Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌


Team Udayavani, Apr 19, 2024, 10:31 AM IST

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಜಾಗತಿಕ ಆಹಾರ ಮತ್ತು ಪಾನೀಯ ದಿಗ್ಗಜ ಉದ್ಯಮವಾದ ನೆಸ್ಲೆ, ಭಾರತ ಸಹಿತ ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕನ್‌ ದೇಶಗಳಲ್ಲಿ ಮಾರಾಟ ಮಾಡುತ್ತಿರುವ ಶಿಶು ಆಹಾರ ಸಿರಿಲ್ಯಾಕ್‌ನಲ್ಲಿ ಸಕ್ಕರೆಯನ್ನು ಸೇರಿಸಲಾಗುತ್ತಿರುವ
ಆತಂಕಕಾರಿ ಸಂಗತಿಯೊಂದು ಈಗ ಬೆಳಕಿಗೆ ಬಂದಿದೆ. ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿ ನೆಸ್ಲೆ ಇಂತಹ ಕಾರ್ಯದಲ್ಲಿ ನಿರತವಾಗಿರುವಂತೆ ಕಂಡುಬರುತ್ತಿದೆ.

ಸ್ವಿಟ್ಸರ್‌ಲ್ಯಾಂಡ್‌ನ‌ ಸರಕಾರೇತರ ಸಂಸ್ಥೆ ಮತ್ತು ಐಬಿಎಫ್ಎಎನ್‌ ಜಂಟಿಯಾಗಿ ಬೆಲ್ಜಿಯನ್‌ ಪ್ರಯೋಗಾಲಯದಲ್ಲಿ ಸಿರಿಲ್ಯಾಕ್‌ನ ವಿವಿಧ ಪದಾರ್ಥಗಳ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದವು. ಈ ವೇಳೆ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಸಿರಿಲ್ಯಾಕ್‌ನ ವಿವಿಧ ಮಾದರಿಗಳಲ್ಲಿ ಸಕ್ಕರೆ ಅಂಶ ಸೇರಿಸಿರುವುದು ಕಂಡುಬಂದಿದೆ. ಇದೇ ಕಂಪೆನಿ ಯುರೋಪ್‌, ಜರ್ಮನಿ, ಬ್ರಿಟನ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಿಗೆ ಪೂರೈಸುತ್ತಿರುವ
ಸಿರಿಲ್ಯಾಕ್‌ಗೆ ಸಕ್ಕರೆಯನ್ನು ಸೇರಿಸುತ್ತಿಲ್ಲ. ಜಾಗತಿಕ ಎಫ್ಎಂಸಿಜಿ ಕಂಪೆನಿಯ ಈ ಇಬ್ಬಗೆಯ ಧೋರಣೆ ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.

ವರದಿಯ ಪ್ರಕಾರ ಭಾರತದಲ್ಲಿ ಮಾರಾಟ ಮಾಡಲಾಗುತ್ತಿರುವ ಸಿರಿಲ್ಯಾಕ್‌ನಲ್ಲಿ ಸರಾಸರಿ 2.7 ಗ್ರಾಂನಷ್ಟು ಸಕ್ಕರೆಯನ್ನು ಸೇರಿಸಲಾಗುತ್ತಿದ್ದರೆ, ಫಿಲಿಪ್ಪೀನ್ಸ್‌ನಲ್ಲಿ ಮಾರಾಟ ಮಾಡಲಾಗುತ್ತಿರುವ ಸಿರಿಲ್ಯಾಕ್‌ ಸರಾಸರಿ 7.3 ಗ್ರಾಂಗಳಷ್ಟು ಸಕ್ಕರೆಯನ್ನು ಹೊಂದಿದೆ. ಇನ್ನು ಇಥಿಯೋಪಿಯಾದಲ್ಲಿ 5 ಗ್ರಾಂ, ಥೈಲ್ಯಾಂಡ್‌ನ‌ಲ್ಲಿ 6 ಗ್ರಾಂಗಳಷ್ಟು ಸಕ್ಕರೆಯನ್ನು ಹೊಂದಿದೆ.
ವಿವಿಧ ಧಾನ್ಯಗಳನ್ನು ಬಳಸಿ ಈ ಶಿಶು ಆಹಾರವನ್ನು ತಯಾರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ 6 ತಿಂಗಳುಗಳಿಗಿಂತ ಮೇಲ್ಪಟ್ಟ ಕಂದಮ್ಮಗಳಿಗೆ 2 ವರ್ಷಗಳವರೆಗೆ ನೀಡುವ ಆಹಾರ ಪದಾರ್ಥಗಳಿಗೆ ಸಕ್ಕರೆಯನ್ನು ಸೇರಿಸಬಾರದು.

ಹಾಲು, ಧಾನ್ಯ, ಹಣ್ಣುಗಳಲ್ಲಿರುವ ಸಿಹಿಯನ್ನಷ್ಟೇ ಶಿಶು ಆಹಾರ ಪದಾರ್ಥಗಳು ಹೊಂದಿರಬೇಕು. ಒಂದು ವೇಳೆ ಮಗುವಿಗೆ ಎಳವೆಯಲ್ಲೇ ಹೆಚ್ಚುವರಿಯಾಗಿ ಸಕ್ಕರೆಯನ್ನು ಒಳಗೊಂಡ ಆಹಾರಗಳನ್ನು ನೀಡಿದ್ದೇ ಆದಲ್ಲಿ ಮಕ್ಕಳಿಗೆ ಇದು ಒಂದು ವ್ಯಸನವಾಗಿ ಆ ಬಳಿಕ ಇಂತಹುದೇ ಆಹಾರಕ್ಕಾಗಿ ಪಟ್ಟು ಹಿಡಿಯುತ್ತವೆ. ಇದರಿಂದ ಅಧಿಕ ತೂಕ, ಬೊಜ್ಜು, ದೀರ್ಘ‌ಕಾಲೀನ ಕಾಯಿಲೆಗಳಾದ ಟೈಪ್‌ 2 ಡಯಾಬಿಟೀಸ್‌, ಹೃದಯದ ಕಾಯಿಲೆಗಳು ಹಾಗೂ ಕೆಲವೊಂದು ತೆರನಾದ ಕ್ಯಾನ್ಸರ್‌ ಬಾಧಿಸುವ ಸಂಭವ ಅಧಿಕವಾಗಿರುತ್ತದೆ. ಜತೆಯಲ್ಲಿ ದಂತ ಹುಳುಕು, ಪೋಷಕಾಂಶಯುಕ್ತ ಆಹಾರ ಸೇವನೆ ಪ್ರಮಾಣದಲ್ಲಿ ಇಳಿಕೆಯಾಗಿ
ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕವಾಗಿವೆ.

ಭಾರತದಲ್ಲಿ ಶಿಶು ಆಹಾರ ತಯಾರಿ ಕುರಿತಂತೆ ಪ್ರತ್ಯೇಕ ಮಾನದಂಡವಿದೆಯಾದರೂ ಸಕ್ಕರೆಯ ಪ್ರಮಾಣದ ಬಗೆಗೆ ಸ್ಪಷ್ಟ ಉಲ್ಲೇಖವಿಲ್ಲ. ಆದರೆ ಜಾಗತಿಕ ಮಾನದಂಡದಲ್ಲಿ ಶಿಶುಗಳ ಆಹಾರದಲ್ಲಿ ಸಕ್ಕರೆಯನ್ನು ಸೇರಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದ್ದರೂ ನೆಸ್ಲೆ ಇದನ್ನು ಪಾಲಿಸದಿರುವುದು ಅದರ ಮಾರುಕಟ್ಟೆ ತಂತ್ರಗಾರಿಕೆ ಎಂಬುದು ಸುಸ್ಪಷ್ಟ.

ಇನ್ನಾದರೂ ದೇಶದಲ್ಲಿ ಮಾರಾಟ ಮಾಡಲಾಗುತ್ತಿರುವ ಆಹಾರ ಉತ್ಪನ್ನಗಳು ಮತ್ತು ಪದಾರ್ಥ ಗಳ ಗುಣಮಟ್ಟದ ಬಗೆಗೆ ಸಂಬಂಧಪಟ್ಟ ಸಂಸ್ಥೆಗಳು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸ ಬೇಕು. ಈಚೆಗಷ್ಟೇ ಕೇಂದ್ರ ಸರಕಾರ ಬೋರ್ನ್ವಿಟಾ ಪಾನೀಯ ವನ್ನು ಆರೋಗ್ಯ ಪೂರ್ಣ ಪಾನೀಯ ಪಟ್ಟಿಯಿಂದ ಹೊರ ತೆಗೆದಿರುವುದು ಇಲ್ಲಿ ಉಲ್ಲೇಖಾರ್ಹ. ರಾಜ್ಯದಲ್ಲಿ ಸಹ ಈಚೆಗೆ ಗೋಬಿ ಮಂಚೂರಿಯಲ್ಲಿ ಕ್ಯಾನ್ಸರ್‌ ಕಾರಕ ಅಂಶ ಇದೆ ಎಂಬ ಕಾರಣಕ್ಕೆ ಕೆಲವು ರಾಸಾಯನಿಕ ವಸ್ತುಗಳನ್ನು ನಿಷೇಧಿಸಿದ್ದನ್ನು
ಸ್ಮರಿಸಬಹುದು. ಈ ರೀತಿಯ ಕ್ರಮಗಳು ಸ್ವಾಗತಾರ್ಹ. ಆಹಾರ ಉತ್ಪನ್ನಗಳು ನೂರು ಪ್ರತಿಶತ ಸುರಕ್ಷೆಯನ್ನು ಹೊಂದಿರುವಂತೆ ಖಾತರಿಪಡಿಸುವ ಹೊಣೆಗಾರಿಕೆ ಈ ಸಂಸ್ಥೆಗಳದ್ದಾಗಿದೆ. ಇನ್ನು ಜನತೆ ಕೂಡ ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಆಹಾರ ಉತ್ಪನ್ನಗಳಿಗೆ ಮಾರುಹೋಗದೆ, ಅವುಗಳ ಬಗೆಗೆ ತಿಳಿದುಕೊಂಡು ಸೇವಿಸಿದರೆ ಸಂಭಾವ್ಯ ಅನಾಹುತಗಳನ್ನು ತಪ್ಪಿಸಬಹುದು.

ಟಾಪ್ ನ್ಯೂಸ್

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವುಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

Train ಹಳಿ ತಪ್ಪಿಸುವ ಯತ್ನ: ಉಗ್ರರ ಷಡ್ಯಂತ್ರ ಮಟ್ಟ ಹಾಕಿ

Train ಹಳಿ ತಪ್ಪಿಸುವ ಯತ್ನ: ಉಗ್ರರ ಷಡ್ಯಂತ್ರ ಮಟ್ಟ ಹಾಕಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.