Bulldozer;ಅತ್ಯಾಚಾರ ಎಸಗಿ ಚಿತ್ರ ಹಿಂಸೆ ನೀಡಿದವನ ಮನೆ ಬುಲ್ಡೋಜರ್ ಬಳಸಿ ಧ್ವಂಸ
ಮಧ್ಯ ಪ್ರದೇಶ ಪೊಲೀಸರ ಕಠಿನ ಕ್ರಮ
Team Udayavani, Apr 21, 2024, 3:23 PM IST
ಗುನಾ(ಮಧ್ಯಪ್ರದೇಶ): ಮಹಿಳೆಯೊಬ್ಬರ ಮೇಲೆ ಒಂದು ತಿಂಗಳ ಕಾಲ ಅತ್ಯಾಚಾರ ನಡೆಸಿ ಚಿತ್ರಹಿಂಸೆ ನೀಡಿದ ಆರೋಪಿಯು ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಅಧಿಕಾರಿಗಳು ಭಾನುವಾರ ನೆಲಸಮಗೊಳಿಸಿದ್ದಾರೆ.
ಅಯಾನ್ ಪಠಾಣ್ ಎಂಬಾತ ತನ್ನ ನೆರೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಯುವತಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಒಂದು ತಿಂಗಳ ಕಾಲ ಚಿತ್ರಹಿಂಸೆ ನೀಡಿದ್ದ. ಇವರಿಬ್ಬರು ಕೆಲ ದಿನಗಳಿಂದ ಸಂಬಂಧವನ್ನೂ ಹೊಂದಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಅಯಾನ್, ಮಹಿಳೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. ಆಕೆ ಆಸ್ತಿಯನ್ನು ಹಸ್ತಾಂತರಿಸಲು ನಿರಾಕರಿಸಿದಾಗ, ಯುವತಿಯನ್ನು ಹೊಡೆದು ಕಣ್ಣು ಮತ್ತು ಬಾಯಿಗೆ ಮೆಣಸಿನ ಪುಡಿಯನ್ನು ಎರಚಿ ಹಿಂಸೆ ನೀಡಿದ್ದಾನೆ.
ಈತ ತನ್ನ ಸಂಬಂಧಿಕರ ನೆರವಿನಿಂದ ಮಹಿಳೆಗೆ ಹಲವು ಬಾರಿ ದೈಹಿಕ ಹಿಂಸೆ ನೀಡಿದ್ದ.ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ದಾಖಲಿಸಿದ ನಂತರ ಅಯಾನ್‌ನನ್ನು ಬಂಧಿಸಲಾಗಿದೆ.
ನಕಲಿ ದಾಖಲೆಗಳನ್ನು ಬಳಸಿ ಸರಕಾರಿ ಜಮೀನಿನಲ್ಲಿ ಅಯಾನ್ ನ ಮನೆಯನ್ನು ನಿರ್ಮಿಸಿದ್ದ ಎಂದು ಅಧಿಕಾರಿಗಳು ಕಂಡುಕೊಂಡ ಬಳಿಕ ಅದನ್ನು ಕೆಡವಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.