೋ ಅಥವಾ ಕೊನೆಯ ಹಂತದಲ್ಲಿ ತಂಡಕ್ಕೆ ಮರಳುವರೋ ಎಂಬುದು ಖಚಿತಪಟ್ಟಿಲ್ಲ.
ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್ ಬ್ರೇಕ್ ಪಡೆಯುತ್ತಿರುವ ಎರಡನೇ ನಿದರ್ಶನ ಇದಾಗಿದೆ. 2019ರ ಅಕ್ಟೋಬರ್ ನಲ್ಲಿ ಇದೇ ಕಾರಣಕ್ಕಾಗಿ ಅವರು ವಿರಾಮ ಪಡೆದಿದ್ದರು. ಕೆಲವು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿದ್ದರು.
ದಿಢೀರ್ ಫಾರ್ಮ್ ಕುಸಿತ!
ಈ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಸಿಡಿದು ನಿಲ್ಲಲು ಸಂಪೂರ್ಣ ವಿಫಲ ರಾಗಿ ದ್ದಾರೆ. 6 ಪಂದ್ಯಗಳಲ್ಲಿ ಗಳಿ ಸಿದ್ದು 32 ರನ್ ಮಾತ್ರ. ಸರಾಸರಿ ಬರೀ 5.33. ಈ 32 ರನ್ನುಗಳಲ್ಲಿ 28 ರನ್ ಕೆಕೆಆರ್ ವಿರುದ್ಧ ಬಂದಿತ್ತು. ಅದರಲ್ಲೂ 2 ಜೀವದಾನ ಲಭಿಸಿತ್ತು!
ಮ್ಯಾಕ್ಸ್‌ವೆಲ್ ಅವರ ಫಾರ್ಮ್ ಈ ರೀತಿಯಾಗಿ ದಿಢೀ ರನೇ ಕುಸಿದದ್ದು ಅಚ್ಚರಿ ಯಾಗಿ ಕಾಣುತ್ತದೆ. ಐಪಿಎಲ್‌ಗೂ ಮುನ್ನ, ನವೆಂಬರ್‌ನಿಂದೀಚೆ ಆಡಲಾದ 17 ಟಿ20 ಪಂದ್ಯ ಗಳಲ್ಲಿ 42ರ ಸರಾ ಸರಿ ಹಾಗೂ 185ರಷ್ಟು ಉತ್ಕೃಷ್ಟ ಸ್ಟ್ರೈಕ್‌ರೇಟ್‌ನಲ್ಲಿ 552 ರನ್ ಪೇರಿಸಿದ ಸಾಧನೆ ಇವರದಾಗಿತ್ತು.
ಕೊನೆಗೂ ತಂಡದಿಂದ ಔಟ್!
ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡ ದಿಂದ ಕೈಬಿಡ ಬೇಕೆಂಬ ಆರ್‌ಸಿಬಿ ಅಭಿಮಾನಿಗಳ ಕೂಗು ಜೋರಾ ಗಿತ್ತು. ಹೈದರಾಬಾದ್ ಎದು ರಿನ ಸೋಮ ವಾರದ ಪಂದ್ಯ ದಿಂದ ಕೊನೆಗೂ ಇವರನ್ನು ಹೊರಗುಳಿಸ ಲಾಯಿತು. ಆದರೆ “ಕೈ ಬೆರಳಿನ ಗಾಯ’ದ ಕಾರಣ ನೀಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಮ್ಯಾಕ್ಸ್ ವೆಲ್, “ಐದನೇ ಪಂದ್ಯದಲ್ಲಿ ಸೋಲನು ಭವಿಸಿದ ಬೆನ್ನಲ್ಲೇ ನಾನು ನಾಯಕ ಹಾಗೂ ಕೋಚ್ ಬಳಿ ತೆರಳಿ, ನನ್ನ ಬದಲು ಬೇರೆಯವರಿಗೆ ಅವಕಾಶ ನೀಡಲು ಇದು ಸೂಕ್ತ ಸಮಯ ಎನಿಸುತ್ತದೆ. ಸದ್ಯ ನಾನು ವಿಶ್ರಾಂತಿ ಪಡೆಯುತ್ತೇನೆ ಎಂದಿದ್ದೆ’ ಎಂಬುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.