Mollywood: 14 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ಮಮ್ಮುಟ್ಟಿ – ಪೃಥ್ವಿರಾಜ್ ನಟನೆ?
Team Udayavani, Apr 17, 2024, 12:28 PM IST
ಕೊಚ್ಚಿ: ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಲ್ಟಿಸ್ಟಾರ್ಸ್ ಗಳನ್ನು ಹಾಕಿಕೊಂಡು ಸಿನಿಮಾ ಮಾಡುವ ಟ್ರೆಂಡ್ ಶುರುವಾಗಿದೆ. ತಮಿಳು, ಹಿಂದಿ ಹಾಗೂ ತೆಲುಗಿನಲ್ಲಿ ಈ ಪ್ರಯೋಗವನ್ನು ನಡೆಸಲಾಗಿದೆ. ಇದೀಗ ಮಾಲಿವುಡ್ ನಲ್ಲಿ ಈ ರೀತಿಯ ಪ್ರಯತ್ನ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸೂಪರ್ ಸ್ಟಾರ್ ಮಮ್ಮುಟ್ಟಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಪ್ರತ್ಯೇಕವಾಗಿ ದೊಡ್ಡ ಫ್ಯಾನ್ ಬೇಸ್ ಗಳಿವೆ. ಇತ್ತೀಚೆಗಿನ ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿರುವುದು ಮಾತ್ರವಲ್ಲದೆ, ಪ್ಯಾನ್ ಇಂಡಿಯಾದಲ್ಲಿ ಮಿಂಚಿದೆ.
ಮಮ್ಮುಟ್ಟಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ಮಾಲಿವುಡ್ ವಲಯದಲ್ಲಿ ಹರಿದಾಡಿದೆ.
ಈ ಹಿಂದೆ ಮಮ್ಮುಟ್ಟಿ ಹಾಗೂ ಪೃಥ್ವಿರಾಜ್ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 2010 ರಲ್ಲಿ ʼಪೊಕ್ಕಿರಿ ರಾಜʼ ಚಿತ್ರದಲ್ಲಿ ಒಡಹುಟ್ಟಿದವರ ಪಾತ್ರದಲ್ಲಿ ಇಬ್ಬರು ತೆರೆ ಹಂಚಿಕೊಂಡಿದ್ದರು. ಈ ಸಿನಿಮಾವನ್ನು ನವ ನಿರ್ದೇಶಕ ವೈಶಾಖ್ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು.
ಇದೀಗ ಮಮ್ಮುಟ್ಟಿ ಹಾಗೂ ಪೃಥ್ವಿರಾಜ್ ಮತ್ತೆ ಒಂದಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಥ್ರಿಲ್ಲರ್ ಕಥಾಹಂದರದ ಸಿನಿಮಾವನ್ನು ನವ ನಿರ್ದೇಶಕರು ನಿರ್ದೇಶನ ಮಾಡಲಿದ್ದು, ಹಿರಿಯ ನಿರ್ಮಾಪಕ ಆಂಟೊ ಜೋಸೆಫ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬೀಳಬೇಕಿದೆ.
ಸದ್ಯ ಮಮ್ಮುಟ್ಟಿ ವೈಶಾಖ್ ನಿರ್ದೇಶನದ ʼಟರ್ಬೊʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾದಲ್ಲಿ ಕನ್ನಡದ ರಾಜ್ ಬಿ ಶೆಟ್ಟಿ ಅವರು ಮೊದಲ ಬಾರಿಗೆ ಮಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂನ್.13 ರಂದು ಸಿನಿಮಾ ತೆರೆಗೆ ಬರಲಿದೆ.
ಇನ್ನು ಪೃಥ್ವಿರಾಜ್ ʼಆಡುಜೀವಿತಂʼ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದು,ಇದಾದ ಬಳಿಕ ʼಗುರುವಾಯೂರ್ ಅಂಬಲನಡಾಯಿಲ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Chennai: ಐಶ್ವರ್ಯ ರಜನಿಕಾಂತ್, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್
Rishab Shetty: ʼಜೈ ಹನುಮಾನ್ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್ ಶೆಟ್ಟಿ?
Kollywood: ಲೇಡಿ ಸೂಪರ್ ಸ್ಟಾರ್ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್ ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.