Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Team Udayavani, Apr 23, 2024, 8:45 AM IST
ರಾಯಚೂರು: ಹನುಮ ಜಯಂತಿ ಪ್ರಯುಕ್ತ ಕೃಷ್ಣಾ ನದಿಗೆ ಮಡಿ ನೀರು ತರಲು ಹೊರಟಿದ್ದ ಭಕ್ತರ ಮೇಲೆ ವಾಹನ ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಪೆಟ್ರೊ ಕೆಮಿಕಲ್ ಹತ್ತಿರ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಘಟನೆಯಲ್ಲಿ ಅಯ್ಯನಗೌಡ (30), ಮಹೇಶ (30), ಉದಯಕುಮಾರ (30) ಗಂಭೀರ ಗಾಯಗೊಂಡು, ಶಕ್ತಿನಗರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಹೆಗ್ಗಸನಹಳ್ಳಿ ಸಮೀಪದ ಎಂಪಿಸಿಎಲ್ ಕಾಲನಿಯ 8-10 ಭಕ್ತರು ನದಿ ನೀರಲು ತರಲು ಪಾದಯಾತ್ರೆ ಮಾಡುತ್ತಿದ್ದರು. ಹಿಂದಿನಿಂದ ಬಂದ ಪಿಕಪ್ ವಾಹನ ಢಿಕ್ಕಿ ಹೊಡೆದು ಭಕ್ತರ ಮೇಲೆ ಹರಿದಿದೆ. ಮತ್ತಿಬ್ಬರಿಗೂ ಗಾಯಗಳಾಗಿದ್ದು ರಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತೆಲಂಗಾಣ ಮೂಲದ ಜಡಚರ್ಲಾದ ವಾಹನ ಇದಾಗಿದ್ದು, ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದ. ಪೊಲೀಸರು ಬೆನ್ನತ್ತಿ ಚಾಲನ ಮಧುಸೂದನ ಗೌಡನನ್ನು ವಶಕ್ಕೆ ಪಡೆದಿದ್ದಾರೆ. ಶಕ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.