UV Fusion: ಏರಿಯಾ 51
Team Udayavani, Apr 18, 2024, 3:27 PM IST
ಪ್ರಪಂಚದಲ್ಲಿ ಹಲವಾರು ಯುದ್ಧಗಳು ಸಂಭವಿಸಿವೆ. ಇವುಗಳ ಪೈಕಿ ಪ್ರಮುಖವಾಗಿ ಎರಡು ಮಹಾಯುದ್ದಗಳನ್ನು ಜಗತ್ತು ಸದಾ ನೆನಪಿನಲ್ಲಿಟ್ಟುಕೊಂಡು ಮುಂದೆ ಜಗತ್ತಿಗೆ ಯಾವುದೇ ಹಾನಿಯಾಗದೆ, ಮೂರನೇ ಮಹಾಯುದ್ದ ನಡೆಯದಂತೆ ಎಚ್ಚರವಹಿಸುವಂತೆ ಎರಡು ಮಹಾಯುದ್ಧಗಳು ನಮಗೆ ಸಂದೇಶ ನೀಡುತ್ತದೆ.
ಎರಡು ಮಹಾಯುದ್ದಗಳಿಂದಾಗಿ 1945ರ ಅನಂತರ ಜಗತ್ತು ರಾಜಕೀಯವಾಗಿ, ಸೈದ್ಧಾಂತಿಕವಾಗಿ ಎರಡು ಭಾಗಗಳಾಗಿ ವಿಭಜನೆಯಾಯಿತು. ಒಂದು ಭಾಗ ಅಮೆರಿಕ ನೇತೃತ್ವದಲ್ಲಿ ಬಂಡವಾಳಶಾಹಿ ರಾಷ್ಟ್ರಗಳ ಬಣವಾದರೆ, ಇನ್ನೊಂದು ಭಾಗ ಕಮ್ಯೂನಿಸ್ಟ್ ಸಿದ್ಧಾಂತದ ಸೋವಿಯತ್ ಒಕ್ಕೂಟದ ಬಣಗಳಾಗಿವೆ. ಈ ವಿಭಜನೆ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರಕ್ಕೆ ನಾಂದಿಯಾಯಿತು.
1945ರಿಂದ 1950ರವರೆಗೆ ಅಮೆರಿಕ ಶೀತಲ ಸಮರದಲ್ಲಿ ಮೇಲುಗೈ ಸಾಧಿಸಿತು. ಇದಕ್ಕೆ ಕಾರಣ ಪರಮಾಣು ಬಾಂಬ್ ಅನ್ನು ಅಮೆರಿಕ ಮೊದಲು ಕಂಡುಹಿಡಿದಿರುವುದು. ಅನಂತರ 1949ರಲ್ಲಿ ಸೋವಿಯತ್ ಒಕ್ಕೂಟ ಪರಮಾಣು ಬಾಂಬ್ ಪರೀಕ್ಷೆ ನಡೆಸಿದ ಅನಂತರ ಎರಡು ದೇಶಗಳು ಪರಸ್ಪರ ಯುದ್ಧ ಭೂಮಿಯಲ್ಲಿ ಎದುರಾಗದೆ , ತಮ್ಮ ಮಿತ್ರ ರಾಷ್ಟ್ರಗಳ ನೆಲವನ್ನು ಈ ಎರಡು ರಾಷ್ಟ್ರಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಮೈದಾನವಾಗಿಸಿಕೊಂಡವು.
ಶೀತಲ ಸಮರದ ಪ್ರಥಮಾರ್ಧದಲ್ಲಿ ಸೋವಿಯತ್ ಒಕ್ಕೂಟ ಶಸ್ತ್ರಾಸ್ತ್ರ ಉತ್ಪಾದನೆ, ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಬಾಹ್ಯಾಕಾಶದಲ್ಲಿನ ಸಂಶೋಧನೆ, ಅದೆ ಸಮಯದಲ್ಲಿ ನಡೆದ ಕೊರಿಯಾ ಯುದ್ದ, ವಿಯಟ್ನಾಂ ಯುದ್ದ, ಕ್ಯೂಬನ್ ಮಿಸಲೈ ಸಂಘರ್ಷ, ದ ಬೇ ಆಪ್ ಪಿಗ್ ಸಂಘರ್ಷ ಹೀಗೆ ನಡೆದ ಎಲ್ಲ ಯುದ್ದಗಳಲ್ಲಿ ಸೋವಿಯತ್ ಒಕ್ಕೂಟ ಅಮೆರಿಕವನ್ನು ಹಿಂದಿಕ್ಕಿ ನಾಗಲೋಟದಲ್ಲಿ ಮುಂದುವರೆಯುತ್ತಿತ್ತು.
ಇದರಿಂದ ಕಂಗೆಟ್ಟ ಅಮೆರಿಕಾ ಸೋವಿಯತ್ ಒಕ್ಕೂಟಕ್ಕೆ ಪೈಪೋಟಿ ನೀಡಲು ರಹಸ್ಯ ಸಂಶೋಧನೆಯನ್ನು ಪ್ರಾರಂಭಿಸಿತು, ಈ ರಹಸ್ಯ ಸಂಶೋಧನೆಗಾಗಿ ಆಯ್ದುಕೊಂಡ ಸ್ಥಳವೆ ಏರಿಯಾ -51. ಈ ಸ್ಥಳವು ಅಮೆರಿಕದ ಪಶ್ಚಿಮ ಭಾಗದ ನೆವಡಾ ಪ್ರದೇಶದ ದಕ್ಷಿಣ ಭಾಗದಲ್ಲಿ (ವ್ಯಾಪಾರಿ ಕೇಂದ್ರವಾದ ಲಾಸ್ ವೇಗಾಸ್ ನಗರದ ಉತ್ತರ ವಾಯುವ್ಯಕ್ಕೆ 83 ಮೈಲುಗಳಷ್ಟು ದೂರವಿರುವುದು) ನೆಲೆಗೊಂಡಿದೆ.
ಏರಿಯಾ – 51ರ ಕೇಂದ್ರಭಾಗದಲ್ಲಿ ಬೃಹತ್ತಾದ ಒಂದು ರಹಸ್ಯ ಸೇನಾ ವಿಮಾನ ನಿಲ್ದಾಣವಿದ್ದು ಮತ್ತು ಪ್ರಾಯೋಗಿಕ ವಿಮಾನಗಳು ಮತ್ತು ಶಸ್ತ್ರಾಸ್ತ್ರಗಳ ಅಭಿವೃದ್ಧಿ ಹಾಗೂ ಪರೀಕ್ಷಾ ಕಾರ್ಯಗಳಿಗೆ ಬೆಂಬಲ ನೀಡುವುದು ಈ ನೆಲೆಯ ಪ್ರಾಥಮಿಕ ಉದ್ದೇಶವಾಗಿತ್ತು. ಏರಿಯಾ-51 ಪ್ರದೇಶವನ್ನು ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ, ಅವುಗಳೆಂದರೆ ಡ್ರೀಮ್‌ಲ್ಯಾಂಡ್, ಪ್ಯಾರಡೈಸ್ ರಾಂಚ್, ಹೋಮ್ ಬೇಸ್, ವಾಟರ್‌ಟೌನ್ ಸ್ಟ್ರಿಪ್, ಗ್ರೂಮ್ ಲೇಕ್, ಹೋಮ್ ಏರ್‌ಪೋರ್ಟ್ ಎನ್ನುವುದು ಇದರ ತೀರಾ ಇತ್ತೀಚಿನ ಹೆಸರು ಮತ್ತು ಈ ಸ್ಥಳಕ್ಕೆ ಇತ್ತೀಚಿನವರೆಗು ನಾಗರಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಅಮೆರಿಕ ತನ್ನ ರಹಸ್ಯ ಮಿಲಿಟರಿ ಸಂಶೋಧನೆಯನ್ನು ಕಾರ್ಯಗತಗೊಳಿಸಲು ಮತ್ತು ಇದರ ಸುಳಿವು ಸೋವಿಯತ್ ಒಕ್ಕೂಟಕ್ಕೆ ತಿಳಿಯಬಾರದೆಂಬ ಉದ್ದೇಶದಿಂದ ಏರಿಯಾ 51 ನ್ನು ಅನ್ಯಗ್ರಹ ಜೀವಿಗಳ ಲ್ಯಾಂಡಿಗ್ ಬೇಸ್ ಎಂದೂ ಮತ್ತು ಅನೇಕ ಅನ್ಯಗ್ರಹ ಜೀವಿಗಳು ಈ ಪ್ರದೇಶಕ್ಕೆ ಹಾರುವ ತಟ್ಟೆಗಳಲ್ಲಿ ಬರುತ್ತವೆಂದೂ , ಕೃತಕವಾಗಿ ಸೃಷ್ಟಿಸಲ್ಪಟ್ಟ ಹಾರುವ ತಟ್ಟೆಗಳನ್ನು , ಅನ್ಯಗ್ರಹ ಜೀವಿಗಳನ್ನು ಹೋಲುವ ಜೀವಿಗಳನ್ನು ಅಂದಿನ ಸಮಯದಲ್ಲಿದ್ದ ಮಾದ್ಯಮಗಳ ಸಹಾಯದಿಂದ ಇಡಿ ಜಗತ್ತು ಅನ್ಯಗ್ರಹ ಜೀವಿಗಳ ಇರುವಿಕೆಯನ್ನು ನಂಬುವಂತೆ ಮಾಡುವಲ್ಲಿ ಅಮೆರಿಕ ಯಶಸ್ವಿಯಾಗಿತ್ತು.
ಸೋವಿಯತ್ ಒಕ್ಕೂಟದ ಮಾಹಿತಿಯ ಪ್ರಕಾರ ಸೋವಿಯತ್ ಒಕ್ಕೂಟದ ಮಿಗ್ -21 ಯುದ್ದ ವಿಮಾನವನ್ನು ಇಸ್ರೇಲ್‌ನ ಸಹಾಯದಿಂದ ಇರಾಕಿನಿಂದ ಅಪಹರಿಸಿ ಇದೇ ಏರಿಯಾ- 51ರಲ್ಲಿ ಅದರ ತಂತ್ರಜ್ಞಾನವನ್ನು ಅಮೆರಿಕ ತಿಳಿದುಕೊಂಡು ತನ್ನ ಹೊಸ ಯುದ್ದ ವಿಮಾನಗಳನ್ನು ಆವಿಷ್ಕಾರ ಮಾಡುವಲ್ಲಿ ಸಫಲವಾಯಿತೆಂದು ಹೇಳಲಾಗುತ್ತದೆ.
ಅಮೆರಿಕ ತನ್ನ ಗುಪ್ತ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಅನ್ಯಗ್ರಹ ಜೀವಿಗಳ ಸಿದ್ಧಾಂತವನ್ನು ಹುಟ್ಟು ಹಾಕಿ ಇಡಿ ಜಗತ್ತು ಭ್ರಮೆಯಲ್ಲಿ ಬದುಕುವಂತೆ ಮಾಡಿತ್ತು ಮತ್ತು ತನ್ನ ಈ ಕಾರ್ಯ ಸಾಧನೆಗಾಗಿ ಏರಿಯಾ51 ನ್ನು ಆಯ್ದುಕೊಂಡು ಇಲ್ಲಿಗೆ ನಾಗರಿಕರನ್ನು ನಿರ್ಬಂಧಿಸಿ ಅಮೆರಿಕದ ಅಧ್ಯಕ್ಷರು, ಉನ್ನತ ಅಧಿಕಾರಗಳು, ಸಿಐಎನ ಅಧಿಕಾರಿಗಳಿಗೆ ಈ ಇಲ್ಲಿ ಪ್ರದೇಶ ದೊರೆಯವ ವ್ಯವಸ್ಥೆ ಮಾಡಿ ಈ ಸ್ಥಳವನ್ನು ರಹ್ಯಸವಾಗಿಟ್ಟಿತ್ತು. ಮಾಹಿತಿಯ ಪ್ರಕಾರ ಅಮೆರಿಕದ 928 ಅಣ್ವಸ್ತ್ರ ಪರೀಕ್ಷೆಗಳಲ್ಲಿ 729 ಪರೀಕ್ಷೆಗಳನ್ನು ಈ ಪ್ರದೇಶದಲ್ಲಿ ನಡೆಸಲಾಗಿದೆ ಎನ್ನಲಾಗುತ್ತದೆ.
ರಾಸುಮ ಭಟ್
ಕುವೆಂಪು ವಿವಿ, ಚಿಕ್ಕಮಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.