ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

ಶ್ರೀಮಹಾಲಿಂಗೇಶ್ವರ,ಶ್ರೀ ಮಹಾಗಣಪತಿ,ಶ್ರೀ ಸೂರ್ಯನಾರಾಯಣ ನೂತನ ದೇಗುಲ ಸಮರ್ಪಣೆ

Team Udayavani, Apr 19, 2024, 8:12 PM IST

2-aa

ಶಿರ್ವ : ಜೀರ್ಣೋದ್ಧಾರಗೊಂಡ ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ,ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲ ಸಮರ್ಪಣೆ,ಪುನಃಪ್ರತಿಷ್ಠಾ ಅಷ್ಟಬಂಧ,ಅಷ್ಟೋತ್ತರ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಎ. 19 ರಂದು ಸಂಜೆ ನಡೆಯಿತು.

ಬೆಳ್ಳೆಯ ಗೀತಾ ಮಂದಿರದಿಂದ ಮೂಡುಬೆಳ್ಳೆ ದೇವಸ್ಥಾನದವರೆಗೆ ನಡೆದ ಹೊರೆಕಾಣಿಕೆ ಮೆರವಣಿಗೆಗೆ ವಿಶ್ವ ಹಿಂದೂ ಪರಿಷತ್‌ನ ಉಡುಪಿ ಜಿಲ್ಲಾ ಪ್ರಮುಖ್‌ ವೇ|ಮೂ| ವಿಖ್ಯಾತ್‌ ಭಟ್‌ಪ್ರಾರ್ಥನಾ ವಿಧಿ ನೆರವೇರಿಸಿ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.

ಮೂಡುಬೆಳ್ಳೆಯ ಪಾಣಾರ ಸಂಘ,ಉಮೇಶ್‌ ನಾಯಕ್‌ ಮೂಡುಬೆಳ್ಳೆ ,ಬೆಳ್ಳೆ ಕಟ್ಟಿಂಗೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಮಸ್ಥರು ಮತ್ತು ಭಕ್ತರ ಸಹಕಾರದೊಂದಿಗೆ ವಿವಿಧ ವಾದ್ಯ ಘೋಷ ಗಳೊಂದಿಗೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಕಲಶ ಹಿಡಿದ ಮಹಿಳೆಯರು , ಕುಣಿತ ಭಜನೆ,ಕೇರಳ ಚೆಂಡೆ,ಹುಲಿವೇಷ, ಕೀಲು ಕುದುರೆ, ಮರಕಾಲು ಕುಣಿತ, ಮಂಗಳ ವಾದ್ಯವಿದ್ದು, ವಿಶೇಷ ಆಕರ್ಷಣೆಯಾಗಿ 2 ಜತೆ ಕಂಬಳ ಕೋಣ,ನಂದಿ ಮತ್ತು ಮರಕಾಲು ಕುಣಿತದ ಪುಟಾಣಿ ಬಾಲಕಿ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರರಾದ ಬೆಳ್ಳೆ ಮೇಲ್ಮನೆ ವಸಂತ ಶೆಟ್ಟಿ,ಬೆಳ್ಳೆ ಕೆಳಮನೆ ಡಾ| ರಾಮರತನ್‌ ರೈ, ಮೊಕ್ತೇಸರ/ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಹೆಚ್‌. ಭಾಸ್ಕರ ಶೆಟ್ಟಿ , ದೇಗುಲದ ಅರ್ಚಕರಾದ ಶಶಿಕಾಂತ ಉಪಾಧ್ಯಾಯ ,ರಾಘವೇಂದ್ರ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ, ಪವಿತ್ರಪಾಣಿ ರಾಮಮೂರ್ತಿ ಹೆಬ್ಬಾರ್‌, ಸುದರ್ಶನ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಬೆಳ್ಳೆ ಮೇಲ್ಮನೆ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿಬೆಳ್ಳೆ ರಾಜೇಂದ್ರ ಶೆಟ್ಟಿ,ಜತೆ ಕಾರ್ಯದರ್ಶಿಗಳಾದ ಬೆಳ್ಳೆ ನಿರಂಜನ್‌ ರಾವ್‌, ರಂಜನ್‌ ಶೆಟ್ಟಿ ಬೆಳ್ಳೆ ಪಡುಮನೆ, ನಾಗರಾಜ ಕಾಮತ್‌,ಕೋಶಾಧಿಕಾರಿ ಬೆಳ್ಳೆ ಚಂದ್ರಕಾಂತ ರಾವ್‌, ಮುಂಬೈ ಸಮಿತಿಯ ಅಧ್ಯಕ್ಷ ವಿನಯ ಶೆಟ್ಟಿ ಬೆಳ್ಳೆ ಪಾಲೆಮಾರ್‌,ಸಂಚಾಲಕರಾದ ಬೆಳ್ಳೆ ಮೇಲ್ಮನೆ ಕಿಶೋರ್‌ ಶೆಟ್ಟಿ ಮತ್ತು ಬೆಳ್ಳೆ ಕೆಳಮನೆ ಡಾ| ಪ್ರಕಾಶ್ಚಂದ್ರ ಶೆಟ್ಟಿ,ವೆಂಕಟರಮಣ ರಾವ್‌,ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಬೆಳ್ಳೆ ಮೇಲ್ಮನೆ ರೇಖಾ ಶೆಟ್ಟಿ,ಸುರೇಶ್‌ ಶೆಟ್ಟಿ ಪಾಲೇಮಾರ್‌,ಸಂದೀಪ್‌ ಸಾಲಿಯಾನ್‌, ಬೆಳ್ಳೆ ಶಿವಾಜಿ ಎಸ್‌.ಸುವರ್ಣ, ಕಟ್ಟಿಂಗೇರಿ ದೇವದಾಸ್‌ ಹೆಬ್ಟಾರ್‌, ವ್ಯವಸ್ಥಾಪನ ಸಮಿತಿಯ ಸದಸ್ಯರು,ಗ್ರಾಮದ ವಿವಿಧ ಧಾರ್ಮಿ ಕ ಕ್ಷೇತ್ರಗಳು ಮತ್ತು ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಗ್ರಾಮಸ್ಥರು ಮತ್ತು ಭಕ್ತರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.