T20 ವಿಶ್ವಕಪ್ಗೆ ದಿನೇಶ್ ಕಾರ್ತಿಕ್ ರೆಡಿ!; ವಯಸ್ಸು 39 ವರ್ಷ!
Team Udayavani, Apr 21, 2024, 6:40 AM IST
ಕೋಲ್ಕತಾ: ತಾನು ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಹಂಡ್ರೆಡ್ ಪರ್ಸೆಂಟ್ ಸಜ್ಜಾಗಿದ್ದೇನೆ ಎಂಬುದಾಗಿ ಆರ್ಸಿಬಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ದಿನೇಶ್ ಕಾರ್ತಿಕ್ ಮತ್ತೆ ಸುದ್ದಿಯ ಕೇಂದ್ರವಾಗಿದ್ದಾರೆ. ಇದರಿಂದ ಅವರು ಮುಂದಿನ ಟಿ20 ವಿಶ್ವಕಪ್ ಆಡಿದರೂ ಅಚ್ಚರಿ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಇದೀಗ ಸ್ವತಃ ಕಾರ್ತಿಕ್ ಅವರೇ ಮರಳಿ ಟೀಮ್ ಇಂಡಿಯಾ ಪರ ಆಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಪಾಲಿನ ಹೆಮ್ಮೆ
“ಬದುಕಿನ ಇಂಥದೊಂದು ಕಾಲಘಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ಖಂಡಿತವಾಗಿಯೂ ನನ್ನ ಪಾಲಿನ ಹೆಮ್ಮೆ ಎನಿಸಲಿದೆ. ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಆಡುವುದಕ್ಕಿಂತ ಮಿಗಿಲಾದ ಸಂಗತಿ ನನ್ನ ಬದುಕಿನಲ್ಲಿಲ್ಲ. ಇದಕ್ಕೆ ನಾನು ಹಂಡ್ರೆಡ್ ಪರ್ಸೆಂಟ್ ಸಜ್ಜಾಗಿದ್ದೇನೆ’ ಎಂಬುದಾಗಿ ಕಾರ್ತಿಕ್ ಹೇಳಿದ್ದಾರೆ.
ವಯಸ್ಸು 39 ವರ್ಷ!
ಜೂ. 1ರಂದು ಟಿ20 ವಿಶ್ವಕಪ್ ಆರಂಭವಾಗಲಿದ್ದು, ಆಗ ದಿನೇಶ್ ಕಾರ್ತಿಕ್ಗೆ 39 ವರ್ಷವಾಗುತ್ತದೆ. ಕಳೆದ ಟಿ20 ವಿಶ್ವಕಪ್ ಆಡಿದ ಬಳಿಕ ಅವರು ಮತ್ತೆಂದೂ ಟೀಮ್ ಇಂಡಿಯಾದಲ್ಲಿ ಕಾಣಿಸಿರಲಿಲ್ಲ. ಇದೀಗ ಐಪಿಎಲ್ನಲ್ಲಿ ಆರ್ಸಿಬಿ ಪರ ಬಿರುಸಿನ ಆಟವಾಡುತ್ತಿದ್ದು, ತಂಡದ 3ನೇ ಅತ್ಯಧಿಕ ಸ್ಕೋರರ್ ಆಗಿದ್ದಾರೆ. ಸ್ಟ್ರೆಕ್ರೇಟ್ 205ರಷ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.