LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌


Team Udayavani, Apr 19, 2024, 6:50 AM IST

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

ಲಕ್ನೋ: ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಉತ್ತಮ ಹೋರಾಟ ನೀಡುತ್ತಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ತನ್ನದೇ ನೆಲದಲ್ಲಿ ಶುಕ್ರವಾರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸವಾಲನ್ನು ಎದುರಿಸಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ತಂಡ ಗೆಲುವಿನ ಟ್ರ್ಯಾಕ್‌ಗೆ ಮರಳಲು ಹಾತೊರೆಯುತ್ತಿದ್ದರೆ ಚೆನ್ನೈ ಗೆಲುವಿನ ಟ್ರ್ಯಾಕ್‌ನಲ್ಲಿ ಮುಂದುವರಿಯುವ ಉತ್ಸಾಹದಲ್ಲಿದೆ.

ರುತುರಾಜ್‌ ಗಾಯಕ್ವಾಡ್‌ ನೇತೃತ್ವದ ಚೆನ್ನೈ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಸಂಭ್ರಮದಲ್ಲಿದ್ದು ಲಕ್ನೋ ವಿರುದ್ಧವೂ ಜಯಭೇರಿ ಬಾರಿಸಲು ಸನ್ನದ್ಧವಾಗಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಚೆನ್ನೈ ಬಲಿಷ್ಠವಾಗಿದೆ.

ಮತೀಶ ಪತಿರಣ ಈ ಹಿಂದಿನ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದರು. ಅವರಲ್ಲದೇ ಬಾಂಗ್ಲಾದ ಮುಸ್ತಾಫಿಜುರ್‌ ರೆಹಮಾನ್‌, ಸ್ಯಾಂಟ್ನರ್‌ ಉತ್ತಮ ದಾಳಿ ಸಂಘಟಿಸಬಲ್ಲರು. ಇಲ್ಲಿನ ಪಿಚ್‌ ಸ್ಪಿನ್‌ ಮತ್ತು ವೇಗದ ನೆರವಾಗುವ ಸಾಧ್ಯತೆ ಇರುವ ಕಾರಣ ರವೀಂದ್ರ ಜಡೇಜ ಪರಿಣಾಮ ಕಾರಿಯಾಗಿ ದಾಳಿ ನಡೆಸುವ ಸಾಧ್ಯತೆಯಿದೆ. ಅವರೊಂದಿಗೆ ಮತೀಶ ತೀಕ್ಷಣ ಅವರನ್ನೂ ಆಡಿಸುವ ಸಾಧ್ಯತೆಯಿದೆ.

ಈ ಋತುವಿನಲ್ಲಿ ಲಕ್ನೋದಲ್ಲಿ ಸರಾಸರಿ ಮೊತ್ತ 175 ಆಗಿದೆ. ಇದು ಇನ್ನುಳಿದ ಕಡೆಗಳಿಗಿಂತ 15ರಿಂದ 20 ರನ್‌ ಕಡಿಮೆಯೆಂದು ಹೇಳಬಹುದು. ಈ  ಮೊತ್ತವನ್ನು ಗಮನಿಸಿದರೆ ಇಲ್ಲಿನ ಪಿಚ್‌ ಬ್ಯಾಟ್ಸ್‌ಮನ್‌ಗಳಿಗಿಂತ ಬೌಲರ್‌ಗಳಿಗೆ ನೆರವಾಗುವ ಸಾಧ್ಯತೆಯಿದೆ ಎಂದು ಹೇಳಬಹುದು.

ಲಕ್ನೋಗೆ ಗಾಯದ ಸಮಸ್ಯೆ:

ಲಕ್ನೋ ತಂಡ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ತಂಡದ ಯುವ ವೇಗಿ ಮಾಯಾಂಕ್‌ ಯಾದವ್‌ ಗಾಯದಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಬುಧವಾರ ತರಬೇತಿ ಆರಂಭಿಸಿರುವ 21ರ ಹರೆಯದ ಯಾದವ್‌ ಚೆನ್ನೈ ವಿರುದ್ಧ ಆಡುವ ಸಾಧ್ಯತೆಯಿದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಅವರು ಆಡಿದರೆ ಲಕ್ನೋ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಸ್ಪಿನ್‌ ವಿಭಾಗದಲ್ಲಿ ರವಿ ಬಿಷ್ಣೋಯಿ ಬಿಗು ದಾಳಿ ಸಂಘ ಟಿಸು ತ್ತಿದ್ದಾರೆ. ಆದರೆ ತಂಡದ ಬ್ಯಾಟಿಂಗ್‌ ಹೇಳುವಷ್ಟು ಪರಿಣಾಮಕಾರಿಯಾಗಿಲ್ಲ. ಸತತ ಮೂರು ಅರ್ಧಶತಕಗಳ ಬಳಿಕ ಕ್ವಿಂಟನ್‌ ಕಾಕ್‌ ಕಳೆದ ಮೂರು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಇಂಪ್ಯಾಕ್ಟ್ ಆಟಗಾರ ಕೃಣಾಲ್‌ ಪಾಂಡ್ಯ ಮಿಂಚಲಿಲ್ಲ. ನಾಯಕ ಕೆಎಲ್‌ ರಾಹುಲ್‌ ಅವರಿಂದ ಸ್ಫೋಟಕ ಆಟ ಇನ್ನಷ್ಟೇ  ಬರಬೇಕಾಗಿದೆ. ಯುವ ಆಯುಷ್‌ ಬದೋನಿ, ನಿಕೋಲಾಸ್‌  ಪೂರಣ್‌ ಅಪಾಯಕಾರಿಯಾಗಿ ಕಾಣುತ್ತಿದ್ದಾರೆ.

ಪಿಚ್‌ ವರದಿ:

ಇಲ್ಲಿನ ಪಿಚ್‌ ನಿಧಾನಗತಿಯಿಂದ ಕೂಡಿದೆ. ಚೆಂಡು ಹಳತು ಆಗುತ್ತಿದ್ದಂತೆ ಬೌಲರ್‌ಗಳು ಪರಿಣಾಮಕಾರಿಯಾಗಿ ದಾಳಿ ಮಾಡಲು ಸಾಧ್ಯವಾಗುವ ಕಾರಣ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿಸಲು ಕಷ್ಟವಾಗುತ್ತದೆ. ಇಲ್ಲಿನ ಪಿಚ್‌ ಸ್ಪಿನ್‌ಗೂ ನೆರವಾಗಲಿದೆ. ಮೊದಲು ಬ್ಯಾಟಿಂಗ್‌ ಮಾಡುವ ತಂಡ ಹೆಚ್ಚಿನ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಆರು ಪಂದ್ಯಗಳಲ್ಲಿ ಗೆದ್ದಿದ್ದರ ಚೇಸ ಮಾಡಿದ ವೇಳೆ ಮೂರು ತಂಡಗಳು ಗೆದ್ದಿವೆ. ಹೀಗಾಗಿ ಟಾಸ್‌ ಗೆದ್ದವರು ಮೊದಲು ಬ್ಯಾಟಿಂಗ್‌ ಮಾಡುವ ನಿರೀಕ್ಷೆಯಿದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Paralympics closing ceremony: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌, ಪ್ರೀತಿ ಧ್ವಜಧಾರಿಗಳು

Paralympics: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌ ಸಿಂಗ್‌, ಪ್ರೀತಿ ಪಾಲ್‌ ಧ್ವಜಧಾರಿಗಳು

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

Paris Paralympics; Another gold for India; Praveen Kumar won gold in high jump

Paralympics; ಭಾರತಕ್ಕೆ ಮತ್ತೊಂದು ಬಂಗಾರ; ಹೈಜಂಪ್‌ ನಲ್ಲಿ ಚಿನ್ನ ಗೆದ್ದ ಪ್ರವೀಣ್‌ ಕುಮಾರ್

Vikram Rathore; Former coach of Team India joined New Zealand team

Vikram Rathour; ನ್ಯೂಜಿಲ್ಯಾಂಡ್‌ ತಂಡ ಸೇರಿದ ಟೀಂ ಇಂಡಿಯಾ ಮಾಜಿ ಕೋಚ್

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.