![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 20, 2024, 6:50 AM IST
ಹೊಸದಿಲ್ಲಿ: ರಿಷಭ್ ಪಂತ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತವರಿನ “ಅರುಣ್ ಜೇಟ್ಲಿ ಸ್ಟೇಡಿಯಂ’ಗೆ (ಫಿರೋಜ್ ಷಾ ಕೋಟ್ಲಾ) ಮರಳಿದ ಖುಷಿ ಯಲ್ಲಿದೆ. ಶನಿವಾರ ಸನ್‌ರೈಸರ್ ಹೈದರಾ ಬಾದ್ ವಿರುದ್ಧ ಇಲ್ಲಿ ಪ್ರಸಕ್ತ ಸೀಸನ್‌ನ ಮೊದಲ ಪಂದ್ಯವನ್ನು ಆಡಲಿದೆ.
ಡೆಲ್ಲಿ ತನ್ನ ಈವರೆಗಿನ 7 ಪಂದ್ಯ ಗಳಲ್ಲಿ ಎರಡನ್ನು ದ್ವಿತೀಯ ತವರಾದ ವಿಶಾಖ ಪಟ್ಟಣದಲ್ಲಿ ಆಡಿತ್ತು. ಉಳಿ ದಂತೆ ಮುಲ್ಲಾನ್‌ಪುರ್, ಜೈಪುರ, ಮುಂಬಯಿ, ಲಕ್ನೋ ಮತ್ತು ಹೈದರಾ ಬಾದ್‌ನಲ್ಲಿ ಕಣಕ್ಕಿಳಿದಿತ್ತು. ಇದೀಗ ಕೋಟ್ಲಾಕ್ಕೆ ಮರಳುವ ಕಾರಣ ತಂಡ ಭಾರೀ ಖುಷಿಯಲ್ಲಿದೆ. ಅದರಲ್ಲೂ ರಿಷಭ್ ಪಂತ್ ಪಾಲಿಗೆ ಇದೊಂದು ಭಾವನಾತ್ಮಕ ಕ್ಷಣವಾಗಿದೆ. 2022ರ ಕೊನೆಯಲ್ಲಿ ಭೀಕರ ಅಪಘಾತಕ್ಕೆ ಸಿಲುಕಿ, ಪವಾಡಸದೃಶ ರೀತಿಯಲ್ಲಿ ಬದುಕಿ ಉಳಿದ ರಿಷಭ್ ಪಂತ್, ಅನಂತರ ತವರಿನ ಕೋಟ್ಲಾದಲ್ಲಿ ಆಡಲಿರುವ ಮೊದಲ ಪಂದ್ಯ ಇದಾಗಿದೆ.
ಹೈದರಾಬಾದ್ ಘಾತಕ ಬ್ಯಾಟಿಂಗ್
ಡೆಲ್ಲಿ ಕ್ಯಾಪಿಟಲ್ಸ್ ಈವರೆಗಿನ 7 ಪಂದ್ಯಗಳಲ್ಲಿ ಮೂರನ್ನು ಗೆದ್ದು ನಾಲ್ಕರಲ್ಲಿ ಸೋತಿದೆ. ಆದರೆ ಲಕ್ನೋ ಮತ್ತು ಗುಜರಾತ್ ವಿರುದ್ಧ ಸಾಧಿಸಿದ ಪರಿಣಾಮಕಾರಿ ಗೆಲುವು ಡೆಲ್ಲಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಇನ್ನೊಂದೆಡೆ ಹೈದರಾಬಾದ್ ಡೆಲ್ಲಿಗಿಂತ ಮಿಗಿಲಾದ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಒಂದೇ ಋತುವಿನಲ್ಲಿ ಎರಡು ಸಲ ಐಪಿಎಲ್ ಗರಿಷ್ಠ ಮೊತ್ತದ ದಾಖಲೆಯನ್ನು ಸ್ಥಾಪಿಸಿದ ಛಾತಿ ಕಮಿನ್ಸ್ ಬಳಗದ್ದು. ಮುಂಬೈ ವಿರುದ್ಧ 3ಕ್ಕೆ 277 ರನ್ ಪೇರಿಸಿದ ಬಳಿಕ ಆರ್‌ಸಿಬಿ ವಿರುದ್ಧ 3ಕ್ಕೆ 287 ರನ್ ರಾಶಿ ಹಾಕಿ ತನ್ನದೇ ದಾಖಲೆ ಯನ್ನು ತಿದ್ದಿ ಬರೆದ ತಂಡವಿದು. ಆರ್‌ಸಿಬಿ ವಿರುದ್ಧ ರನ್ ಪ್ರವಾಹ ಹರಿಸಿದ ಬಳಿಕ ಹೈದರಾಬಾದ್ ಆಡು ತ್ತಿರುವ ಮೊದಲ ಪಂದ್ಯ ಇದಾಗಿದೆ.
ಟ್ರ್ಯಾವಿಸ್ ಹೆಡ್ ಆರ್‌ಸಿಬಿ ವಿರುದ್ಧ 39 ಎಸೆತಗಳಲ್ಲಿ ಶತಕ ಬಾರಿಸಿ ಇನ್ನಷ್ಟು ಅಪಾಯಕಾರಿಯಾಗಿ ಗೋಚರಿಸಿ ದ್ದಾರೆ. ಇವರ ಒಟ್ಟು ಗಳಿಕೆ 235 ರನ್. ಅಭಿಷೇಕ್ ಶರ್ಮ 211 ರನ್ ಬಾರಿಸಿ ಪ್ರಚಂಡ ಫಾರ್ಮ್ ತೆರೆದಿರಿಸಿದ್ದಾರೆ. ಇವ ರಿಬ್ಬರ ಸ್ಟ್ರೈಕ್‌ರೇಟ್ 199 ಹಾಗೂ 197 ಆಗಿರುವುದು ಡೆಲ್ಲಿಯ ತ್ರಿವಳಿ ವೇಗಿ ಗಳಾದ ಇಶಾಂತ್ ಶರ್ಮ, ಖಲೀಲ್ ಅಹ್ಮದ್, ಮುಕೇಶ್ ಕುಮಾರ್ ಪಾಲಿಗೆ ದೊಡ್ಡ ಸವಾ ಲಾಗಿ ಪರಿಣಮಿ ಸುವುದರಲ್ಲಿ ಅನುಮಾನವಿಲ್ಲ.
ಕೀಪರ್ ಹೆನ್ರಿಚ್ ಕ್ಲಾಸೆನ್ ಮತ್ತೋರ್ವ ಡೇಂಜರಸ್ ಬ್ಯಾಟರ್. ಇವರ ಸ್ಟ್ರೈಕ್‌ರೇಟ್ ಕೂಡ 199ರಷ್ಟಿದೆ. ಆದರೆ ಎಡಗೈ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ 6.06ರ ಅತ್ಯುತ್ತಮ ಇಕಾನಮಿ ರೇಟ್ ಹೊಂದಿರುವುದು ಡೆಲ್ಲಿ ಪಾಲಿನ ಆಶಾಕಿರಣವಾಗಿದೆ. ಟ್ರಿಸ್ಟನ್ ಸ್ಟಬ್ಸ್, ಅಕ್ಷರ್ ಪಟೇಲ್ ಕೂಡ ತವರಲ್ಲಿ ಮಿಂಚಬೇಕಾದ ಅಗತ್ಯವಿದೆ.
ಹೇಗಿದ್ದೀತು ಕೋಟ್ಲಾ ಪಿಚ್?
ಗಾಯಾಳು ಡೇವಿಡ್ ವಾರ್ನರ್ ಬದಲು ಆಡಲಿರುವ ಜೇಕ್ ಫ್ರೆàಸರ್ ಮೆಕ್‌ಗರ್ಕ್, ಪೃಥ್ವಿ ಶಾ, ರಿಷಭ್ ಪಂತ್, ಅಭಿಷೇಕ್ ಪೊರೆಲ್, ಶೈ ಹೋಪ್ ಅವರೆಲ್ಲ ಡೆಲ್ಲಿ ಬ್ಯಾಟಿಂಗ್ ಸರದಿಯ ಭರವಸೆಗಳು. ಎದುರಾಳಿ ಬ್ಯಾಟರ್ ಮುನ್ನುಗ್ಗಿ ಬಾರಿಸತೊಡಗಿದರೆ ಹೈದರಾಬಾದ್ ಬೌಲಿಂಗ್ ಕೂಡ ನೆಲಕಚ್ಚುತ್ತದೆ ಎಂಬುದಕ್ಕೆ ಆರ್‌ಸಿಬಿ ಪಂದ್ಯವೇ ಉತ್ತಮ ನಿದರ್ಶನ.
ಭುವನೇಶ್ವರ್ ಕುಮಾರ್ ಸೇರಿದಂತೆ ಹೈದರಾಬಾದ್‌ನ ಇಡೀ ಬ್ಯಾಟಿಂಗ್ ಯೂನಿಟ್ ಆರ್‌ಸಿಬಿ ವಿರುದ್ಧ ದಂಡಿಸಿ ಕೊಂಡಿ ದ್ದನ್ನು ಮರೆಯುವಂತಿಲ್ಲ. ಪ್ಯಾಟ್ ಕಮಿನ್ಸ್ ಕೂಡ ಓವರಿಗೆ ಹತ್ತಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಯಾವುದಕ್ಕೂ ಕೋಟ್ಲಾ ಪಿಚ್ ಹೇಗೆ ವರ್ತಿಸೀತು ಎಂಬುದೊಂದು ಕುತೂಹಲ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.