ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ
Team Udayavani, Apr 17, 2024, 1:02 PM IST
ಕಾಸರಗೋಡು: ನರೇಂದ್ರ ಮೋದಿ ಪ್ರಧಾನಿ ಆದ ಬಳಿಕವಷ್ಟೇ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲ ಕುಟ್ಟಿ ಹೇಳಿದರು.
ಇದನ್ನೂ ಓದಿ:S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ
ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎಯ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಪರ ಚುನಾವಣಪ್ರಚಾರಾರ್ಥವಾಗಿ
ಪ್ರಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮದ್ಯ ಭ್ರಷ್ಟಾಚಾರದಲ್ಲಿ ಬಂಧಿಸಲ್ಪಟ್ಟ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನ್ ಉಗ್ರರೊದಿಗೆ ಸಂಪರ್ಕ
ಹೊಂದಿದ್ದಾರೆಂದು ಆರೋಪಿಸಿದರು. ಇಂತಹ ವ್ಯಕ್ತಿಯನ್ನು ಬೆಂಬಲಿಸಲು ಕಾಂಗ್ರೆಸ್‌ಗೆ ನಾಚಿಕೆ ಎಂಬುದು ಇಲ್ಲವೇ ಎಂದು ಪ್ರಶ್ನಿಸಿದರು. ಸಿ.ಎ.ಎ. ಕುರಿತು ವಿಪಕ್ಷ ಅಪಪ್ರಚಾರದಲ್ಲಿ ತೊಡಗಿದೆ. ಈ ಬಾರಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಗೆಲುವು ಸಾಧಿಸಲಿದ್ದಾರೆಂದು ಭರವಸೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೆ.ರಂಜಿತ್, ಸುರೇಶ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ರೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.