Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ


Team Udayavani, Apr 21, 2024, 1:00 PM IST

6-uv-fusion

ಬಿಸಿಲ ಬೇಗೆಗೆ ಪರಿಸರವೆಲ್ಲಾ ನಾಶವಾಗುತ್ತಿದ್ದು, ನೀರಿಗೂ ಪರದಾಡುವಂತಹ ಸ್ಥಿತಿ ನಮ್ಮದಾಗಿದೆ. ಮುಂಚಿತವಾಗಿಯೇ ನಮ್ಮ ಜವಾಬ್ದಾರಿಯಲ್ಲಿ ನಾವಿದ್ದು, ನೀರನ್ನು ಸಂರಕ್ಷಿಸಿ ಇಡುತ್ತಿದ್ದರೆ ನಾವಿಂದು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಬಿಸಿಲಿನ ತಾಪವು ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದರೂ, ನಾವು ಅದರ ಬಗೆಗೆ ಗಮನ ಹರಿಸಲಿಲ್ಲ. ಅದೇ ಕಾರಣಕ್ಕಾಗಿ ನಾವು ಒಂದು ಹನಿ ನೀರಿಗಾಗಿ ಕಷ್ಟ ಪಡುತ್ತಿರುವುದು.

ಈ ಬಿಸಿಲಿನ ಸಮಸ್ಯೆಯಿಂದ ಅದೆಷ್ಟೋ ಪ್ರಾಣಿ ಪಕ್ಷಿಗಳು ಸಾಯುವ ಸ್ಥಿತಿಗೆ ಬಂದು ತಲುಪಿವೆ. ಬೀದಿ ಬದಿಯಲ್ಲಿರುವ ಪ್ರಾಣಿಗಳೆಲ್ಲಾ ನೀರಿಗಾಗಿ ಚರಂಡಿ ಬದಿಯಲ್ಲಿ ತನ್ನ ದಾಹವನ್ನು ತೀರಿಸುವಂತಾಗಿದೆ. ಈ ಬಿಸಿಲಿನಿಂದ ಕೆರೆ, ನದಿಗಳೆಲ್ಲಾ ಬತ್ತಿ ಹೋಗಿದೆ. ಬಿಸಿಲಿನ ತಾಪದಿಂದ ಆರೋಗ್ಯದಲ್ಲಿ ಏರುಪೇರು ಆಗುವುದನ್ನು ನೋಡಬಹುದು.

ಬಿಸಿಲು ಎಂದ ಮೇಲೆ ತಾಪಗಳೆಲ್ಲಾ ಇದ್ದೇ ಇರುತ್ತದೆ. ಆದರೆ ಇದರಿಂದ ಶೆಕೆಯು ಹೆಚ್ಚಾಗಿದ್ದು, ಮನೆಯೊಳಗೂ ಇರಲು ಸಾಧ್ಯವಾಗುತ್ತಿಲ್ಲ. ಬಿಸಿಲಿನ ತಾಪಕ್ಕೆ ಮನುಷ್ಯರು ಮಾತ್ರ ಅಲ್ಲ, ಬದಲಿಗೆ ಪ್ರಾಣಿ ಪಕ್ಷಿಗಳು ಕಂಗಾಲಾಗಿವೆ. ಮನುಷ್ಯರು ನೀರಿಲ್ಲದೆ ಯಾವ ರೀತಿ ಕಷ್ಟಪಡುತ್ತಾರೋ, ಹಾಗೆಯೇ ಪ್ರಾಣಿ ಪಕ್ಷಿಗಳು ಕೂಡ ಕಷ್ಟಪಡುತ್ತಿವೆ.

ಆದರೆ ಮನುಷ್ಯರಿಗೆ ತಮ್ಮ ಕಷ್ಟಗಳು ಮಾತ್ರ ತಿಳಿಯುವುದೇ ಹೊರತು ಬೇರೆಯವರ ಕಷ್ಟಗಳು ತಿಳಿಯುವುದಿಲ್ಲ. ನಮ್ಮಂತೆಯೇ ಅವುಗಳಿಗೂ ಜೀವ ಇದೆ ಅಲ್ವಾ. ಅವುಗಳಿಗೂ ಬದುಕಬೇಕೆಂಬ ಆಸೆ ಇರುವುದಿಲ್ಲವೇ. ಅವುಗಳೇ ನಮ್ಮ ಹತ್ತಿರ ಆಹಾರಕ್ಕೋ ಅಥವಾ ನೀರಿಗಾಗಿಯೋ ಬರುವಾಗ ನಮ್ಮಿಂದಾಗುವ ಸಹಾಯವನ್ನು ಮಾಡಬೇಕು. ಅವುಗಳಿಗೂ ಬದುಕಲು ಅವಕಾಶ ಮಾಡಿಕೊಡಬೇಕು.

ಬೇಸಗೆ ಸಮಯದಲ್ಲಿ ಮನೆಗಳ ಕಾಂಪೌಂಡ್‌, ರಸ್ತೆ ಬದಿ, ಟೆರೇಸ್‌ಗಳಲ್ಲಿ ನೀರು ಮತ್ತು ಆಹಾರವನ್ನು ಇಟ್ಟು, ಎರಡು ದಿನಗಳಿಗೊಮ್ಮೆ ಬದಲಾಯಿಸುತ್ತಿರಬೇಕು. ಮರದ ಕೆಳಗೆ ನೀರನ್ನು ಇಡುವುದರಿಂದ ಪಕ್ಷಿಗಳು ದಿನಾಲು ನೀರಿಗಾಗಿ ಬರುತ್ತವೆ.

ಅವುಗಳ ಜೀವವನ್ನು ಉಳಿಸಲು ಸಹಾಯಕವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತ ಇರುವ ಪ್ರಾಣಿ ಪಕ್ಷಿಗಳಿಗೆ ಸ್ವಲ್ಪ ನೀರು ಮತ್ತು ಆಹಾರವನ್ನು ಇಟ್ಟು ಪ್ರಾಣಿ ಪಕ್ಷಿಗಳನ್ನು ಉಳಿಸಬೇಕು. ತಮ್ಮ ತಮ್ಮ ಮನೆಯ ಮುಂದೆ ಅಥವಾ ಅಂಗಡಿ ಮುಂದೆ ಒಂದು ಸಣ್ಣ ತೊಟ್ಟಿ ಮಾಡಿ ಅದರಲ್ಲಿ ನೀರನ್ನು ತುಂಬಿಸಿಡಬೇಕು. ಆಗ ಬೀದಿ ನಾಯಿಗಳು, ದನಗಳು, ಪಕ್ಷಿಗಳು ಎಲ್ಲ ನೀರಿಗಾಗಿ ಬರುತ್ತವೆ. ನಮ್ಮಿಂದಾಗುವ ಎಲ್ಲ ಸಹಾಯವನ್ನು ಮಾಡಿ ಕಂಗಾಲಾಗಿರುವ ಜೀವ ಸಂಕುಲಗಳನ್ನು ಸಂರಕ್ಷಿಸಬೇಕು.

-ಧನ್ಯಶ್ರೀ

ವಿವೇಕಾನಂದ ಸ್ವಾಯತ್ತ, ಕಾಲೇಜು ಪುತ್ತೂರು

ಟಾಪ್ ನ್ಯೂಸ್

1-wewewq

Telangana;ಶಿಕ್ಷಕನ ವರ್ಗಾವಣೆ: ಹೊಸ ಶಾಲೆ ಸೇರಿದ 133 ಮಕ್ಕಳು!

GAS (2)

LPG ಸಿಲಿಂಡರ್‌ಗೂ ಶೀಘ್ರ ಕ್ಯುಆರ್‌ ಕೋಡ್‌!

Amit Shah

Amarnath Yatra ಬಳಿಕ ಕಾಶ್ಮೀರ ವಿಧಾನಸಭೆ ಚುನಾವಣೆ ಸಾಧ್ಯತೆ

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

rajnath 2

India ರಕ್ಷಣ ಕ್ಷೇತ್ರದಲ್ಲಿ 1.27 ಲಕ್ಷ ಕೋಟಿ ಉತ್ಪಾದನೆ!

Vidhana-Soudha

State Government ವ್ಯಾಜ್ಯಮುಕ್ತ ಗ್ರಾಮ: ಸರಕಾರದ ವಿನೂತನ ಚಿಂತನೆ

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-father

Father: ಅಪ್ಪನ ನೀತಿ ನಮ್ಮ ಬದುಕಿನ ರೀತಿ

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

15-

Father: ಅಪ್ಪನೆಂಬ ಆಕಾಶ

13-uv-fusion

Terrace Garden: ಮನೆಗೊಂದು ತಾರಸಿ ತೋಟ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

1-wewewq

Telangana;ಶಿಕ್ಷಕನ ವರ್ಗಾವಣೆ: ಹೊಸ ಶಾಲೆ ಸೇರಿದ 133 ಮಕ್ಕಳು!

GAS (2)

LPG ಸಿಲಿಂಡರ್‌ಗೂ ಶೀಘ್ರ ಕ್ಯುಆರ್‌ ಕೋಡ್‌!

Amit Shah

Amarnath Yatra ಬಳಿಕ ಕಾಶ್ಮೀರ ವಿಧಾನಸಭೆ ಚುನಾವಣೆ ಸಾಧ್ಯತೆ

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

rajnath 2

India ರಕ್ಷಣ ಕ್ಷೇತ್ರದಲ್ಲಿ 1.27 ಲಕ್ಷ ಕೋಟಿ ಉತ್ಪಾದನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.