Woman: ಸದಾಕಾಲ ಸಾಧಕಿ ಹೆಣ್ಣು


Team Udayavani, Apr 19, 2024, 2:27 PM IST

13-

ಹೆಣ್ಣು ಸಂಸಾರದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಮೊದಲಾದ ಮಾತುಗಳು ಅಕ್ಷರಶಃ ಸತ್ಯ. ಒಂದು ಮನೆಯಲ್ಲಿ ಹೆಣ್ಣು ಕಲಿತರೆ ಆ ಮನೆಗೆ ಬೆಳಕಾಗುವಳು. ಸಮಾಜದ ಎಲ್ಲ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಸಮಾಜವನ್ನೇ ಉದ್ಧರಿಸುವರು.

ಸಮಾಜದ ಪ್ರಗತಿಯ ರಥ ಸಾಗಬೇಕಾದರೆ ಗಂಡು-ಹೆಣ್ಣು ಎಂಬ ಎರಡು ಚಕ್ರಗಳು ಇರಲೇಬೇಕು. ರಥಕ್ಕೆ ಹೇಗೆ ಒಂದು ಚಕ್ರ ಇಲ್ಲವಾದರೆ ಚಲಿಸಲು ಸಾಧ್ಯವಿಲ್ಲವೋ  ಸಮಾಜವೂ ಹಾಗೆಯೇ.  ಪ್ರಕೃತಿಯೇ ಗಂಡು, ಹೆಣ್ಣಿಗೂ ಸಮಾನವಾದ ಸ್ಥಾನಮಾನವನ್ನು ನೀಡಿಬಿಟ್ಟಿದೆ. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ರಾಷ್ಟ್ರಕವಿ ಕುವೆಂಪು, ದೈಹಿಕವಾಗಿ ಗಂಡು-ಹೆಣ್ಣು ಎರಡು ಲಿಂಗಗಳನ್ನು ಕಾಣಬಹುದು, ಅಧ್ಯಾತ್ಮಿಕವಾಗಿ ಆತ್ಮಗಳಿಗೆ ಯಾವುದೇ ಲಿಂಗ ಭೇದವಿಲ್ಲ ಎಂದು ಹೇಳಿದ್ದಾರೆ.

ಪುರುಷನಷ್ಟೇ ಸಮಾನ ಸಾಮರ್ಥ್ಯ ಉಳ್ಳವಳು ಹೆಣ್ಣು. ಆದರೆ ಹಿಂದಿನ ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ, ಹೆಣ್ಣು ಗಂಡಿನ ಗುಲಾಮಳು, ಅವಳೇನಿದ್ದರೂ ಗಂಡು ಹೇಳಿದ ಹಾಗೆ ಕೇಳಬೇಕು ಎನ್ನುವ ಮನೋಭಾವನೆಯನ್ನು ಸ್ವಾರ್ಥಪರ ಪುರುಷರು ಹುಟ್ಟು ಹಾಕಿದ್ದರ ಪರಿಣಾಮವಾಗಿ ಹೆಣ್ಣು ಅವಮಾನಕ್ಕೊಳಗಾದಳು, ದೌರ್ಜನ್ಯಕ್ಕೊಳಗಾದಳು, ಅಬಲೆಯಾದಳು, ಪರಾವಲಂಬಿಯಾದಳು. ಇತ್ತೀಚೆಗೆ ನಡೆಯುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಕಂಡು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಘಟನೆಗಳು ನಮ್ಮ ಭಾರತಿಯ ಉನ್ನತ ಸಂಸ್ಕೃತಿಗೆ ಘೋರ ಅಪಮಾನವನ್ನು ಮಾಡುವಂತವಷ್ಟೇ ಅಲ್ಲ ಮಹಿಳೆಯ ಅಳಿವು ಉಳಿವಿನ ಪ್ರಶ್ನೆಯಂತೆ ತೋರುತ್ತವೆ.

ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ.  ಹೆಣ್ಣು ರಾಷ್ಟ್ರಪತಿಯಾಗುವುದು ಒಂದು ಸಾಧನೆಯಾದರೆ, ತನ್ನ ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದೂ ಕೂಡ ಸಾಧನೆಯೇ.

ಹೆಣ್ಣು ಪುರುಷನಂತೆಯೇ ಬೇರೆ ಬೇರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕಾದರೆ ಅವಳಿಗೆ ಎದುರಾಗುವ ಮೊದಲ ಸವಾಲು ಕುಟುಂಬ. ಹೆಣ್ಣು ತಾಯಿಯಾಗಿ, ಮಡದಿಯಾಗಿ, ಸೊಸೆಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಕುಟುಂಬರೂಪಿಯಾದ ಹೆಣ್ಣು ಸಮಾಜ ರೂಪಿಯಾಗಿ ನಿಲ್ಲಬೇಕಾದರೆ ಕುಟುಂಬದವರ ಸಹಕಾರ ಬಹಳ ಮುಖ್ಯವಾಗಿರುತ್ತದೆ. ಕುಟುಂಬದ ಸಹಕಾರ ದೊರೆತರೆ ಹೆಣ್ಣು ಯಾವ ಸಾಧನೆಯನ್ನು ಬೇಕಾದರೂ ಮಾಡಬಲ್ಲಳು ಎನ್ನುವುದಕ್ಕೆ ಬಹಳಷ್ಟು ಸಾಕ್ಷಿಗಳು ನಮ್ಮ ನಡುವೆಯೇ ಇವೆ.

-ಸಿಂಧೂರ್‌ ಗೌಡ

ವಿವಿ, ತುಮಕೂರು

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.