ಶಂಕಿತ ಮೆದುಳು ಜ್ವರಕ್ಕೆ ಶ್ವಾನಗಳು ಬಲಿ!ಮಾರ್ಚ್‌ನಲ್ಲಿ 604ಕ್ಕೂ ಅಧಿಕ ಶಂಕಿತ ಪ್ರಕರಣ ದಾಖಲು
Team Udayavani, Apr 22, 2024, 7:45 AM IST
ಸುಳ್ಯ: ಬೇಸಗೆಯ ಬಿಸಿಲ ಬೇಗೆಯ ನಡುವೆ ಕೆಲವೆಡೆ ಶಂಕಿತ ಮೆದುಳು ಜ್ವರಕ್ಕೆ ಶ್ವಾನಗಳು ಸಾಯುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ. ಮೆದುಳು ಜ್ವರ ನಾಯಿಗಳಲ್ಲಿ ಕಂಡು ಬರುವ ಸಾಮಾನ್ಯ ರೋಗವಾಗಿದ್ದು, ನಿಯಂತ್ರಣ ಸಾಧ್ಯವಿದ್ದರೂ ಇದು ಮಾರಕ ರೋಗವೂ ಹೌದು. ಆದರೆ ಇದು ಮನುಷ್ಯರಿಗೆ ಹರಡುವುದಿಲ್ಲ.
ಹೆಚ್ಚಾಗಿ ನಾಯಿಗಳು ಮರಿ ಹಾಕುವ ಸಮಯದಲ್ಲಿ ಇದು ಕಂಡುಬರುತ್ತವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ವರ್ಷದ ಯಾವ ಸಮಯದಲ್ಲಿಯೂ ಈ ರೋಗ ನಾಯಿಗಳಿಗೆ ತಗಲಬಹುದು. ಪ್ರಾರಂಭದಲ್ಲಿ ಆ್ಯಂಟಿ ಬಯೋಟಿಕ್ ಚಿಕಿತ್ಸೆ ಮೂಲಕ ರೋಗ ಬಾರದಂತೆ ತಡೆಯಬಹುದಾಗಿದೆ. ವಾಂತಿ, ಭೇದಿ ಆರಂಭವಾದಲ್ಲಿ ನಾಯಿಗಳು ಬೇಗನೆ ಸಾವಿಗೀಡಾಗುತ್ತವೆ. ರೋಗ ಬಾರದಂತೆ ಆರಂಭದಲ್ಲಿ ಇಂತಿಷ್ಟು ದಿನಗಳ ಬಳಿಕ ಹಾಗೂ ದಿನಗಳ ಅಂತರದಲ್ಲಿ ಲಸಿಕೆ ನೀಡಿದಲ್ಲಿ ರೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು.
ಲಕ್ಷಣಗಳು: ಮೆದುಳು ಜ್ವರ ಪೀಡಿತ ನಾಯಿ ವಿಪರೀತ ಜ್ವರಕ್ಕೆ ಈಡಾಗುತ್ತದೆ. ತಲೆ ಮೇಲೆತ್ತಲು ಆಗದ ಸ್ಥಿತಿಗೆ ತಲುಪುತ್ತವೆ. ಆಹಾರ ಸೇವನೆಯನ್ನು ತ್ಯಜಿಸಿ ಆರೋಗ್ಯದಲ್ಲಿ ಕ್ಷೀಣಿವಾಗುತ್ತದೆ. ವಾಂತಿ ಭೇದಿ, ನರ ದೌರ್ಬಲ್ಯ, ಕಣ್ಣಿನ ಪೊರೆ ಸಮಸ್ಯೆಗಳು ಕಂಡುಬರುತ್ತವೆ. ರೋಗ ಪೀಡಿತ ನಾಯಿ ಆಹಾರ ಸೇವನೆ ಕಡಿಮೆ ಮಾಡಿ ಕೊನೆಗೆ ನೀರನ್ನು ಮಾತ್ರ ಸೇವಿಸುತ್ತದೆ. ಬಳಿಕ ಆಹಾರವನ್ನೂ ತ್ಯಜಿಸುತ್ತದೆ. ಮೆದುಳು ಜ್ವರ ಎಂಬುದು ನಾಯಿಗಳಿಂದ ನಾಯಿಗಳಿಗೆ ಹರಡುತ್ತದೆ. ಮನುಷ್ಯರಿಗೆ ಹರಡುವುದಿಲ್ಲ, ಇದು ರೇಬಿಸ್ ರೋಗವೂ ಅಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಏರಿಕೆಯತ್ತ ಶಂಕಿತ ಪ್ರಕರಣಗಳು
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಪಶುಪಾಲನ ಇಲಾಖೆಯ ಆಸ್ಪತ್ರೆಗಳಲ್ಲಿ ದಾಖಲಾದ ಶಂಕಿತ ಮೆದುಳು ಜ್ವರ (ಕೆನೈನ್ ಡಿಸ್ಟೆಂಪರ್) ಕೆಲ ತಿಂಗಳಿಂದ ಏರಿಕೆಯಾಗುತ್ತಿದೆ. ಪಶುಪಾಲನ ಆಸ್ಪತ್ರೆಗಳಲ್ಲಿ ದಾಖಲಿ ಸಿಲಾದ/ಹಾಜರುಪಡಿ ಸಲಾದ ನಾಯಿಗಳಲ್ಲಿ ತಪಾಸಣೆ ವೇಳೆ ಶಂಕಿತ ಮೆದುಳು ಜ್ವರ ಕಂಡುಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಲ್ಲಿ 433, ಫೆಬ್ರವರಿಯಲ್ಲಿ 582 ಹಾಗೂ ಮಾರ್ಚ್‌ನಲ್ಲಿ 604 (ಮಂಗಳೂರು-128, ಬಂಟ್ವಾಳ-138, ಬೆಳ್ತಂಗಡಿ-66, ಪುತ್ತೂರು-46, ಸುಳ್ಯ-146, ಮೂಡುಬಿದಿರೆ-30, ಕಡಬ-10 ಉಳ್ಳಾಲ-17, ಮುಲ್ಕಿ 24) ಶಂಕಿತ ಪ್ರಕರಣಗಳು ದಾಖಲಾಗಿವೆ. ಸುಳ್ಯ, ಬಂಟ್ವಾಳ, ಮಂಗಳೂರಿನಲ್ಲಿ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಖಾಸಗಿ ಕ್ಲಿನಿಕ್, ಮೆಡಿಕಲ್ ಹಾಗೂ ಬೀದಿ ನಾಯಿಗಳಲ್ಲಿ ಈ ರೋಗಕ್ಕೆ ಔಷಧಿ ಪಡೆದಿರುತ್ತಾರೆ. ಈ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಇಲ್ಲ. ಆದ್ದರಿಂದ ಇನ್ನೂ ಅಧಿಕ ಪ್ರಕರಣಗಳು ಪತ್ತೆಯಾಗಿರುವ ಶಂಕೆ ಇದ್ದು, ಹಲವು ನಾಯಿಗಳು ರೋಗದಿಂದ ಸಾವನ್ನಪ್ಪಿರುವ ಘಟನೆಯು ನಡೆದಿವೆ.
ಈ ರೋಗವನ್ನು ನಿಯಂತ್ರಿಸಲು ಸಾಧ್ಯವಿದ್ದು, ರೋಗದ ಲಕ್ಷಣಗಳು ಕಂಡುಬಂದ ಆರಂಭದಿಂದಲೇ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗಕ್ಕೆ ಸಂಬಂಧಿಸಿದ ಲಸಿಕೆ ಹಾಕಿಸುವ ಮೂಲಕ ರೋಗ (ಮೆದುಳು ಜ್ವರ) ನಿಯಂತ್ರಿಸಬಹುದು. ನಾಯಿ ಜಾನುವಾರು ಗುಂಪಿಗೆ ಸೇರದೆ ಇರುವುದರಿಂದ ಮೆದುಳು ಜ್ವರಕ್ಕೆ ಪಶು ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಸಿಗುವುದಿಲ್ಲ. ಖಾಸಗಿ ಮೆಡಿಕಲ್‌ಗಳಲ್ಲಿ ಲಸಿಕೆ ಲಭ್ಯವಿರುತ್ತದೆ. ರೋಗ ಬಾ ಧಿತ ನಾಯಿಯಿಂದ ಇನ್ನೊಂದು ನಾಯಿಗೆ ಹರಡುವ ಸಾಧ್ಯತೆ ಇರುವುದರಿಂದ ಆ ರೀತಿ ಹರಡದಂತೆ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ತಜ್ಞರು ತಿಳಿಸಿದ್ದಾರೆ.
ನಾಯಿಗಳಲ್ಲಿ ಮೆದುಳು ಜ್ವರ ಎಂಬುದು ಸಾಮಾನ್ಯವಾಗಿ ಕಂಡುಬರುವ ರೋಗ. ಜಿಲ್ಲೆಯಲ್ಲೂ ನಾಯಿಗಳಲ್ಲಿ ಶಂಕಿತ ಮೆದುಳು ಜ್ವರ ಪ್ರಕರಣಗಳು ಪತ್ತೆಯಾಗಿವೆ. ಇದರ ನಿಯಂತ್ರಣ ಸಾಧ್ಯವಿದ್ದು, ಸ್ಥಳೀಯ ಪಶುಪಾಲನ ಇಲಾಖೆ ವೈದ್ಯರಲ್ಲಿ ಮಾಹಿತಿ ಪಡೆಯಬಹುದು.
– ಡಾ| ಅರುಣ್ ಕುಮಾರ್ ಶೆಟ್ಟಿ, ಉಪನಿರ್ದೇಶಕರು
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು, ದ.ಕ.
– ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.