Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
Team Udayavani, Apr 20, 2024, 2:41 PM IST
ಬಾಲ್ಯದಲ್ಲಿ ನಡೆದ ಘಟನೆಯಿಂದ ಮಾನಸಿಕವಾಗಿ ತೊಂದರೆಗೀಡಾಗಿರುವ ನಾಯಕಿ. ಆಕೆಯನ್ನು ಆ ಕಾಯಿಲೆಯಿಂದ ಆಕೆಗೆ ಗೊತ್ತಿಲ್ಲದಂತೆ ಹೊರ ತರಲು ಮುಂದಾಗುವ ನಾಯಕ. ಅದಕ್ಕಾಗಿ ಒಂದು ಉಪಾಯ ಮಾಡುವ ನಾಯಕ. ಇದಕ್ಕೆ ಸಾಥ್ ನೀಡುವ ನಾಯಕನ ಫ್ರೆಂಡ್ಸ್… ಇದು ಈ ವಾರ ತೆರೆಗೆ ಬಂದಿರುವ “ನಾಲ್ಕನೇ ಆಯಾಮ’ ಸಿನಿಮಾದ ಒನ್‌ಲೈನ್.
ನಾಲ್ಕನೇ ಆಯಾಮ ಒಂದು ಯೂತ್‌ಫುಲ್ ಕಥೆ. ಹೆಚ್ಚು ಪಾತ್ರಗಳಿಲ್ಲದೇ ಐದಾರು ಪಾತ್ರಗಳ ಸುತ್ತವೇ ಇಡೀ ಸಿನಿಮಾ ಸಾಗುತ್ತದೆ. ಆರಂಭದಲ್ಲಿ ಲವ್‌ಸ್ಟೋರಿಯಾಗಿ ಶುರುವಾಗುವ ಈ ಚಿತ್ರ ನೋಡ ನೋಡುತ್ತಿದ್ದಂತೆ ಹಾರರ್‌ನತ್ತ ಮಗ್ಗುಲು ಬದಲಿಸುತ್ತದೆ. ಅಲ್ಲಿಂದ ಅಸಲಿ ಆಟ ಶುರು.
ಕಥೆಗೆ ಟ್ವಿಸ್ಟ್ ಕೊಡುವ ಹಾರರ್ ಸನ್ನಿವೇಶದಲ್ಲಿ ಪ್ರೇಕ್ಷಕರಿಗೊಂದು ಟ್ವಿಸ್ಟ್ ನೀಡಿದ್ದಾರೆ ನಿರ್ದೇಶಕರು. ಹಾರರ್ ಸಿನಿಮಾದಲ್ಲಿ ಭಯಬೀಳಿಸಲು ಬಳಸುವ ಎಲ್ಲಾ ತಂತ್ರಗಳನ್ನು ಬಳಸಿಕೊಂಡೇ ಈ ಸಿನಿಮಾದ ಕಥೆ ಸಾಗುತ್ತದೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ಮಾತ್ರ ಭಿನ್ನವಾಗಿದೆ.
ನಿರ್ದೇಶಕರಿಗೆ ಸಿನಿಮಾದ ಬಗ್ಗೆ ಒಂದು ಸ್ಪಷ್ಟತೆ ಇದೆ. ಹಾಗಾಗಿಯೇ ಸಿನಿಮಾ ಸರಾಗವಾಗಿ ಸಾಗುತ್ತದೆ. ಹೀರೋ ಬಿಲ್ಡಪ್, ವಿಲನ್‌ಗಳ ಅಬ್ಬರ, ಪಂಚಿಂಗ್ ಡೈಲಾಗ್‌ಗಳ ಶಿಳ್ಳೆಯಿಂದ ಈ ಸಿನಿಮಾ ಮುಕ್ತ. ಕಥೆಯನ್ನು ಟ್ರ್ಯಾಕ್‌ಗೆ ತರಲು ಹೆಚ್ಚು ಸಮಯ ತೆಗೆದುಕೊಳ್ಳದಿರುವುದರಿಂದ ಸಿನಿಮಾ ಅನವಶ್ಯಕ ದೃಶ್ಯಗಳಿಂದ ಮುಕ್ತವಾಗಿದೆ.
ಗೌತಮ್ ಈ ಚಿತ್ರದಲ್ಲಿ ನಾಯಕನ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಎರಡನ್ನೂ ತೂಗಿಸಿಕೊಂಡು ಹೋಗಿದ್ದಾರೆ. ಉಳಿದಂತೆ ರಚನಾ ಇಂದರ್, ಅಮಿತ್ ಗೌಡ ಯಶಸ್ವಿನಿ ಎಂ, ಬಲ ರಾಜವಾಡಿ, ವಿನ್ಸೆಂಟ್, ಮಂಜು ಸ್ವಾಮಿ, ಚಂದ್ರಕಲಾ ಮೋಹನ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.