Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ
"ಅಲ್ಲಾ ಹೋ ಅಕ್ಬರ್' ಎಂದು ಕೂಗುವಂತೆ ಯುವಕರ ತಂಡದಿಂದ ಬಲವಂತ
Team Udayavani, Apr 19, 2024, 10:51 PM IST
ಮೈಸೂರು: ಪ್ರಧಾನಿ ಮೋದಿ ಕುರಿತು ಹಾಡು ರಚಿಸಿದ್ದ ಯುವಕನೋರ್ವ ಅದರ ಪ್ರಮೋಷನ್‌ಗಾಗಿ ಸಬ್ ಸ್ಕ್ರೈಬ್ ಮಾಡುವ ವೇಳೆ ಅನ್ಯಕೋಮಿನ ಗುಂಪೊಂದು ಹಲ್ಲೆ ನಡೆಸಿ ರುವ ಘಟನೆ ಶುಕ್ರವಾರ ನಡೆದಿದೆ.
ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಯುವಕ, ಯೂ ಟ್ಯೂಬರ್ ರೋಹಿತ್ ಹಲ್ಲೆಗೊಳಗಾದ ಯುವಕ. ಶುಕ್ರವಾರ ಬೆಳಗ್ಗೆ ನಗರದ ಸರಕಾರಿ ಅತಿಥಿ ಗೃಹದ ಮುಂಭಾಗದಲ್ಲಿ ತಮ್ಮ ಪರಿಚಯಸ್ಥರೊಬ್ಬರ ಮೊಬೈಲ್ ಪಡೆದು ತಮ್ಮ ಹಾಡಿಗೆ ಸಬ್ ಸ್ಕ್ರೈಬ್ ಮಾಡುವ ವೇಳೆ ಅಲ್ಲಿಗೆ ಬಂದ ಯುವಕನೋರ್ವ ಈ ಕುರಿತು ಮಾಹಿತಿ ಕೇಳಿದ್ದಾನೆ. ರೋಹಿತ್ ತಾನು ಮೋದಿ ಕುರಿತು ಮಾಡಿರುವ ಹಾಡಿಗೆ ಸಬ್ ಸ್ಕ್ರೈಬ್ ಮಾಡುತ್ತಿರುವ ಬಗ್ಗೆ ಹೇಳಿದ್ದಾರಲ್ಲದೆ, ಆ ಹಾಡನ್ನು ಅಪರಿಚಿತ ಯುವಕನಿಗೆ ಕೇಳಿಸಿದ್ದಾನೆ. ಹಾಡು ಕೇಳಿದ ಯುವಕ, ಹಾಡು ಚೆನ್ನಾಗಿದ್ದು, ನನ್ನ ಗೆಳೆಯರು ಅತಿಥಿ ಗೃಹದ ಒಳಗಿದ್ದಾರೆ.
ಅವರ ಬಳಿಯೂ ಸಬ್ ಸ್ಕ್ರೈಬ್ ಮಾಡಿಕೊಡಿಸುವುದಾಗಿ ಹೇಳಿ ಅತಿಥಿ ಗೃಹದ ಆವರಣಕ್ಕೆ ಕರೆತಂದಿದ್ದಾನೆ. ಅಲ್ಲಿ ನಾಲ್ಕು ಜನರ ತಂಡ ರೋಹಿತ್ ಮೇಲೆ ಹಲ್ಲೆ ನಡೆಸಿದೆ. ಒಬ್ಬ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದರೆ, ಇನ್ನೊಬ್ಬ ಸಿಗರೇಟ್‌ನಿಂದ ಸುಟ್ಟಿದ್ದಾನೆ. ಅಲ್ಲದೆ, ಅಲ್ಲಾ ಹೋ ಅಕºರ್ ಎಂದು ಕೂಗುವಂತೆ ಯುವಕರ ತಂಡ ಬಲವಂತ ಮಾಡಿದೆ. ರೋಹಿತ್ ಬಳಿಯಿದ್ದ ಶ್ರೀರಾಮನ ಭಾವಚಿತ್ರವಿರುವ ಕೇಸರಿ ಬಾವುಟವನ್ನು ಹರಿದು ಅದರ ಮೇಲೆ ಮೂತ್ರ ವಿಸ ರ್ಜನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ , ದುಷ್ಕರ್ಮಿಗಳ ತಂಡ ಪರಾರಿಯಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.