ಬಗೆಹರಿಯದ ಸಮಸ್ಯೆ; ಉಕ್ಕಿ ಹರಿಯುವ ಮ್ಯಾನ್‌ಹೋಲ್!
Team Udayavani, Apr 22, 2024, 5:45 PM IST
ಮಹಾನಗರ: ನಗರದಲ್ಲಿ ಒಳಚರಂಡಿಯ ಜಾಲಕ್ಕೆ ಮನೆ – ವಸತಿ ಸಮುಚ್ಚಯ, ವಾಣಿಜ್ಯ ಕಟ್ಟಡಗಳ ಮಳೆ ನೀರಿನ ಸಂಪರ್ಕವನ್ನು ಅನಧಿಕೃತವಾಗಿ ನೀಡುತ್ತಿರುವುದು ಮತ್ತೆ ಮತ್ತೆ ಗಮನಕ್ಕೆ ಬರುತ್ತಿದ್ದು, ಸಣ್ಣ ಮಳೆಯಾದರೂ ನಗರದ ವಿವಿಧಡೆ ಮ್ಯಾನ್ ಹೋಲ್‌ಗಳಿಂದ ತ್ಯಾಜ್ಯ ನೀರು ಹೊರಬರುವುದು ಕಂಡು ಬರುತ್ತದೆ.
ಶನಿವಾರ ಮುಂಜಾನೆ ವೇಳೆ ಸುರಿದ ಮಳೆಗೂ ನಗರದ ವಿವಿಧಡೆ ಒಳಚರಂಡಿ ಮ್ಯಾನ್‌ಹೋಲ್‌ಗಳಿಂದ ನೀರು ಹರಿದು ಹೋಗಿದೆ. ಮುಂದಿನ ದಿನಗಳಲ್ಲಿ ಮಳೆ ನಿರಂತರವಾಗಿ ಸುರಿಯಲು ಆರಂಭವಾದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಒಳಚರಂಡಿಗೆ ನೀರು ಹರಿಯುವ ಪೈಪ್‌ಲೈನ್‌ಗೆ ಮಳೆ ನೀರಿನ ಸಂಪರ್ಕ ನೀಡುವುದರಿಂದ ಮಳೆಗಾಲದಲ್ಲಿ ಹಲವೆಡೆ ಮ್ಯಾನ್‌ಹೋಲ್ ಸಮಸ್ಯೆ ಎದುರಾಗುತ್ತದೆ.
ಪ್ರತೀ ವರ್ಷ ಈ ಸಮಸ್ಯೆಗೆ ಸಂಬಂಧಿಸಿದಂತೆ ಪಾಲಿಕೆ ವತಿಯಿಂದ ಸಾರ್ವ ಜನಿಕರು, ಕಟ್ಟಡ ಮಾಲಕರಿಗೆ ಎಚ್ಚರಿಕೆ ನೀಡಲಾಗುತ್ತದೆಯಾದರೂ, ಸಮಸ್ಯೆ ಮಾತ್ರ ಪರಿಹಾರ ಕಾಣಿಸುತ್ತಿಲ್ಲ. ಹೀಗಾಗಿ ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುವ ಪ್ರಸಂಗ ಸೃಷ್ಟಿಯಾಗುತ್ತಲೇ ಇರುತ್ತದೆ.
ನಗರದ ಕೆಲವು ಭಾಗದ ಕಟ್ಟಡದವರಿಗೆ ಮಳೆ ನೀರು ಸರಾಗ ಹರಿಯುವಿಕೆಗೆ ಬೇಕಾದ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಅಂತಹವರು ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಸಂಪರ್ಕ ನೀಡಿರುತ್ತಾರೆ. ಪರಿಣಾಮವಾಗಿ ಮಳೆ ನೀರು, ಒಳಚರಂಡಿ ನೀರು ಜತೆಯಾಗಿ ಹರಿದು ಒತ್ತಡ ತಡೆದುಕೊಳ್ಳಲು ಸಾಧ್ಯವಾಗದೆ ಅಲ್ಲಲ್ಲಿ ಇರುವ ಮ್ಯಾನ್‌ಹೋಲ್‌ಗಳು ಬಾಯೆ¤ರೆದು ಕೊಳಚೆ ನೀರು ಹೊರಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಪರಿಸರವೆಲ್ಲ ಗಲೀಜಾಗಿ ಅಸಹ್ಯ ವಾತಾವರಣ ನಿರ್ಮಾಣವಾಗುತ್ತದೆ. ಆದ್ದರಿಂದ ಈಗಿನಿಂದಲೇ ಇದರ ಕಾರ್ಯಾಚರಣೆ ಆರಂಭಿಸಿದರೆ ಮಳೆಗಾಲದಲ್ಲಿ ಮ್ಯಾನ್ ಹೋಲ್ ಸಮಸ್ಯೆ ಹೆಚ್ಚಾಗಿ ಕಾಣಿಸದು. ಅಪಾಯಕಾರಿ ನಗರದ ಅನೇಕ ಕಡೆಗಳಲ್ಲಿನ ಅರೆಬರೆ ಕಾಮಗಾರಿ ಯಿಂದಾಗಿ ಮ್ಯಾನ್ ಹೋಲ್‌ಗಳು ಅಪಾಯದ ಸ್ಥಿತಿಯಲ್ಲಿದೆ.
ಸಾಮಾನ್ಯವಾಗಿ ಮ್ಯಾನ್‌ಹೋಲ್‌ಗಳು ರಸ್ತೆಗೆ ಸಮನಾಂತರವಾಗಿ ಇರಬೇಕು. ನಗರದಲ್ಲಿನ ಅನೇಕ ಮ್ಯಾನ್ ಹೋಲ್‌ಗಳು ಸುಮಾರು 50 ವರ್ಷ ಹಳೆಯದಾಗಿದ್ದು, ಅವುಗಳ ಪೈಕಿ ರಸ್ತೆಗಳ ಮೇಲಿರುವ ಹಲವು ಮ್ಯಾನ್‌ಹೋಲ್ ಗಳು ಕೆಳಕ್ಕೆ ಕುಸಿದುಕೊಂಡು ಅಪಾಯದ ಸ್ಥಿತಿಯಲ್ಲಿವೆ. ಇದರ ಮೂಲಕವೂ ಮಳೆ ಬಂದಾಗ ನೀರು ಚರಂಡಿ ಬದಲಿಗೆ ಈ ಮ್ಯಾನ್‌ಹೋಲ್‌ಗೆ ನುಗ್ಗಿ ಪಕ್ಕದ ಮ್ಯಾನ್ ಹೋಲ್ ಮೂಲಕ ಹೊರಗಡೆ ಬಂದು ಸಮಸ್ಯೆಗೆ ಕಾರಣವಾಗುತ್ತಿದೆ.
25 ಸಾವಿರಕ್ಕೂ ಅಧಿಕ ಮ್ಯಾನ್‌ಹೋಲ್ ಪಾಲಿಕೆಯ ಒಳಚರಂಡಿ ಮೂಲ ಯೋಜನೆಯು 1957ರ ನಿರ್ದೇಶನದಂತೆ
ಕಾಮಗಾರಿಯನ್ನು 1970-71ರಲ್ಲಿ ಪೂರ್ಣಗೊಳಿಸಲಾಗಿತ್ತು. ಅಂದಿನ ಜನಸಂಖ್ಯೆ 1,80,000ಕ್ಕೆ ತಯಾರಿಸಿ ಅಂದಾಜಿತ 2 ಲಕ್ಷ ಜನಸಂಖ್ಯೆಗೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಆ ಕಾಲದಲ್ಲಿ 6,000 ಮ್ಯಾನ್‌ಹೋಲ್ ಮಾಡಲಾಗಿತ್ತು.ಆ ನಂತರ 2006ರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡ ಎಡಿಬಿ ಯೋಜನೆಯಡಿ ಒಟ್ಟು 14,365 ಮ್ಯಾನ್ ಹೋಲ್ ಮಾಡಲಾಗಿದೆ. ಆ ಬಳಿಕ ಅಗತ್ಯ ವಿರುವ ಕಾರಣದಿಂದ ಹೆಚ್ಚುವರಿಯಾಗಿ ಪಾಲಿಕೆಯು 5,000ರಷ್ಟು ಮ್ಯಾನ್‌ಹೋಲ್ ಗಳನ್ನು ನಿರ್ಮಿಸಲಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು 25 ಸಾವಿರಕ್ಕೂ ಅಧಿಕ ಮ್ಯಾನ್‌ಹೋಲ್‌ಗಳು ಕಾರ್ಯಾಚರಿಸುತ್ತಿವೆ.
ಶೀಘ್ರ ಕಾರ್ಯಾಚರಣೆ
ಮಳೆ ನೀರನ್ನು ಒಳಚರಂಡಿ ಲೈನ್‌ಗೆ ಸಂಪರ್ಕ ಕಲ್ಪಿಸಿದ ಬಹುತೇಕ ಪ್ರಕರಣದ ಸಂಪರ್ಕವನ್ನು ಕಡಿತ ಮಾಡಿ ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.
*ಆನಂದ್ ಸಿ.ಎಲ್., ಪಾಲಿಕೆ ಆಯುಕ್ತರು
*ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.